ಬೆಳಗಾವಿ- ಹವಾಮಾನ ಬದಲಾವಣೆ ಯಾದರೆ ಬೇಸಿಗೆಯಲ್ಲಿ ಬಿಸಿಲಿಗೆ ಮೈಯೊಡ್ಡಲು ಗೋವಾ ಕಡಲ ತೀರಕ್ಕೆ ವಿದೇಶಿಗರು ವಲಸೆ ಬರುವದನ್ನು ನಾವು ನೋಡಿದ್ದೇವೆ ಆದ್ರೆ ವಿದೇಶಿ ಹಕ್ಕಿಗಳೂ ಸಹ ಹಿಡಕಲ್ ಜಲಾಶಯಕ್ಕೆ ಬರುತ್ತಿರುವದನ್ನು ಅರಣ್ಯ ಅಧಿಕಾರಿಯೊಬ್ಬರು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ
ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ವಿವಿಧ ದೇಶಗಳ ಬಣ್ಣ ಬಣ್ಣದ ಹಕ್ಕಿಗಳ ಚಿಲಿಪಿಲಿ ಚೆಲ್ಲಾಟ ಕ್ಯಾಮರಾದಲ್ಲಿ ಕ್ಲಿಕ್ ಆಗಿವೆ ಈ ಅರಣ್ಯ ಅಧಿಕಾರಿಯ ಕ್ಯಾಮರಾದಲ್ಲಿ ವಿದೇಶಿ ಹಕ್ಕಿಗಳ ಜೊತೆಗೆ ಡ್ಯಾಂ ನಲ್ಲಿ ಮೊಸಳೆ ಇರುವದು ಸೆರೆಯಾಗಿದ್ದು ಅಚ್ಚರಿಯ ಸಂಗತಿಯಾಗಿದೆ
ಮಂಗೋಲೀಯಾ,ಜರ್ಮನಿ,ಆಸ್ಟ್ರೇಲಿಯಾ, ಅಫಘಾನಿಸ್ತಾನ,ಶ್ರೀ ಲಂಕಾ,ಯುರೋಪ್ ಸೇರಿದಂತೆ ವಿವಿಧ ದೇಶಗಳ ಹಕ್ಕಿಗಳು ಹಿಡಕಲ್ ಜಲಾಶಯಕ್ಕೆ ವಲಸೆ ಬರುತ್ತವೆ ನವ್ಹೆಂಬರ್ ಡಿಸೆಂಬರ್ ತಿಂಗಳಲ್ಲಿ ಹಿಡಕಲ್ ಜಲಾಶಯದ ಹಿನ್ನೀರಿನ ತೀರದಲ್ಲಿ ಗೂಡು ಕಟ್ಟುವ ಈ ಹಕ್ಕಿಗಳು ಎಪ್ರಿಲ್ ತಿಂಗಳಲ್ಲಿ ತಮ್ಮ ಸದದೇಶಕ್ಕೆ ಮರಳುತ್ತವೆ.
ವಿದೇಶಿ ಹಕ್ಕಿಗಳಾದ ಭ್ರಾಮೀಣಿ ಡಕ್,ಡೋಮಿಕಲ್ ಕ್ರೇನ್,ಬ್ರೀಚ್ ಹೆಡೆಡ್ ಗೋಸ್,ಬ್ಲ್ಯಾಕ್ ಹೆಡೆಡ್ ಬಂಟಿಂಗ್ಸ,ಸೇರಿದಂತೆ ವಿವಿಧ ಜಾತಿಯ ವಿದೇಶಿ ಹಕ್ಕಿಗಳು ತಂಡೋಪ ತಂಡವಾಗಿ ಹಿಡಕಲ್ ಜಲಾಶಯದ ತೀರಕ್ಕೆ ವಲಸೆ ಬಂದು ಇಲ್ಲಿಯ ಅಹ್ಲಾದಕರ ಹವಾನ ಅನುಭವಿಸುತ್ತವೆ
ಬೆಳಗಾವಿ ಎಸಿಎಫ್ ಶ್ರೀಕಾಂತ ಖಣದಾಳೆ
ಹವ್ಯಾಸೀ ಛಾಯಾಗ್ರಾಹಕರಾಗಿದ್ದು ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ವಿದೇಶಿ ಹಕ್ಕೆಗಳ ಚಿತ್ತಾರವನ್ನು ಕ್ಲಿಕ್ಕಿಸಿದ್ದಾರೆ ,ಜೊತೆಗೆ ವಿದೇಶಿ ಹಕ್ಕಿಗಳ ವಿಹಾರಕ್ಕೆ ತೊಂದರೆ ಕೊಡಬೇಡಿ ಎನ್ನುವ ಜಾಗೃತಿಯನ್ನೂ ಸಾರ್ವಜನಿಕರಲ್ಲಿ ಮೂಡಿಸುತ್ತಿರುವದು ಪ್ರಶಂಸನೀಯ
ಅರಣ್ಯ ಅಧಿಕಾರಿ ಶ್ರೀಕಾಂತ ಖಣದಾಳೆ ಹಕ್ಕಿಗಳನ್ನು ಕ್ಲಿಕ್ಕಿಸುತ್ತಿರುವಾಗ ಮೊಸಳೆಯ ಮರಿಯೊಂದು ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಕ್ಲಿಕ್ ಆಗಿದೆ ಖಂಡಾಲೆ ಅವರ ಪಕ್ಷಿ ಪ್ರೇಮ ಪ್ರಶಂಸನೀಯ