ಬೆಳಗಾವಿ- ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸಿದ ಬೆಳಗಾವಿ ಪಾಲಿಕೆಯ ಮಹಾಪೌರ ಸರೀತಾ ಪಾಟೀಲ ಹಾಗು ಉಪ ಮೇಯರ್ ಗೆ ಸರ್ಕಾರ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದು ಸಮಗ್ರ ವರದಿ ನೀಡುವಂತೆ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಪತ್ರ ಕೂಡಾ ಬರೆದು ನಾಡ ವಿರೋಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ
ಆಡಳಿತ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ ಪರಶಿಷ್ಟ ಜಾತಿ ಪರಶಿಷ್ಟ ಪಂಗಡದ ಅನುದಾನ ಬಳಕೆಯಾಗಿಲ್ಲ ಎಸ್ ಎಫ ಸಿ ಅನುದಾನ ಖರ್ಚಾಗಿಲ್ಲ ನಿಮ್ಮ ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು ಎಂದು ಸರ್ಕಾರ ಇಬ್ಬರಿಗೂ ನೋಟೀಸ್ ನೀಡಿದ್ದು ಮುಖ್ಯಮಂತ್ರಿಗಳ ಸಚಿವಾಲಯದಿಂದ ಫ್ಯಾಕ್ಸ ಮೂಲಕ ನೋಟೀಸ್ ಬೆಳಗಾವಿ ಪಾಲಿಕೆ ಕಚೇರಿಗೆ ತಲುಪಿದೆ ಪಾಲಿಕೆ ಅಧಿಕಾರಿಗಳು ನೋಟೀಸ್ ಸರ್ವ ಮಾಡಲು ಮೇಯರ್ ಹಾಗು ಉಪ ಮೇಯರ್ ಮನೆಗೆ ತೆರಳಿದ್ದಾರೆ
ಜೊತೆಗೆ ಸರ್ಕಾರ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದು ಎರಡು ವಾರದಲ್ಲಿ ಸಮಗ್ರ ವರದಿ ನೀಡಲು ಸೂಚಿಸಿದ್ದು ಪಾಲಿಕೆಯನ್ನು ವಜಾ ಮಾಡುವ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ