ಬೆಳಗಾವಿ- ಬೆಳಗಾವಿ ನಗರದ ವಡಗಾಂವ ಖಾಸಬಾಗ ಟಿಳಕವಾಡಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಗುತ್ತಿಗೆದಾರರರು ಚರಂಡಿ ಬದಿಯಲ್ಲಿ ಜನ ಕಸ ಎಸೆಯಬಾರದು ಎನ್ನುವ ಉದ್ದೇಶದಿಂದ ದೊಡ್ಡ ದೊಡ್ಡ ಕಲ್ಲುಗಳನ್ನು ಇಟ್ಟು ಅದಕ್ಕೆ ಕುಂಕುಮ ಹಚ್ಚಿ ಮಾಲೆ ಹಾಕಿ ಉದ್ದಿನಕಡ್ಡಿ ಬೆಳಗಿ ಪೂಜೆ ನೆರವೇರಿಸುತ್ತಿರುವ ಘಟನೆ ನಡೆದಿದೆ
ಜನ ಚರಂಡಿ ಬದಿಯಲ್ಲಿ ಕಸ ಎಸೆಯುತ್ತಿರುವದನ್ನು ಗಮನಿಸಿದ ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರು ಹೊಸ ಐಡಿಯಾ ಕಂಡು ಹಿಡಿದು ಕಂಡಲ್ಲಿ ಕಲ್ಲಿಟ್ಟು ಅದಕ್ಕೆ ಪೂಜೆ ನೆರವೇರಿಸುತ್ತಿದ್ದಾರೆ
ಗಲೀಜು ಜಾಗೆಯಲ್ಲಿ ಕಲ್ಲುಗಳಿಗೆ ಪೂಜೆ ನೆರವೇರಿಸಿ ಗುತ್ತಿಗೆದಾರರು ಜನರ ಭಾವನೆಗಳ ಜೊತೆ ಚಲ್ಲಾಟವಾಡುತ್ತಿದ್ದಾರೆ ಎಂದು ಈ ಭಾಗದ ಜನ ಆರೋಪಿಸಿದ್ದಾರೆ
ಬೆಳಗಾವಿ ನಗರದ ಕೆಲವು ಪ್ರದೇಶಗಳಲ್ಲಿ ಸಾರ್ವಜನಿಕರು ಕಂಡು ಕಂಡಲ್ಲಿ ಕಸ ಎಸೆಯುತ್ತಿರುವದನ್ನು ಗಮನಿಸಿರುವ ಗುತ್ತಿಗೆದಾರರು ಕಲ್ಲುಗಳಿಗೆ ಪೂಜೆ ನೆರವೇರಿಸಿದರೆ ಜನ ಕಸ ಎಸೆಯುವದನ್ನು ನಿಲ್ಲಿಸುತ್ತಾರೆ ಎಂದು ಗಲೀಜು ಜಾಗೆಯಲ್ಲಿ ಕಲ್ಲಿಟ್ಟು ಅದಕ್ಕೆ ಪೂಜೆ ನೆರವೇರಿಸುವದು ಸರಿಯಾದ ಕ್ರಮ ಅಲ್ಲ ಅನ್ನೋದು ಈಭಾಗದ ಜನರ ಆಕ್ರೋಶವಾಗಿದೆ
ಕಂಡು ಕಂಡಲ್ಲಿ ಕಸ ಎಸೆಯುವದು ತಪ್ಪು ಆದರೆ ಕಂಡು ಕಂಡಲ್ಲಿ ಕಲ್ಲಟ್ಟು ಗಳಿಜು ಜಾಗೆಯಲ್ಲಿ ಪೂಜೆ ಮಾಡುವದು ಮಹಾ ತಪ್ಪು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ಅನೇಕ ದಾರಿಗಳಿವೆ ಅದನ್ನು ಬಿಟ್ಟು ಪಾಲಿಕೆ ಗುತ್ತಿಗೆದಾರರು ಜನರ ಭಾವನೆಗಳ ಜೊತೆ ಚಲ್ಲಾಟವಾಡಿ ವಾಮ ಮಾರ್ಗ ಹಿಡಿಯುತ್ತಿರುವದು ಖಂಡನೀಯ
ಗುತ್ತಗೆದಾರರು ಕಂಡು ಕಂಡಲ್ಲಿ ಪೂಜೆ ನೆರವೇರಿಸುವದನ್ನು ನಿಲ್ಲಿಸಲಿ ಜನ ಕಂಡು ಕಂಡಲ್ಲಿ ಕಸ ಚೆಲ್ಲುವದನ್ನು ನಿಲ್ಲಿಸಲಿ
Check Also
ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ
ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …