ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ನಾಲ್ಕು
ಸೈನಿಟೈಸರ್ SPRAY ಮಾಡುವ ನಾಲ್ಕು ದ್ವಾರಗಳ ಅಳವಡಿಕೆ.
ಬೆಳಗಾವಿ- ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೋನಾ ವೈರಾಣು ಸೊಂಕು ಹರಡದಂತೆ ತಡೆಯಲು ಬೆಳಗಾವಿಯ ಯಶ್ವಂತ ಕಂಪನಿ ಸಿದ್ಧಪಡಿಸಿರುವ ನಾಲ್ಕು ಸೈನಿಟೈಸರ್ ಸಿಂಪಡಿಸುವ ದ್ವಾರಗಳನ್ನು ಅಳವಡಿಸಲಾಗಿದೆ.
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ನಾಲ್ಕು ಸೈನಿಟೈಸರ್ ಸ್ಪ್ರೇ ದ್ವಾರಗಳನ್ನು ಖರೀಧಿಸಿ ಜಿಲ್ಲಾ ಆಸ್ಪತ್ರೆ ಯಲ್ಲಿ ಅಳವಡಿಸುತ್ತಿದೆ.ಈಗಾಗಲೇ ಎರಡು ದ್ವಾರಗಳನ್ನು ಅಳವಡಿಸಲಾಗಿದೆ,ನಾಳೆ ಎರಡು ದ್ವಾರಗಳನ್ನು ಅಳವಡಿಸಲಾಗುವದು ಎಂದು ಬುಡಾ ಆಯುಕ್ತ ಪ್ರೀತಂ ನರಸಲಾಪೂರೆ ತಿಳಿಸಿದ್ದಾರೆ.
2ಲಕ್ಷ 40 ಸಾವಿರ ರೂ ವೆಚ್ಚದಲ್ಲಿ ನಾಲ್ಕು ಸೈನಿಟೈಸರ್ ಸ್ಪ್ರೇ ಗಳನ್ನು ಬುಡಾ ಖರೀದಿಸಿ ಜಿಲ್ಲಾ ಆಸ್ಪತ್ರೆಗೆ ಹಸ್ತಾಂತರ ಮಾಡಿದ್ದು ಭೀಮ್ಸ ಈ ನಾಲ್ಕು ಸ್ಪ್ರೇಗಳ ನಿರ್ವಹಣೆ ಮಾಡುತ್ತದೆ.
ಜಿಲ್ಲಾ ಆಸ್ಪತ್ರೆಯಲ್ಲಿ ಯಾರೇ ಪ್ರವೇಶ ಮಾಡಿದರೆ,ಅಥವಾ ಆಸ್ಪತ್ರೆಯಿಂದ ಯಾರೇ ಹೊರಗೆ ಹೋಗುವಾಗ ಅಟೋಮೇಟಿಕ್ ಸೈನಿಟೈಸರ್ ಸ್ಪ್ರೇ ಆಗುತ್ತದೆ.