ಬೆಳಗಾವಿ- ಇತ್ತೀಚಿಗೆ ಬೆಳಗಾವಿಯಲ್ಲಿ ಬಾಲಕಿಯ ಅಪಹರಣಕ್ಕೆ ಯತ್ನಿಸಿದ ಆರೋಪಿಯನ್ನು ತಿಲಕವಾಡಿ ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಲಕಿಯ ಪೋಷಕರಿಂದ ದೂರು ಸ್ವೀಕರಿಸದ ತಕ್ಷಣ ಕಾರ್ಯಾಚರಣೆ ಆರಂಭಿಸಿದ ತಿಲಕವಾಡಿ ಪೋಲೀಸರು, ಸಿಪಿಐ ದಯಾನಂದ ಶೇಗುಣಶಿ ಅವರ ನೇತ್ರತ್ವದಲ್ಲಿ,ಐಜಿಪಿ ವಿಕಾಸ್ ಕುಮಾರ್ ಮಾರ್ಗದರ್ಶನದಲ್ಲಿ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿ ಬಾಲಕಿಯ ಅಪಹರಣಕ್ಕೆ ಯತ್ನಿಸಿದ ಖದೀಮನನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಬಾಲಕಿ ಟ್ಯುಶನ್ ಮುಗಿಸಿ ಮನೆಗೆ ಹೋಗುತ್ತಿರುವಾಗ ಪುಸಲಾಯಿಸಿ ಕಿಡ್ನಾಪ್ ಮಾಡಲು ಯತ್ನಿಸಿ ಬಾಲಕಿ ಕಿರುಚಾಡಿದಾಗ ಬಾಲಕಿಯನ್ನು ಅದೇ ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದ ಆರೋಪಿ 35 ವರ್ಷದ, ಬೆಳಗಾವಿ ಮಾರುತಿ ನಗರದ ರಹವಾಸಿ, ಗಜಾನನ ಪಾಟೀಲ ಎಂಬಾತನನ್ನು ಪೋಲೀಸರು ಅರೆಸ್ಟ್ ಮಾಡಿದ್ದಾರೆ.
ಆರೋಪಿಯನ್ನು ವಶಕ್ಕೆ ಪಡೆದು ತಿಲಕವಾಡಿ ಪೋಲೀಸರು ಒಣಕೆ ಸೂತ್ರದ ಮೂಲಕ ತನಿಖೆ ಶುರು ಮಾಡಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ