ಬೆಳಗಾವಿ- ಸರ್ಕಾರದ ನೀತಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಕೆಲವರು ಕಾರಿಗೆ ಕೆಂಪು ಗೂಟ ಅಳವಡಿಸಿರುವದನ್ನು ವಿರೋಧಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ತಮ್ಮ ಕೆಂಪು ಕಾರಿಗೆ ಕೆಂಪು ಗೂಟ ಅಳವಡಿಸಿ ವಿನೂತನವಾಗಿ ಪ್ರತಿಭಟಿಸಿದ್ದಾರೆ
ಬೆಳಗಾವಿ ಜಿಲ್ಲೆಯಲ್ಲಿ ಕೆಲವು ಜನಪ್ರತಿನಿಧಿಗಳು ತಮ್ಮ ಕಾರುಗಳಿಗೆ ಕೆಂಪು ಗೂಟ ಅಳವಡಿಸುರುವದಕ್ಕೆ ಗಡಾದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಜನ ಸಾಮಾನ್ಯರಿಗೂ ಕೆಂಪು ಗೂಟ ಅಳವಡಿಸಲು ಅನುಮತಿ ಕೊಡಬೇಕು ಎನ್ನುವದು ಗಡಾದ ಅವರ ಒತ್ತಾಯವಾಗಿದೆ
ಬೆಳಗಾವಿ ರಾಜ್ಯದ ಗಣ್ಯರಿಂದ ಕಾನೂನು ಉಲ್ಲಂಘನೆ. ಆಗುತ್ತಿದೆ ಗಣ್ಯರ ಕಾರಿಗೆ ಅನಧಿಕೃತ ಕೆಂಪು, ಹಳದಿ, ಹಸಿರು ದೀಪಗಳ ಬಳಕೆ. ಮಾಡುತ್ತಿದ್ದಾರೆ ಎಂದು ಗಡಾದ ಆರೋಪಿಸಿದ್ದಾರೆ
. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್ ಈಶ್ವರಪ್ಪ, ಉಪ ಸಭಾಪತಿ ಮರಿತಿಬ್ಬೇಗೌಡ, ಐವಾನ್ ಡಿಸೋಜಾ, ಗಣೇಶ ಕಾರ್ತಿಕ, ಶಿವಶಂಕ ರೆಡ್ಡಿ, ವಿಪಕ್ಷ ನಾಯಕ ಜಗದೀಶ ಶೆಟ್ಟರ, ಅಶೋಕ ಪಟ್ಟಣ, ಸುನೀಲ್ ಕುಮಾರ್ ಅವರಿಂದ ಕಾನೂನು ಉಲ್ಲಂಘನೆ. ಆಗಿದೆ ಸಂಸದೀಯ ಕಾರ್ಯದರ್ಶಿಗಳು, ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ ಇಬ್ರಾಹಿಂ, ದೆಹಲಿ ವಿಶೇಷ ಪ್ರತಿನಿಧಿ ಸಿ.ಎಸ್ ನಾಡಗೌಡ. ಲೋಕಾಯುಕ್ತರು, ಉಪ ಲೋಕಾಯುಕ್ತರು, ರಾಜ್ಯದ ತಹಶೀಲ್ದಾರಗಳು, ಪೊಲೀಸ ಇಲಾಖೆ ಅಧಿಕಾರಿಗಳಿಂದ ಗೂಟದ ಕಾರ್ ಬಳಕೆ. ಅನಧಿಕೃತ ಟಾಪ್ ಲೈಟ್ ಬಳಕೆಯಿಂದ ಭದ್ರತಾ ವ್ಯವಸ್ಥೆಗೆ ಧಕ್ಕೆ.ಆಗಿದೆ ಎಂದು ಗಡಾದ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಸಾಂಕೇತಿಕವಾಗಿ ತಮ್ಮ ಕಾರಿಗೆ ಕೆಂಪು ದೀಪ ಅಳವಡಿಸುವ ಮೂಲಕ ಪ್ರತಿಭಟನೆ.ಮಾಡುತ್ತಿದ್ದೇನೆ ಗಣ್ಯರು ಬಳಿಸುತ್ತಿರುವ ಕೆಂಪು ಗೂಟಗಳನ್ನು ತೆರವು ಮಾಡುವವರೆಗೂ ತಮ್ಮ ಕಾರಿನ ಕೆಂಪು ಗೂಟ ತೆಗೆಯುವದಿಲ್ಲ ಎಂದು ಗಡಾದ ಎಚ್ಚರಿಕೆ ನೀಡಿದ್ದಾರೆ