ಬೆಳಗಾವಿ-ಬಿಎಸ್ ಎನ್ ಎಲ್ ಸರಕಾರಿ ದೂರಸಂಪರ್ಕ ಕಂಪನಿ ವತಿಯಿಂದ ಸ್ಥಿರ ದೂರವಾಣಿ ಕರೆಗಳು ಭಾನುವಾರ ಸಂಪೂರ್ಣ ಉಚಿತವಾಗಿರಲಿವೆ ಎಂದು ನಿಗಮದ ಹಿರಿಯ ಮಹಾಪ್ರಬಂಧಕ ದೀಪಕ ತಯಾಲ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರತಿ ಶನಿವಾರ ಸಂಜೆ 9ರಿಂದ ಸೋಮವಾರ ಬೆಳಗಿನ ಬೆಳಗಿನವರೆಗೆ ಅನಿಯಮಿತ ದೂರವಾಣಿ ಉಚಿತ ಸಂಭಾಷಣೆ ಮಾಡುವ ನೂತನ ಯೋಜನೆ ಜಾರಿಗೆ ಬಂದಿದೆ ಎಂದರು. ಕಳೆದ ಏಳೆಂಟು ತಿಂಗಳಿಂದ ಹಾನಿ ಅನುಭವಿಸುತ್ತಿದ್ದ ಬಿಎಸ್ ಎನ್ ಎಲ್ ಈಗ ಆರ್ಥಿಕವಾಗಿ ಸುಧಾರಣೆ ಹಾದಿಯಲ್ಲಿದೆ. ಜನತೆ ಭಾನುವಾರ ೨೪ ಗಂಟೆ ಉಚಿತ ಕರೆಯ ಮಜ ಅನುಭವಿಸಬಹುದು.
ಬೆಳಗಾವಿ ನಗರದ ಸುಮಾರು ೬೩ ಸ್ಥಳಗಳನ್ನು ಹಾಟ್ ಸ್ಪಾಟ್ ಆಗಿ ಗುರುತಿಸಲಾಗುತ್ತಿದೆ. ಸಿಗ್ನಲ್ ತೊಂದರೆಯಾಗದಂತೆ ಮತ್ತು ಸೇವಾ ನ್ಯೂನ್ಯತೆ ಆಗದಂತೆ ಎಚ್ಚರ ವಹಿಸಲಾಗುತ್ತಿದೆ ಎಂದರು. ಬೆಳಗಾವಿ ನಗರದಲ್ಲಿ ಅತ್ಯುತ್ತಮ ದರ್ಜೆಯ H+ ಸಿಗ್ನಲ್ ಸೇವೆ ಪ್ರಾರಂಭವಾಗಿದ್ದು ಒಟ್ಟು ೫೬ ಪಾಯಿಂಟ್ ಗಳಲ್ಲಿ 3G ಸೇವೆ ಇದ್ದು ಸುಮಾರು 8 mbps ನಷ್ಟು ಮಾಹಿತಿ ಡೌನ್ ಲೋಡ್ ಮಾಡಬಹುದಾಗಿದೆ. ಬೆಳಗಾವಿ ಈಗ 3G internet service ಹೊಂದಿದೆ ಎಂದರು. ಬೆಳಗಾವಿ ಜಿಲ್ಲೆಯಲ್ಲಿ ದಿನಕ್ಕೆ ಒಟ್ಟು 1000GB ಗ್ರಾಹಕರಿಂದ ಡಾಟಾ ಬಳಕೆ ಆಗುತ್ತಿದೆ.
ಡಿಸಿ ಕಚೇರಿ, ಮಹಾನಗರ ಪಾಲಿಕೆ, ಅಂಬೇಡ್ಕರ್ ಉದ್ಯಾನ, ಕಿಲ್ಲಾಕೆರೆ, ಅಂಗಡಿ ಇನ್ಸ್ಟಿಟ್ಯೂಟ್ ಟ್ಯೂಟ್ ಇನ್ನಿತರೆಡೆ WiFi ಸೇವೆ ಆಯಾ ಕಚೇರಿಗಳ ಬೇಡಿಕೆ ಮತ್ತು ಅವರ ಖರ್ಚಿನಲ್ಲಿ ಒದಗಿಸಲಾಗುವುದು. ಸ್ಮಾರ್ಟ್ ಸಿಟಿಗೆ ಭಾಜನವಾದ ನಗರಕ್ಕೆ ಹಾಟ್ ಸ್ಪಾಟ್ (wi fi) ವ್ಯವಸ್ಥೆ ನೀಡಲು bsnlನಿಂದ technical ಸಹಾಯ ನೀಡಲು ಸಾಧ್ಯ ಹೊರತು ಆರ್ಥಿಕವಾಗಿ ನಮಗೆ ಸಾಧ್ಯತೆಗಳಿಲ್ಲ. ಮಹಾನಗರ ಪಾಲಿಕೆ ಆಯುಕ್ತರು ತಮ್ಮ ಕಚೇರಿ wifi ಸಂಪರ್ಕಕ್ಕೆ ಸ್ಪಷ್ಟ ಆದೇಶ ನೀಡಿದ್ದಾರೆ. ಅದರಂತೆ ಕೆಲಸ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದರು.
Check Also
ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!
ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …