ಬೆಳಗಾವಿ-ಬೆಳಗಾವಿ ಬುಡಾ ಅಧ್ಯಕ್ಷ ಸ್ಥಾನದ ಅಧಿಕಾರದ ಅವಧಿ ಸೆಪ್ಟೇಂಬರ್ ತಿಂಗಳಲ್ಲಿ ಮುಗಿಯಲಿದೆ ಬುಡಾ ಅಧ್ಯಕ್ಷ ಯುವರಾಜ ಕದಂ ತಮ್ಮ ಅಧಿಕಾರದ ಅವದಿಯನ್ನು ವಿಸ್ತರಿಸಲು ಪರದಾಡುತ್ತಿದ್ದರೆ ಇನ್ನೊದು ಕಡೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ
 ಬುಡಾ ಅಧ್ಯಕ್ಷ ಸ್ಥಾನಕ್ಕಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ,ಸುನೀಲ ಹನಮಣ್ನವರ,ಹಾಶಮ ಬಾವಿಕಟ್ಟಿ, ರಾಜದಾನಿ ಬೆಂಗಳೂರಿನಲ್ಲಿ ಲಾಬಿ ನಡೆಸಿದ್ದಾರೆ ಇತ್ತ ಬೆಳಗಾವಿಯಲ್ಲಿ ಶಾಸಕ ಫಿರೋಜ್ ಸೇಠ ತಮ್ಮ ಸಹೋದರ ರಾಜು ಸೇಠ್ ಅವರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ಜಿಲ್ಲಾ ಮಂತ್ರಿಗಳ ಮೇಲೆ ಒತ್ತಡ ಹೇರಿದ್ದಾರೆ ಎಂದು ಹೆಳಲಾಗುತ್ತಿದೆ
ಈ ವಿಷಯದಲ್ಲಿ ಜಿಲ್ಲಾ ಮಂತ್ರಿಗಳು ಜಾಣ ಮೌನ ವಹಿಸಿದ್ದಾರೆ ಜಿಲಾ ್ಲಮಂತ್ರಿಗಳು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಹಳೆಯ ಕಾರ್ಯಕರ್ತನನ್ನು ಗುರುತಿಸಿ ಆತನಿಗೆ ಬುಡಾ ಅಧ್ಯಕ್ಷ ಸ್ಥಾನ ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ
ಇನ್ನೊಂದು ಮೂಲದ ಪ್ರಕಾರ ಶಾಸಕ ಫಿರೋಜ್ ಸೇಠ ಬುಡಾ ಅಧ್ಯಕ್ಷ ಸ್ಥಾನ ತಮಗೆ ಸಿಗಬೇಕು ಇಲ್ಲವಾದರೆ ತಮ್ಮ ಸಹೋದರನಿಗೆ ಸಿಗಬೇಕು ಇಲ್ಲವಾದಲ್ಲಿ ಯುವರಾಜ ಕದಂ ಅವರೇ ಮುಂದುವರೆಯಬೆಕೆಂಬ ತ್ರೀ ಸೂತ್ರವನ್ನು ಜಿಲ್ಲಾ ಮಂತ್ರಿಗಳಮುಮದಿಟ್ಟಿದ್ದಾರೆ ಎಂದು ಹೆಳಲಾಗುತ್ತಿದೆ
ಕಾಂಗ್ರೆಸ್ ಪಕ್ಷದಲ್ಲಿ ಬುಡಾ ಅಧ್ಯಕ್ಷ ಸ್ಥಾನದ ವಿಷಯ ಈಗ ಹಗ್ಗ ಜಗ್ಗಾಟದ ಸ್ಪರ್ದೆಯಾಗಿದೆ ಯಾರ ತಾಕತು,್ತ ಕಸರತ್ತು ಹೆಚ್ಚಾಗುತ್ತದೆ ಅನ್ನೋದನ್ನು ಕಾದು ನೊಡಬೇಕಾಗಿದೆ
		
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ