Breaking News

ಬಿಜೆಪಿ ಬಲಪಡಿಸುವ ಅವಷ್ಯಕತೆ ಇದೆ.

ಬಿಜೆಪಿ ಬಲಪಡಿಸುವ ಅವಷ್ಯಕತೆ ಇದೆ. ಪ್ರಾಮಾಣಿಕ, ನಿಷ್ಠಾವಂತ, ಕಾರ್ಯಕರ್ತರಾಗಿ ಸುಮಾರು 20-25 ವರ್ಷಗಳಿಂದ ಪಕ್ಷದಲ್ಲಿದ್ದು ಜನಮನಗೆದ್ದ ಲಕ್ಕಪ್ಪ ಕುರನಿಂಗ ಅವರು ಬಿಜೆಪಿ ಕುಡಚಿ ಮಂಡಳ ಉಪಾಧ್ಯಕ್ಷರಾಗಿದ್ದು ನಮ್ಮ ಭಾಗದ ಭಾಜಪ ಕಾರ್ಯಕರ್ತರಿಗೆ ಆನೆಬಲ ಬಂದತಾಗಿದೆಂದು ಮಲ್ಲಿಕಾರ್ಜುನ ತೇಲಿ ಹೇಳಿದರು.
ಸಮೀಪದ ಕಪ್ಪಲಗುದ್ದಿ ಗ್ರಾಮದ ಗ್ರಾ.ಪಂ.ಕಾರ್ಯಾಲಯದಲ್ಲಿ ಹಮ್ಮಿಕೊಂಡ ಲಕ್ಕಪ್ಪ ಕುರನಿಂಗ ಇವರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಕ್ಷೇತ್ರತುಂಬೆಲ್ಲ ಪಕ್ಷವನ್ನು ಬಲಪಡಿಸಿ, ಯುವಕರನ್ನು ಹುರಿದುಂಬಿಸಿ, ಭಾಜಪ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆಂದು ಬರವಸೆಯಿಂದ ಪಕ್ಷದ ಹಿರಿಯ ನಾಯಕರು, ಹಿರಿತನ ಹೊಣೆ ಹೊರಿಸಿದಾರೆಂದು ಹೇಳಿದರು
ಈ ಸಂದರ್ಭದಲ್ಲಿ ಗಂಗಪ್ಪ ಕುರನಿಂಗ, ಮಲ್ಲಿಕಾರ್ಜುನ ಖಾನಗೌಡ, ಭರಮಪ್ಪ ಬಾಗೋಜಿ, ಹಣಮಂತ ಮಂಟೂರ, ನಿಂಗಪ್ಪ ಕುರನಿಂಗ, ಬಾಲಪ್ಪ ದಡ್ಡಿಮನಿ, ಈರಪ್ಪ ಭಂಗಿ, ಗುರು ಅಂಗಡಿ, ಯಮನಪ್ಪ ಉದ್ದಪ್ಪಗೋಳ, ಲಕ್ಕಪ್ಪ ಅಂಗಡಿ, ಮಹಾದೇವ ಬಳಗಾರ, ಗಿರಮಲ್ಲ ಕಲ್ಲಾರ, ಲಕ್ಷ್ಮಣ ಕುಡಲಗಿ ಮತ್ತಿತರು ಇದ್ದರು.

ಫೋಟೋ 5ಪಿಎಲ್‍ವಿ2
ಕಪ್ಪಲಗುದ್ದಿ ಗ್ರಾ.ಪಂ.ಕಾರ್ಯಾಲಯದಲ್ಲಿ ಭಾಜಪ ಪಕ್ಷದ ಕುಡಚಿ ಮಂಡಲ ಉಪಾಧ್ಯಕ್ಷರಾಗಿ ಆಯ್ಕೆಯಾದ ಲಕ್ಕಪ್ಪ ಕುರನಿಂಗ ಇವರನ್ನು ಸನ್ಮಾನಿಸುತ್ತಿರುವ ಗ್ರಾಮಸ್ಥರು.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *