ಬೆಳಗಾವಿ-
ಸೀಮಾ ಚಂದಗಡಕರ ಎಂಬ ಮಹಿಳೆ ಕಡಿಮೆ ಜಾತಿ ಅನ್ನೋ ಕಾರಣಕ್ಕೆ ಆಕೆಯ ಗಂಡನ ಮನೆಯವರು, ಆ ಮಹಿಳೆ ಮತ್ತು ಗಂಡನ ಮೇಲೆ ನಿರಂತರ ದಬ್ಬಾಳಿಕೆ ಮಾಡುತ್ತಿದ್ದಾರೆ.
ತನ್ನ ಗಂಡನ ಮೇಲೆ ಹಾಗೂ ಆಕೇಯ ಮೇಲೆ ನಿರಂತರ ದೌರ್ಜನ್ಯವಾಗುತ್ತಿದೆ ನನಗೆ ನ್ಯಾಯ ಕೊಡಿ, ನನಗೆ ನನ್ನ ಗಂಡನನ್ನು ಉಳಿಸಿಕೊಡಿ ಅಂತಾ ಆ ಮಹಿಳೆ ಪೊಲೀಸ್ ಮುಂದೆ ನ್ಯಾಯಕ್ಕಾಗಿ ಮೊರೆ ಹೊಗಿದ್ದಾಳೆ..ಇನ್ನು ಕಡಿಮೆ ಜಾತಿಗೆಯವಳಿಗೆ ಮಕ್ಕಳು ಹುಟ್ಟಿದ್ದಾವೆ ಅನ್ನೊ ಕಾರಣ ಹೇಳಿ ಮಕ್ಕಳನ್ನೂ ಶಿಕ್ಷಣದಿಂದ ವಂಚಿಯರನ್ನಾಗಿ ಮಾಡಲು ಹೊರಟ್ಟಿದ್ದಾರೆ ಅಂತಾ ಆ ಮಹಿಳೆ ಆರೋಪ ಮಾಡುತ್ತಿದ್ದಾಳೆ ಅತ್ತೆ ಸೊಸೆ ಜಗಳ ನಡುವೆ ಇಬ್ಬರ ಮಕ್ಕಳು ಅನಾಥರಂತೆ ಬೀದಿ ಬೀದಿಯಲ್ಲಿ ಕಣ್ಣಿರುಡುತ್ತಿದ್ದಾರೆ.
ತಾಯಿಯ ಅಲೆದಾಟ ನೋಡಿ ಕಣ್ಣಿರಿಡುತ್ತಿರುವ ಇಬ್ಬರು ಮಕ್ಕಳು.ಹೆಂಡತಿಯ ಸ್ಥಿತಿ ನೋಡಿ ಅಸಹಾಯಕನಂತೆ ಕಂಗಾಲಾದ ಪತಿರಾಯ. ಹೌದು ಇಂತಹ ದೃಶ್ಯ ಕಂಡು ಬಂದಿದ್ದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಹೀಗೆ ಗಂಡ ಹಾಗೂ ಮಕ್ಕಳ ಮಕ್ಕಳ ಜೊತೆ ನ್ಯಾಯಕ್ಕಾಗಿ ಅಲೆದಾಡುತ್ತಿರುವ ಈ ಮಹಿಳೆಯ ಹೆಸರು ಶಿಮಾ ರಾಜು ಚಂದಗಡಕರ್.ಬೆಳಗಾವಿಯ ಮಾಧವಾ ರೋಡನ ಕ್ರಾಸ್ ನಂಬರ್ 1ನಿವಾಸಿ. ಕಳೆದ 12ವರ್ಷದ ಹಿಂದೆ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಪರಿಶಿಷ್ಟ ಜಾತಿ ಮಹಿಳೆಯಾದ ಶಿಮಾ ಬೆಳಗಾವಿಯ ಮರಾಠಾ ಜಾತಿಯ ರಾಜು ಚಂದಗಡಕರ್ ಜೊತೆ ಮದುವೆ ಮದುವೆಯಾದರು. ಮದುವೆಯಾಗಿ ಕೆಲವೆ ದಿನಗಳಲ್ಲಿ ಚನ್ನಾಗಿದ್ದರು. ಆದ್ರೆ ಮದುವೆಯಾದ ನಂತ್ರ ರಾಜು ಅವರ. ಅಮ್ಮ ಹಾಗೂ ರಾಜು ಸಹೊದರರಿಂದ ಜಾತಿ ನಿಂದ ನೆ ಕಿರುಕುಳ ನೀಡಲು ಶುರುಮಾಡಿದ್ದಾರೆ.ಅಲ್ಲದೆ ಅವರು ಕಂಗ್ರಾಳಯಲ್ಲಿ ಬಾಡಿಗೆ ಮನೆಗೆ ನುಗ್ಗಿ ಹಲ್ಲೆಮಡಿದ್ದಾರೆ.ಕಂಗ್ರಾಳಿಯಲ್ಲಿ ಬಾಡಿಗೆ ಮನೆಯಲ್ಲಿನ ಪಾತ್ರೆಗಳನ್ನು ತೆಗೆದುಕೊಂಡು ಹೊರಗೆ ಹಾಕಿದ್ದಾರೆ. ಇನ್ನು ಈಕೆಗೆ ಹುಟ್ಟಿದ ಮಕ್ಕಳು ಕಡಿಮೆ ಜಾತಿ ಅನ್ನೊ ಕಾರಣಕ್ಕೆ ಶಿಕ್ಷಣ ನೀಡಬೇಡಿ ಅಂತಾ ದಬ್ಬಾಳಿಕೆ ಮಾಡುತ್ತಿದ್ದಾರೆ ಅಂತಾ ಆರೋಪಿಸುತ್ತಿದ್ದಾರೆ. ಇನ್ನು ನಾವು ನಮ್ಮ ಪಾಡಿಗೆ ಇದ್ದು ಸುಖವಾಗಿ ಇರುಲು ನನ್ನ ಗಂಡನ ಮನಯರು ಬಿಡುತ್ತಿಲ್ಲ ನಮ್ಮ ಮೇಲೆ ಹಲ್ಲೆ ಮಾಡುತ್ತಿದ್ದಾರೆ ನಮಗೆ ನ್ಯಾಯ ಕೊಡಿ ಅಂತಾ ಮಾರ್ಕೇಟ್ ಪೊಲಿಸ್ ಠಾಣೆಯಲ್ಲಿ ದೂರನ್ನು ನೀಡಲಾಗಿದೆ.ಆದ್ರೂ ನ್ಯಾಯ ಸಿಗುತ್ತಿಲ್ಲಾ ಅಂತಿದ್ದಾರೆ.
ಇನ್ನು ನಾನು ನನ್ನ ಪತ್ನಿ ಚನ್ನಾಗಿದ್ದೆವೆ ಆದ್ರೆ ಅವಳು ಕಡಿಮೆ ಜಾತಿ ಅನ್ನೋ ಕಾರಣಕ್ಕೆ. ನಮ್ಮ ಮೇಲೆ ನಮ್ಮ ಅಮ್ಮ ಮತ್ತು ಸಹೊದರ .ದಬ್ಬಳಿಕೆ ಮಾಡುತ್ತಿದ್ದಾರೆ.ನನಗೆ ಈಗಾಲೆ ಎರಡು ಮಕ್ಕಳಿದ್ದು ಮತ್ತೆ ನನಗೆ ಬೇರೆ ಮದುವೆ ಮಾಡಲು ಮುಂದಾಗುತ್ತಿದ್ದಾರೆ. ಅದು ನನಗೆ ಇಷ್ಟ ಇಲ್ಲಾ. ನನ್ನ ಪತ್ನಿಯನ್ನು ಬಿಟ್ಟು ಬಾ ಅಂತಾ ಮನೆಯವರು ಹೇಳುತ್ತಿದ್ದಾರೆ.ಇಲ್ಲವಾದ್ರೆ ನಿನಗೆ ಆಸ್ತಿಯಲ್ಲಿ ಯಾವುದೇ ಪಾಲು ನೀಡಲ್ಲ ಅಂತಾ ಹೇಳುತ್ತಿದ್ದಾರೆ.ನಾನು ನನ್ನ ಪತ್ನಿಯೊಂದಿಗೆ ನಾನು ಚನ್ನಾಗಿರುತ್ತೆನೆ.ಎನ್ನುತ್ತಾರೆ ರಾಜು..
ಒಟ್ಟಿನಲ್ಲಿ ಕಡಿಮೆ ಜಾತಿ ಅನ್ನೋಕಾರಣಕ್ಕೆ ಗಂಡನಿಗೆ ಹಾಗೂ ನನಗೆ ಕಿರುಕುಳ ನೀಡುತ್ತಿದ್ದಾರೆ ಅನ್ನೋ ನೋವು ದಿನವು ಮಹಿಳೆಯನ್ನ ಕಾಡುತ್ತಿದೆ.ಇನ್ನಾದರೂ ಪೊಲೀಸ್ ಇಲಾಖೆ ಇವರ ಕುಟುಂಬಕ್ಕೆ ನ್ಯಾಯ ವದಗಿಸಿ ಕೊಡಬೇಕಾಗಿದೆ.