ಬೆಳಗಾವಿ- ಬೆಳಗಾವಿಯ ಪ್ಯಾಟ್ಸನ್ ಗ್ರೂಪ್ ಯಾರಿಗೆ ತಾನೇ ಗೊತ್ತಿಲ್ಲ, ಬಿಟಿ ಪಾಟೀಲ ಸಾರಥ್ಯದ ಈ ಗ್ರೂಪ್ ಈಗ ದೇಶದ ಗಮನ ಸೆಳೆದಿದೆ.
ಬೆಳಗಾವಿಯ ಪ್ಯಾಟ್ಸನ್ ಗ್ರೂಪ್ ನ ಬಾಳಾಸಾಹೇಬ್ ಪಾಟೀಲ್ (ಬಿ.ಟಿ. ಪಾಟೀಲ) ಒಂದು ಕೋಟಿ ರೂ ಅನುದಾನವನ್ನು ಪ್ರಧಾನಂತ್ರಿಗಳ ಕೊರೋನಾ ಪರಿಹಾರ ನಿಧಿಗೆ ನೀಡುವ ಮೂಲಕ ಬೆಳಗಾವಿಯ ಗೌರವ ರಾಷ್ಟ್ರ ಮಟ್ಟದಲ್ಲಿ ಹೆಚ್ಚಿಸಿ ಮಾನವೀಯತೆ ಮೆರೆದಿದ್ದಾರೆ.
ಉತ್ತರ ಕರ್ನಾಟಕದಲ್ಲಿಯೇ ವ್ಯೆಯಕ್ತಿಕವಾಗಿ ಒಂದು ಕೋಟಿ ,ಅತೀ ಹೆಚ್ಚು ಧನ ಸಹಾಯ ಮಾಡಿರುವ ಬಾಳಾಸಾಹೇಬ್ ಪಾಟೀಲ್,ಉಳ್ಳವರಿಗೆ ಮಾದರಿಯಾಗಿದ್ದಾರೆ.
ದೇಶದಲ್ಲಿ ರಾಷ್ಟ್ರೀಯ ವಿಪತ್ತುಗಳು ಸಂಭವಿಸಿದ ಸಂಧರ್ಭದಲ್ಲಿ ಲಕ್ಷಾಂತರ ರೂ ಅನುದಾನವನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ,ಮಹಾಪೂರ ಬಂದ ಸಂಧರ್ಭದಲ್ಲಿ ಮುಖ್ಯಮಂತ್ರಿಗಳ,ಪರಿಹಾರ ನಿಧಿಗೆ ನೀಡಿ ಉದಾರತನ ತೋರಿಸಿರುವ ಬಿಟಿ ಪಾಟೀಲ ಪರಿವಾರ ಈಗ ಕೊರೋನಾ ಸಂಕಷ್ಟದಲ್ಲಿಯೂ ಕೈ ಜೋಡಿಸಿರುವದು ವಿಶೇಷವಾಗಿದ್ದು ಎಲ್ಲ ಉದ್ಯೋಗಪತಿಗಳಿಗೆ ಮಾದರಿಯಾಗಿದೆ
ದೇಶ ಗಂಡಾಂತರದಲ್ಲಿದೆ,ಜನ ಕಷ್ಟದಲ್ಲಿದ್ದಾರೆ,ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವೇ ಎಲ್ಲವನ್ನು ನಿಭಾಯಿಸಲು ಸಾಧ್ಯವಿಲ್ಲ, ಎಲ್ಲರಿಗೂ ಸಾಮಾಜಿಕ ಜವಾಬ್ದಾರಿ ಇದೆ,ಇದನ್ನು ಮನಗೊಂಡು ನಾನು ಪ್ರಧಾನ ಮಂತ್ರಿಗಳ ಕೊರೋನಾ ಪರಿಹಾರ ನಿಧಿಗೆ ಒಂದು ಕೋಟಿ ರೂ ಕೊಟ್ಟಿದ್ದೇನೆ,ಇಂತಹ ಕಷ್ಟದ ಕಾಲದಲ್ಲಿ ಯಾರಿಗೆ ಆರ್ಥಿಕ ಸಹಾಯ ಮಾಡುವ ಸಾಮರ್ಥ್ಯ ಇದೆಯೋ ಅವರೆಲ್ಲರು ಪುಣ್ಯದ ಸೇವೆಯಲ್ಲಿ ಕೈ ಜೋಡಿಸಬೇಕು,ಇದೇ ನಿಜವಾದ ದೇಶ ಸೇವೆ ಎಂದು ಬಾಳಾಸಾಹೇಬ ಪಾಟೀಲ ಹೇಳಿದ್ದಾರೆ.
ಬಾಳಸಾಹೇಬ ಪಾಟೀಲರ ಈ ಮಹತ್ಕಾರ್ಯಕ್ಕೆ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಮೆಚ್ಚುಗೆ ವ್ಯೆಕ್ತಪಡಿಸಿ ಅಭಿನಂಧಿಸಿದ್ದಾರೆ.
ಬಿಟಿ ಪಾಟೀಲ ಅವರು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲರ ಚಿಕಪ್ಪ ರಾಗಿದ್ದು.ಒಂದು ಕೋಟಿ ರೂಗಳ ಚೆಕ್ ನ್ನು ಅಭಯ ಪಾಟೀಲ ಮುಖಾಂತರ, ಪ್ರಧಾನ ಮಂತ್ರಿಗಳ ಕೊರೋನಾ ಪರಿಹಾರ ನಿಧಿಗೆ ನೀಡಿದ್ದಾರೆ.