ಬೆಳಗಾವಿ-
ಆ ಪುಟ್ಟ ಬಾಲಕ ಇನ್ನೂ ಶಾಲೆ ಕಲಿತು ನೌಕರಿ ಹಿಡಿದು ತಂದೆ ತಾಯಿನ್ನ ಚನ್ನಾಗಿ ನೊಡಿಕೊಳ್ಳಬೇಕು ಎಂದು ಸುಂದರ ಕನಸು ಕಂಡಿದ್ದ. ಸ್ನೇಹಿತರು ಜೊತೆ ಆಟವಾಡಲು ಹೋಗಿದ್ದ ಅವನ ಬಾಳಲ್ಲಿ, ವಿಧಿ ಅವನ ಬಾಳಲ್ಲಿ ಆಟವಾಡಿದೆ. ಇತ್ತ ಬಾಲಕನ ಸಾವು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು ಬಾಲಕ ಸಾವಿಗೆ ಕಾರಣ ಸತ್ಯಾಂಶ ಹೊರಗೆಡುವಲು ಪಾಲಕರು ಶಾಲೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
೧೪ ವರ್ಷದ ೮ನೇ ತರಗತಿಯ ವಿದ್ಯಾರ್ಥಿ ಪ್ರಶಾಂತ ಹುಲಮನಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ನಗರದ ಬಿ.ಕೆ ಮಾಡೆಲ್ ಶಾಲೆಯಲ್ಲಿ ಓದುತ್ತಿದ್ದ ಪ್ರಶಾಂತ ಎಂದಿನಂತೆ ನಿನ್ನೆ ಕೂಡ ಶಾಲೆಗೆ ಹೋಗಿದ್ದಾನೆ. ಆದ್ರೆ ಅದೇನಾಯಿತೋ ಗೊತ್ತಿಲ್ಲ ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿ ಪ್ರಶಾಂತ ಮರ್ಮಾಂಗಕ್ಕೆ ಪೆಟ್ಟುಬಿದ್ದ ಪರಿಣಾಮ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿ ಪ್ರಶಾಂತ ಸಾವನ್ನಪ್ಪಿದ್ದಾನೆ. ಬಾಲಕನ ಸಾವಿನ ಸುದ್ದಿಕೇಳಿ ಪಾಲಕರ ಆಕ್ರದಂದಣ ಮುಗಿಲು ಮುಟ್ಟಿದೆ. ಇನ್ನು ಬಾಲಕ ಪ್ರಶಾಂತ ಹಾಗೂ ಸ್ನೇಹಿತರು ಮದ್ಯೆ ಜಗಳವಾಗಿದೆ ಅವನ ಸಾವಿಗೆ ಸ್ನೇಹಿತರು ಕಾರಣ
ಬಾಲಕನ ಸಾವಿನ ಸತ್ಯವನ್ನ ಹೊರಹಾಕಬೇಕು ಎಂದು ಇಂದು ಪಾಲಕರು ಸೇರಿದಂತೆ ನೂರಾರು ಜನ ಬಿಕೆ ಮಾಡೆಲ್ ಶಾಲೆ ಮುಂದೆ ಪ್ರತಿಭಟನೆ ನಡೆಸಿದ್ರು.
ಇನ್ನು ಈ ಕುರಿತು ಶಾಲೆಯ ಪ್ರಿನ್ಸಿಪಲ್ ಪಾಲಕರ ಆರೋಪಗಳನ್ನು ತಳ್ಳಿಹಾಕಿದ್ದಾರೆ.ಆದ್ರೆ ತನ್ನ ಅಣ್ಣಿಗೆ ಆದ ಸ್ಥಿತಿ ಮತ್ಯಾರಿಗೂ ಬರಬಾರು ಅಂತಾ.ಪ್ರಾಶಾಂತ ಸಹೊದರಿ ಕಣ್ಣಿರಿಟ್ಟಳು.
ಕ್ಯಾಂಪ ಪೋಲಿಸ್ ಠಾಣೆಯಲ್ಲಿ ಪ್ರಕರ ದಾಖಲಿಸಿಕೊಂಡಿರುವ ಕ್ಯಾಂಪ್ ಪೋಲಿಸರು. ತನಿಖೆ ಪ್ರಾರಂಭಿಸಿದ್ದಾರೆ. ಇನ್ನು ವಿದ್ಯಾರ್ಥಿಯ ಪ್ರಕರಣವನ್ನ ಗಂಭೀರವಾಗಿಕಾರಣವಾಗಿದ ಪಾಲಕರು ಶಾಲೆ ಆವರಣದಲ್ಲಿ ಪ್ರತಿಭಟನೆ ನಡೆಸಿ ಶಾಲೆಯ ಕಿಡ ಬಾಗಿಲು ಮುರಿಯಲು ಮುಂದಾದರು. ಸಕಾಲದಲ್ಲಿ ಪೊಲಿಸ್ ರ ಮದ್ಯಸ್ಥಿಕೆಯಿಂದ ಪರಿಸ್ಥಿತಿ ಶಾಂತವಾಯಿತು.
ವಿದ್ಯಾರ್ಥಿ ಪ್ರಶಾಂತ ಸಾವಿನ ಸುದ್ದಿ ಹಲವು ಅನುಮಾನಕ್ಕೆ ಕಾರಣವಾಗಿದ್ದು ಪೊಲಿಸ್ ತನಿಖೆಯಿಂದ ಸತ್ಯಾಂಶ ತಿಳಿಯಬೇಕಾಗಿದೆ.