Breaking News

LOCAL NEWS

ಯರಝರ್ವಿ ಗ್ರಾಪಂ ಗೆ ಬೀಗ,ಪ್ರತಿಭಟನೆ

ಯರಝರ್ವಿ ಗ್ರಾಪಂ ಗೆ ಬೀಗ,ಪ್ರತಿಭಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯರಝರ್ವಿ ಗ್ರಾಮದಲ್ಲಿ ಯಾವುದೇ ರೀತಿಯ ಅಭವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಗ್ರಾಮ ಪಂಚಾಯತಿ ಪಿಡಿಓ ಸಾರ್ವಜನಿಕರ ಕೈಗೆ ಸಿಗುತ್ತಿಲ್ಲ ಎಂದು ಆರೋಪಿಸಿ ಯರಝರ್ವಿ ಗಾಮಸ್ಥರು ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟಿಸುತ್ತಿದ್ದಾರೆ ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ ಸಮಸ್ಯೆಗಳ ನಿವಾರಣೆಗೆ ಹಲವಾರು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಮೇಲಾಧಿಕಾರಿಗಳು ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಯುವವರೆಗೆ ಪ್ರತಿಭಟನೆ ನಿಲ್ಲಿಸುವದಿಲ್ಲ …

Read More »

ಬೆಳೆಹಾನಿ ಜಂಟಿ ಸಮೀಕ್ಷೆಗೆ ತಂಡ ರಚನೆ-ಜಿಲ್ಲಾಧಿಕಾರಿ

ಬೆಳಗಾವಿ: ಆಗಸ್ಟ : 09 :(ಕರ್ನಾಟಕ ವಾರ್ತೆ): ಬೆಳಗಾವಿ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳಾದ ಶ್ರೀ ಎನ್ ಜಯರಾಮ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿಕ್ಕೋಡಿ ತಾಲೂಕಿನ ಮಾಂಜರಿ ಬಳಿಯ ಕೃಷ್ಣಾ ನದಿಯ ಸೇತುವೆ, ಚಂದೂರ, ಯಡೂರ ಗ್ರಾಮದ ಜಮೀನುಗಳಿಗೆ ಜಿಲ್ಲಾಧಿಕಾರಿ ಭೇಟಿ ಮಾಡಿ ಬೆಳೆಹಾನಿ ಹಾಗೂ ನದಿ ನೀರಿನ ಮಟ್ಟವನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಸಕ ಗಣೇಶ ಹುಕ್ಕೇರಿ ಅವರು ಚಿಕ್ಕೋಡಿ ವ್ಯಾಪ್ತಿಯಲ್ಲಿ …

Read More »

ಪ್ರವಾಹ ಪರಿಸ್ಥಿ ಎದುರಿಸಲು ಆಂದ್ರದ ರಕ್ಷಣಾ ತಂಡ ಬೆಳಗಾವಿ ಜಿಲ್ಲೆಗೆ ಆಗಮನ

ಬೆಳಗಾವಿ- ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗು ರಾಯಬಾಗ ತಾಲೂಕಿನ ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಆಂದ್ರ ಪ್ರದೇಶದಿಂದ ಎನ್.ಡಿ ಆರ್ ಎಫ್ ತಂಡ ಸೋಮವಾರ ಬೆಳಿಗ್ಗೆ ಚಿಕ್ಕೋಡಿಗೆ ಆಗಮಿಸಿದೆ ನುರಿತ ಈಜುಗಾರರು ಹಾಗು ಬೋಟುಗಳ ಸಮೇತ ಆಗಮಿಸಿರುವ ಈ ತಂಡ ಚಿಕ್ಕೋಡಿ ಹಾಗು ರಾಯಬಾಗ ತಾಲೂಕುಗಳ ಪ್ರವಾಹ ಪರಿಸ್ಥಿಯ ಮೇಲೆ ನಿಗಾ ವಹಿಸಿದೆ ಜಿಲ್ಲೆಯಲ್ಲ ಪ್ರವಾಹ ಪರಿಸ್ಥಿತಿ ಎದುರಾದರೆ ರಕ್ಷಣಾ ಕಾರ್ಯಕ್ಕೆ ಈ ತಂಡವನ್ನು ನಿಯೋಜಿಸಲು ನಿರ್ಧರಿಸಲಾಗಿದೆ ಆಂದ್ರ ಪ್ರದೇಶದ …

Read More »

ಪ್ರವಾಹ ಪೀಡಿತ ಪ್ರದೇಶಗಳಿಗೆ ಡಿಸಿ ಜೈರಾಮ್ ಬೇಟಿ

ಬೆಳಗಾವಿ-ಜಿಲ್ಲಾಧಿಕಾರಿ ಎನ್ ಜೈರಾಮ್ ಅವರು ಸೋಮವಾರ ಜಿಲ್ಲೆಯ ಚಿಕ್ಕೋಡಿ,ಹಾಗು ರಾಯಬಾಗ ತಾಲೂಕುಗಳ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಶೀಲನೆ ನಡೆಸಿದರು. ಚಿಕ್ಕೊಡಿ ತಾಲೂಕಿನ ಮಾಂಜರಿ sಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದ್ದು ನದಿ ನೀರು ಗದ್ದೆಗಳಿಗೆ ನುಗ್ಗಿರುವದನ್ನು ಪರಶೀಲಿಸಿದ ಬಳಿಕ ನೀರು ಕಡಿಮೆಯಾದ ನಂತರ ಬೆಳೆಹಾನಿ ಸಮೀಕ್ಷೆ ನಡೆಸುವಂತೆ ಡಿಸಿ ಸೂಚನೆ ನೀಡಿದರು.ನಂತರ ಯಡೂರ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ಪರಶೀಲಿಸಿದರು ಈ ಸಂಧರ್ಬದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ …

Read More »

ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿರುವ ನೆರೆ ಸಂತ್ರಸ್ತರು

ಬೆಳಗಾವಿ- ಬೆಲಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮ ಕೃಷ್ಣಾ ನದಿ ತೀರದ ತೋಟಪಟ್ಟಿಯ ಮನೆಗಳಿಗೆ ನೀರು ನುಗ್ಗ5ದ ಪರಿಣಾಮ ಇಲ್ಲಿಯ ಜನ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ ಸೋಮವಾರ ಸಂಜೆ ಮತ್ತೆ ನದಿ ಪ್ರವಾಹ ಹೆಚ್ಚಾಗಿದ್ದು ನದಿ ತೀರದ ಜನ ತಮ್ಮ ಮನೆಗಳನ್ನು ಖಾಲಿ ಮಾಡಿ ಮನೆಯ ಸಾಮುಗ್ರಿಗಳನ್ನು ಸಾಗಿಸುತ್ತರುವ ದೃಶ್ಯ ಸಾಮಾನ್ಯವಾಗಿದೆ ಖಾನಾಪೂರದಲ್ಲಿಯೂ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಸೇತುವೆಯೊಂದು ಜಲಾವೃತಗೊಂಡಿದೆ ಮಲಪ್ರಭಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ …

Read More »

ಮಹಾರಾಷ್ತ್ರದಲ್ಲಿ ತಗ್ಗಿದ ಮಳೆ ಕೃಷ್ಣಾ ತೀರ ಈಗ ನಿರಾಳ…

ಬೆಳಗಾವಿ- ನೆರೆಯ ಮಹಾರಾಷ್ತ್ರದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿದ್ದ ಮಳೆ ಪ್ರಮಾಣ ಸೋಮವಾರ ಕಡಿಮೆಯಾಗಿದೆ ಹೀಗಾಗಿ ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿ ತೀರ ಈಗ ಸದ್ಯಕ್ಕೆ ನಿರಾಳವಾಗಿದೆ ಮಹಾರಾಷ್ತ್ರದಲ್ಲಿ ಮಳೆ ಪ್ರಮಾಣ ಕಡಿಮೆಯಾದರೂ ಸಹ ಕೃಷ್ಣಾ ನದಿಯ ನೀರಿನ ಮಟ್ಟ ಕಡಿಮೆಯಾಗಿಲ್ಲ.ವೇದಗಂಗಾ, ದೂದಗಂಗಾ ನದಿಗಳು ಈಗಲೂ ಊಕ್ಕಿ ಹರಿಯುತ್ತಿದ್ದು.ಯಾವುದೇ ರೀತಿಯ ಅಪಾಯ ಎದುರಾಗುವದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಠಪಡಿಸಿದೆ ಬೆಳಗಾವಿ ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಜನಜೀವನ ಅಸ್ಥವ್ಯಸ್ತವಾಗಿದ್ದು ಮಳೆಯ …

Read More »

ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾವತಾರ… ಆರು ಸಾವಿರ ಹೆಕ್ಟರ್ ಬೆಳೆ ಜಲಸಮಾಧಿ

ಬೆಳಗಾವಿ: ನೆರೆಯ ಮಹಾರಾಷ್ಟ್ರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಜಿಲ್ಲೆಯ ಕೃಷ್ಣಾ, ವೇಧಗಂಗಾ, ದೂಧಗಂಗಾ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ತೀರದ ಗ್ರಾಮಗಳು ಜಲ ಪ್ರಳಯದಿಂದ ತತ್ತರಿಸಿ ಹೋಗಿದ್ದಾರೆ. ಕೃಷ್ಣಾವತಾರದಿಂದ ನದಿ ಪಾತ್ರದ ಸುಮಾರು ಆರು ಸಾವಿರ ಹೆಕ್ಟರ್ ಬೆಳೆ ಪ್ರದೇಶ ಜಲ ಸಮಾಧಿಯಾಗಿದೆ. ಕೃಷ್ಣಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಒಳ ಹರಿವು 1 ಲಕ್ಷ 85 ಸಾವಿರ ಕ್ಯೂಸೆಕ್ಸ್ ನಷ್ಟು ಇದ್ದು, ಒಳ ಹರಿವು 2 …

Read More »

ಚ.ಕಿತ್ತೂರ ಅನಧಿಕೃತ ಕಟ್ಟಡಗಳ ತೆರವಿಗೆ ಸಚಿವರ ಸೂಚನೆ ಕಿತ್ತೂರ ಪ್ರಾಧಿಕಾರ ಸಭೆಗೆ ಶಾಸಕ ಇನಾಮದಾರ್ ಗೈರು

ಬೆಳಗಾವಿ: ಐತಿಹಾಸಿಕ ಚನ್ನಮ್ಮನ ಕಿತ್ತೂರು ಕೋಟೆಯ ನೂರು ಮೀಟರ್ ವ್ಯಾಪ್ತಿ ಪ್ರದೇಶದ ಒಳಗಡೆ ಇರುವ ಎಲ್ಲ ಅನಧಿಕೃತ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಕಿತ್ತೂರು ಪಟ್ಟಣ ಪಂಚಾಯಿತಿಗೆ ಸೂಚನೆ ನೀಡಿದ್ದಾರೆ. ಶನಿವಾರ ಚನ್ನಮ್ಮನ ಕಿತ್ತೂರಿನಲ್ಲಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಿದ ಅವರು, ಕಿತ್ತೂರು ಕೋಟೆ ಐತಿಹಾಸಿಕ ಸ್ಮಾರಕವಾಗಿದೆ. ಈ ಕೋಟೆ ಸುತ್ತಲೂ ಅನಧಿಕೃತ ಕಟ್ಟಡಗಳು ತಲೆ ಎತ್ತಿವೆ. ಇದರಿಂದ ಕಿತ್ತೂರು ಕೋಟೆ …

Read More »

ಕುಡಚಿ-ಉಗಾರ, ಚಿಂಚಲಿ-ಭಿರಡಿ, ಸೆತುವೆಗಳು ಜಲಾವೃತ

ಮಹಾರಾಷ್ಟ್ರದ ಕೊಂಕಣ ತೀರದಲ್ಲಿ ಹಾಗೂ ಕರ್ನಾಟಕದಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದರಿಂದ ಕೃಷ್ಣಾ ನದಿಗೆ ಅಪಾರ ನೀರು ಹರಿದು ಬರುತ್ತಿದೆ. ಹೀಗಾಗಿ ನದಿಯ ನೀರಿನ ಮಟ್ಟ ಹೆಚ್ಚಳಗೊಂಡು ನೆರೆಯ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸಿಕೊಡುವ ಕುಡಚಿ-ಉಗಾರ, ಚಿಂಚಲಿ-ಭಿರಡಿ, ಸೆತುವೆಗಳು ಜಲಾವೃತಗೋಂಡು ಸಂಚಾರ ಸಂಪೂರ್ಣ ಸ್ಥಗಿತಗೊಂಡಿವೆ. ಕೃಷ್ಣಾ ನದಿಯ ಒಳ ಹರಿಯು ಹೆಚ್ಚಾಗಿದ್ದರಿಂದ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಬೀತಿಯಲ್ಲಿ ಆತಂಕಕ್ಕೆ ಒಳಗಾಗಿದ್ದಾರೆ. ಶುಕ್ರವಾರ ನೀಧಾನ ಗತಿಯಲ್ಲಿ ಏರಿಕೆಯಾಗುತ್ತಿದು ಸಾಯಂಕಾಲ ನದಿ …

Read More »

ಅಥಣಿ ತಾಲೂಕಿನಲ್ಲಿ ಅಕ್ರಮ ಮರಳು ದಂಧೆ

ತಾಲೂಕಿನಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ವರ್ಗಾವಣೆಗೊಂಡು ಬೇರೆಯವರು ಅಧಿಕಾರ ವಹಿಸಿಕೊಳ್ಳುತ್ತಿದಂತೆ ತಾಲೂಕಿನಲ್ಲಿ ಅಕ್ರಮ ಮರಳು ದಂಧೆ ಗರಿ ಗೆದರಿದೆ.! ಅವ್ಯಾಹತವಾಗಿ ಮರಳು ಸಾಗಾಣಿಕೆ ಎಗ್ಗಿಲ್ಲದೇ ಸಾಗುತ್ತಿದೆ. ಅಕ್ರಮ ಮರಳು ದಂಧೆಗಾರರು ಸರಕಾರದ ನಕಲಿ ಪಾಸಗಳನ್ನು ಇಟ್ಟುಕೊಂಡು ಮರಳು ದಂಧೆಯನ್ನು ಮಾಡುವ ಮೂಲಕ ಸರಕಾರಕ್ಕೆ ಮೋಸ ಎಸುತ್ತಿದ್ದಾರೆ. ಈ ದಂಧೆಯಲ್ಲಿ ರಾಜಕೀಯ ಮುಖಂಡರು ಭಾಗಿಯಾಗಿರುವದರಿಂದ ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ. ಬುಧವಾರ ಸಂಜೆ ಪಟ್ಟಣದ ಹೊರ ವಲಯದ ಅಬ್ಬಿಹಾಳ ರಸ್ತೆಯಲ್ಲಿ ನಕಲಿ …

Read More »