ಬೆಳಗಾವಿ- ಎಂಈಎಸ್ ಆಯೋಜಿಸಿದ್ದ ಕರಾಳ ದಿನಾಚರಣೆಯಲ್ಲಿ ಭಾಗವಹಿಸಿ ವಿವಾದಕ್ಕೆ ಕಾರಣವಾಗಿರುವ ಬೆಳಗಾವಿ ಪಾಲಿಕೆ ಮೇಯರ್ ಸರೀತಾ ಪಾಟೀಲ ಉಪ ಮೇಯರ್ ಸಂಜಯ ಶಿಂದೆ ಶಾಸಕ ಸಂಬಾಜಿ ಪಾಟೀಲ ಸೇರಿದಂತೆ ಎಲ್ಲ ಎಂಈಎಸ್ ನಗರ ಸೇವಕರು ಪಾಲಿಕೆ ಕಚೇರಿಗೆ ಆಗಮಿಸಿ ಪಾಲಿಕೆಯ ಸಾಮಾನ್ಯ ಸಭೆ ನಡೆಸಲು ಮುಂದಾಗಿದ್ದಾರೆ
ಶಾಸಕ ಸಂಬಾಜಿ ಪಾಟೀಲರ ಮನೆಯಲ್ಲಿ ಸಭೆ ನಡೆಸಿ ನೇರವಾಗಿ ಪಾಲಿಕೆ ಕಚೇರಿಗೆ ಆಗಮಿಸಿದ ಅವರು ಸಾಮಾನ್ಯ ಸಭೆ ನಡೆಸಲು ನಿರ್ಧರಿಸಿದ್ದು ಸಭೆಯಲ್ಲಿ ಪಾಲ್ಗೊಳ್ಳುವಂತೆ ಕನ್ನಡ ನಗರ ಸೇವಕರಿಗೂ ದೂರವಾಣಿ ಕರೆ ಮಾಡಿ ಅವರ ದಾರಿ ಕಾಯುತ್ತಿದ್ದಾರೆ
ಪಾಲಿಕೆಯ ಪರಿಷತ್ತಿನ ಕಾರ್ಯದರ್ಶಿಗಳು ಶನಿವಾರ ನಡೆಯಬೇಕಾಗಿದ್ದ ಸಾಮಾನ್ಯ ಸಭೆಯನ್ನು ಮುಂದೂಡಿದ್ದಾರೆ ಆದರೆ ಮೇಯರ್ ಈಗ ಸಭೆ ನಡೆಸಲು ಪಾಲಿಕೆ ಕಚೇರಿಗೆ ಆಗಮಿಸಿದ್ದು ಸಭೆ ನಡೆಸಲು ಅನುಮತಿ ಕೊಡುವ ವಿಷಯದಲ್ಲಿ ಬಿಕ್ಕಟ್ಟು ಎದುರಾಗಲಿದೆ
ಸದ್ಯಕ್ಕೆ ಎಲ್ಲ ಎಂಈಎಸ್ ನಗರ ಸೇವಕರು ಮೇಯರ್ ಚೇಂಬರ್ ನಲ್ಲಿ ಸಮಾವೇಶಗೊಂಡಿದ್ದು ಕನ್ನಡ ಗುಂಪಿನ ನಗರ ಸೇವಕರ ದಾರಿ ಕಾಯುತ್ತಿದ್ದು ಮೇಯರ್ ಚೇಂಬರ್ ದಲ್ಲಿಯೇ ಸಭೆ ನಡೆಯುವದು ಖಚಿತವಾಗಿದೆ
ಈ ಸಂಧರ್ಭದಲ್ಲಿ ಮಾತನಾಡಿದ ಮೇಯರ್ ಸರೀತಾ ಪಾಟೀಲ ಕೌನ್ಸಿಲ್ ಕಾರ್ಯದರ್ಶಿಗಳು ಸಭೆ ನಡೆಸಲು ತಾಂತ್ರಿಕ ತೊಂದರೆ ಇದೆ ಎಂದು ಹೇಳಿದ್ದು ಇನ್ನೆರಡು ದಿನದಲ್ಲಿ ಸಭೆಯ ದಿನಾಂಕ ನಿಗದಿ ಮಾಡುತ್ತೇವೆ ಎಂದು ತಿಳಿಸಿದರು
ಶಾಸಕ ಸಂಬಾಜಿ ಪಾಟೀಲ ಮಾತನಾಡಿ ಸರ್ಕಾರಕ್ಕೆ ಪಾಲಿಕೆ ಸೂಪರ್ ಸೀಡ್ ಮಾಡುವ ಅಧಿಕಾರ ಇದೆ ನಾಳೆ ಮಾಡುವ ಬದಲು ಇವತ್ತೇ ಸೂಪರ್ ಸೀಡ್ ಮಾಡಲಿ ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ