ಮುಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ – ಅಮೀತ ಷಾ
ಬೆಂಗಳೂರು- ರಾಜಧಾನಿ ಬೆಂಗಳೂರಿಗೆ ಆಗಮಿಸಿದ ಬಿಜೆಪಿ ಅಧ್ಯಕ್ಷ ಅಮೀತ ಷಾ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಭಾವಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಎಂದು ಹೇಳುವ ಮೂಲಕ ಎಲ್ಲ ಅನುಮಾನಗಳಿಗೆ ತಿಲಾಂಜಲಿ ಇಟ್ಟಿದ್ದಾರೆ
ಅಮೀತ ಷಾ ಹೀಗೆ ಹೇಳುತ್ತಿದ್ದಂತೆಯೇ ಕಾರ್ಯಕರ್ತರ ಕರತಾಡನ ಮುಗಿಲು ಮುಟ್ಟಿತು ಯಡಿಯೂರಪ್ಪ ಅವರಿಗೆ ಜಯವಾಗಲಿ ಎಂದು ಘೋಷಣೆ ಕೂಗಿ ಹರ್ಷ ವ್ಯೆಕ್ತ ಪಡಿಸಿದರು
ಅಮೀತ ಷಾ ಅವರ ಬೆಂಗಳೂರು ಭೇಟಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ನಡುವಿನ ವಾಕ್ ಸಮರಕ್ಕೆ ಬ್ರೇಕ್ ಹಾಕುವದರ ಜೊತೆಗೆ ರಾಜ್ಯದ ಬಿಜೆಪಿ ಸಂಘಟನೆಗೆ ಹೊಸ ಆಯಾಮ ದೊರಕಿಸಿ ಕೊಡಲಿದೆ
ಬೆಳಗಾವಿ ಜಿಲ್ಲೆಯ ಹದಿನೆಂಟು ವಿಧಾನಸಭಾ ಮತಕ್ಷೇತ್ರಗಳ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಬೆಂಗಳೂರಿಗೆ ದೌಡಾಯಿಸಿ ಅಮೀತ ಷಾ ಬಳಿ ತಮ್ಮ ವರ್ಚಸ್ಸನ್ನು ಮಂಡಿಸಲಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ