ಬೆಳಗಾವಿ- ಕಾಲ ಕೆದರಿ ಕ್ಯಾತೆ ತೆಗೆಯುವದು ನಾಡವಿರೋಧಿ ಎಂ ಈ ಎಸ್ ಚಾಳಿ ಬೆಳಗಾವಿ ನಗರದಲ್ಲಿ ವಿಧಾನ ಮಂಡಳದ ಅಧಿವೇನ ನಡೆಯುತ್ತಿರುವದು ಎಂಈಎಸ್ ನಾಯಕರಿಗೆ ಸಹಿಸಲಾಗುತ್ತಿಲ್ಲ ಅಧಿವೇಶನಕ್ಕೆ ಪರ್ಯಾಯವಾಗಿ ಸೋಮವಾರ ಮರಾಠಿ ಮಹಾ ಮೇಳಾವ್ ನಡೆಸಲು ನಿರ್ಧರಿಸಿದ್ದು ಅನುಮತಿಗಾಗಿ ಎಂ ಈ ಎಸ್ ನಾಯಕರು ಹರಸಹಾಸ ಪಡುತ್ತಿದ್ದಾರೆ
ಬೆಳಗಾವಿಯ ಲೇಲೇ ಮೈದಾನದಲ್ಲಿ ಮೇಳಾವ್ ನಡೆಸಲು ಅನುಮತಿ ನೀಡುವಂತೆ ಎಂಈಎಸ್ ನಾಯಕರು ನಗರ ಪೋಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು ಆಯುಕ್ತರು ಮೊದಲು ಮಹಾನಗರ ಪಾಲಿಕೆಯ ಅನುಮತಿ ತರುವಂತೆ ಸೂಚಿಸಿದ್ದರು ಆದರೆ ಲೇಲೇ ಮೈದಾನದಲ್ಲಿ ಕ್ರೀಡಾ ಚಟುವಟಿಕೆ ಬಿಟ್ಟು ಬೇರೆ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದು ಎಂದು ಇದೇ ಎಂಈಎಸ್ ಪಾಲಿಕೆಯಲ್ಲಿ ಠರಾವ್ ಪಾಸ್ ಮಾಡಿತ್ತು ಠರಾವ್ ಪ್ರತಿಯನ್ನು ಲಗ್ಗತ್ತಿಸಿ ಪಾಲಿಕೆ ಆಯುಕ್ತರು ಅರ್ಜಿ ತಿರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ
ಈಗ ಎಂಈಎಸ್ ತಾನು ಹಣೆದ ಬಲೆಯಲ್ಲಿ ಸಿ ಕ್ಕು ಒದ್ದಾಡುತ್ತಿದೆ ಬೇರೆ ಬೇರೆ ಮೈದಾನಗಳು ಬೇರೆ ಬೇರೆ ಸಂಘಟನೆಗಳ ಹೆಸರಿನಲ್ಲಿ ಬುಕ್ ಆಗಿವೆ ಹೀಗಾಗಿ ವ್ಯಾಕ್ಸೀನ್ ಡಿಪೋ ಮೈದಾನದಲ್ಲಿ ಅನುಮತಿ ಇಲ್ಲದೇ ಪೆಂಡಾಲ್ ಹಾಕಲು ಎಂಈಎಸ್ ನಾಯಕರು ಮುಂದಾಗಿದ್ದರು ಆದರೆ ಇದಕ್ಕೆ ಪೋಲೀಸರು ಅವಕಾಶ ನೀಡಲಿಲ್ಕ ರಾತ್ರಿಯವರೆಗೂ ಝಾಪಾಗಳು ಅನುಮತಿಗಾಗಿ ನಗರ ಪೋಲೀಸ್ ಆಯುಕ್ತರ ಕಚೇರಿಗೆ ಅಲೆದಾಡುತ್ತಿದ್ದರು
ಪ್ರತಿ ಸಲದಂತೆ ಈ ಸಲವೂ ಕೂಡಾ ಎಂಈಎಸ ತಡರಾತ್ರಿ ಅನುಮತಿ ಪಡೆಯುವದು ಅನುಮಾನ ನಾಡವಿರೋಧಿ ಎಂಈಎಸ್ ತಾನು ಹಣೆದ ಬಲೆಗೆ ಸಿಕ್ಕು ಒದ್ದಾಡುತ್ತಿದೆ