ಬೆಳಗಾವಿ:ಬೆಳಗಾವಿ ನೋಡಲು ಸುಂದರವಾಗಿದ್ದರೂ ಪೌರಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ ಎಂದು ರಾಜ್ಯ ಪೌರಕಾರ್ಮಿಕರ ಆಯೋಗದ ಅಧ್ಯಕ್ಷ ವೆಂಕಟೇಶ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿ ಪೌರಕಾರ್ಮಿಕರ ಶ್ರಮದಿಂದ ನೈರ್ಮಲ್ಯ ಹೆಚ್ಚಿತ್ತಿದೆ. ಕೆಲವು ಅಧಿಕಾರಿಗಳ ಉದಾಸೀನತೆಯಿಂದ ಪೌರಕಾರ್ಮಿಕರ ಕಲ್ಯಾಣ ಸಾಧಿಸಲು ಆಗಿಲ್ಲ. ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕತಿಗೆ ೧೬ ಸಾವಿರ ಸಂಬಳ ಕೊಡಲಾಗುತ್ತಿದೆ, ಆರೋಗ್ಯ ಸೌಲಭ್ಯಗಳು, ವಸತಿ ಭಾಗ್ಯ ಸಮಾಜ ಕಲ್ಯಾಣ ಇಲಾಖೆಯಿಂದ ಕೊಡಲಾಗುತ್ತಿದೆ. ಮುಖ್ಯಮಂತ್ರಿ ಅವರಿಂದ ಪೌರಕಾರ್ಮಿಕ ಕಲ್ಯಾಣ ಆಯೋಗಕ್ಕೆ ಸಾಕಷ್ಟು ಸಹಕಾರ ಸಿಕ್ಕಿದೆ. ಪೌರಕಾರ್ಮಿಕರಿಗೆ ಬೆಳಗಿನ ಉಪಹಾರಕ್ಕೆ ೨೦ ರೂಪಾಯಿ ಸರಕಾರ ಕೊಡುತ್ತಿದ್ದು, ಸ್ಥಳೀಯ ಪೌರ ಸಂಸ್ಥೆಗಳು ೨೦ ರೂ. ಕೊಡುತ್ತಿವೆ. ಬೆಳಗಾವಿ ಜಿಲ್ಲೆಯಲ್ಲಿ ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ ಕೊಡಲಾಗುತ್ತಿದೆ ಎಂದರು.
ಸಾಂಕ್ರಾಮಿಕ ರೋಗಗಳಿಗೆ ಪೌರಕಾರ್ಮಿಕರು ಸಿಲುಕುತ್ತಿದ್ದಾರೆ. ಅವರ ಬಗ್ಗೆ ಸಮಾಜ ಸಹಕಾರ ಮತ್ತು ಸಹಾನುಭೂತಿ ಹೊಂದಬೇಕಿದೆ ಎಂದರು. ಪೌರಕಾರ್ಮಿಕರಿಗರ ನಗರ ಸೃಷ್ಟಿಸಿ ಸುಸಜ್ಜಿತ ಮನೆ ಕೊಡಲು ಸಮಾಜ ಕಲ್ಯಾಣ ಇಲಾಖೆ ಪರಿಶೀಲನೆಯಲ್ಲಿದೆ ಎಂದರು.
ಬೆಳಗಾವಿಯ ಬಸ್ ನಿಲ್ಧಾಣದ ಆವರಣದಲ್ಲಿ ಮಲ ಹೊರುವ ಪದ್ದತಿ ಜಾರಿಯಲ್ಲಿದೆ ಆಯೋಗದ ಸದಸ್ಯರು ಬೆಳಗಿನ ಜಾವ ದಾಳಿ ಮಾಡಿ ಈ ವಿಷಯವನ್ನು ಪತ್ತೆ ಮಾಡಿದ್ದು ಶೀಘ್ರದಲ್ಲಿಯೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವದು ಎಂದರು
ಜಿಲ್ಲಾಧಿಕಾರಿ ಎನ್. ಜಯರಾಮ ಹಾಗೂ ಆಯೋಗದ ಕಾರ್ಯದರ್ಶಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ