ಬೆಳಗಾವಿ-
ಬೆಳಗಾವಿಯಲ್ಲಿ ಬಿಎಸ್ಎಫ್ ಯೋಧನೊಬ್ಬ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯ ಟಿಳಕವಾಡಿಯಲ್ಲಿರುವ ಲೇಲೇ ಮೈದಾನದ ಬಳಿ ನಡೆದಿದೆ
ಆಸ್ಸಾಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿರೀಶ ಧರೆಪ್ಪ ಕುಣ್ಣಿ ಮೃತ ದುರ್ದೈವಿಯಾಗಿದ್ದಾನೆ
ಪತ್ನಿ ಡಿಲೇವರಿಯಾದ ಹಿನ್ನಲೆಯಲ್ಲಿ ಬೆಳಗಾವಿಗೆ ಆಗಮಿಸಿದ್ದ ಗಿರೀಶ. ಟಿಳಕವಾಡಿಯ ರಾಯ್ ರಸ್ತೆಯ ತಮ್ಮ ಸ್ವಂತ ಮನೆಯಲ್ಲಿ ಯೋಧ ಶೂಟ್ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಿಲ್ಲ. ಟಿಳಕವಾಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ
