ಬೆಳಗಾವಿ,-ಕೋವಿಡ್-೧೯ ಹಿನ್ನಲೆಯಲ್ಲಿ ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ಸರಕಾರದ ಮಾರ್ಗಸೂಚಿ ಪ್ರಕಾರ ಅವಕಾಶವನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು. ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ಜು.24) ನಡೆದ ಗಣೇಶೋತ್ಸವ ಮಂಡಳಗಳ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗಣೇಶೋತ್ಸವ ಮಂಡಳಿಯ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಸರಕಾರಕ್ಕೆ ಕಳಿಸಲಾಗುವುದು. ಐಸಿಎಂಆರ್ ಮಾರ್ಗಸೂಚಿ ಬಂದ ಬಳಿಕ ಮತ್ತೊಮ್ಮೆ ಎಲ್ಲ ಮಂಡಳಗಳ ಸಭೆ ಕರೆದು ಚರ್ಚೆ ನಡೆಸಲಾಗುವುದು. ಅದೇ ರೀತಿ ಮಹಾಮಂಡಳದ ಅಭಿಪ್ರಾಯಗಳನ್ನು …
Read More »16 ಜನ ಸಿಬ್ಬಂಧಿಗೆ ಸೊಂಕು ರಾಮದುರ್ಗ ಪುರಸಭೆ ಕಚೇರಿ ಸೀಲ್ ಡೌನ್…..
ಬೆಳಗಾವಿ- ಬೆಳಗಾವಿ ಜಿಲ್ಲೆ ರಾಮದುರ್ಗ ಪುರಸಭೆ ಕಚೇರಿಯ 16 ಸಿಬ್ಬಂದಿಗೆ ಸೋಂಕು ತಗಲಿದೆ,ಹೀಗಾಗಿ ಈ ಮಹಾಮಾರಿ ಕೊರೋನಾ, ರಾಮದುರ್ಗ ಪುರಸಭೆ ಕಚೇರಿಯನ್ನು ಸ್ವಾಧೀನ ಪಡಿಸಿಕೊಂಡಿದೆ.ಅದಕ್ಕಾಗಿ ಈ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ. ಬೆಳಗಾವಿ ಜಿಲ್ಲೆ ರಾಮದುರ್ಗ ಪುರಸಭೆ ಕಚೇರಿ ಸೀಲ್ಡೌನ್ ಮಾಡಲಾಗಿದೆ. ಸೀಲ್ಡೌನ್ ಆದ ಪುರಸಭೆ ಕಚೇರಿ ಎದುರು ಬಿಂದಾಸ್ ವ್ಯಾಪಾರ ನಡೆದಿದೆ. ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವ್ಯಾಪಾರ ವಹಿವಾಟು ಇಲ್ಲಿ ಜೋರಾಗಿಯೇ ನಡೆದಿದೆ. 48 ಗಂಟೆಗಳ …
Read More »ಟೀಚಿಂಗ್ ಅಷ್ಟೇ ಅಲ್ಲ ಪೇಂಟೀಂಗ್ ಗೂ ನಾವು ರೆಡಿ….!
ಬೆಳಗಾವಿ- ಈಗ ಕೋವಿಡ್ ಕಾಲ,ಶಾಲೆಗಳಿಗೆ ರಜೆ ಇದೆ,ಇಂತಹ ಸಂಧರ್ಭದಲ್ಲಿ ಗುರು ಬಳಗ ಮಜಾ ಮಾಡುತ್ತಿದೆ,ಫುಲ್ ರೆಸ್ಟ್ ಮಾಡುತ್ತಿದೆ ಅಂತಾ ನಾವು ಅಂದುಕೊಂಡಿದ್ದೇವೆ ಆದ್ರೆ ಶಾಲೆಯೊಂದರ ಗುರು ಬಳಗವೊಂದು ತಮ್ಮ ಶಾಲೆಗೆ ಈ ಸಮಯದಲ್ಲಿ ಬಣ್ಣ ಬಳಿದು ಎಲ್ಲರ ಗಮನ ಸೆಳೆದಿದೆ. ಚಿಕ್ಕೋಡಿ ಜಿಲ್ಲೆಯ ಗೋಕಾಕ್ ವಲಯದ ಮಕ್ಕಳಗೇರಿ ಕ್ಲಸ್ಟರಿನ ಪುಡಕಲಕಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಕೊವಿಡ್ ರಜಾ ಅವಧಿಗಳಲ್ಲಿ ಶಾಲೆಗಳಿಗೆ ಬಣ್ಣ ಬಳಿಯುವ ಕೆಲಸ ದಲ್ಲಿ ತಲ್ಲೀನರಾಗಿದ್ದಾರೆ. …
Read More »ಇಂದು ಗುರುವಾರವೂ, ಮುಂದುವರೆದ ಕೊರೋನಾ ದಾಳಿ ಮತ್ತೆ 214 ಸೊಂಕಿತರ ಪತ್ತೆ.
ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿಯ ಭೀತಿಗೆ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ.ಇಂದು ಗುರುವಾರವೂ ಮಹಾಮಾರಿಯ ದಾಳಿ ಮುಂದುವರೆದಿದ್ದು, ಇಂದಿನ ರಾಜ್ಯ ಹೆಲ್ತ್ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ತಾಲ್ಲೂಕುಗಳ 214 ಜನರಿಗೆ ಸೊಂಕು ದೃಡವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಇಂದು 214 ಜನರಿಗೆ ಸೊಂಕು ತಗಲಿದ್ದು ಇಂದು ಒಂದೇ ದಿನ,ಕಿಲ್ಲರ್ ಕೊರೋನಾ ವೈರಸ್ ಗೆ 4 ಜನ ಬಲಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಇವತ್ತಿನವರೆಗೆ ಸೊಂಕಿತರ ಸಂಖ್ಯೆ 1529 ಕ್ಕೇರಿದೆ ಬೆಳಗಾವಿ ಜಿಲ್ಲೆಯಲ್ಲಿ …
Read More »ಹಲ್ಲೆ ಖಂಡಿಸಿ ಭೀಮ್ಸ್ ವೈದ್ಯಕೀಯ ಸಿಬ್ಬಂಧಿಗಳ ಪ್ರತಿಭಟನೆ
ಖಬೆಳಗಾವಿ- ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಕೋವಿಡ್ ವಾರ್ಡಿನಲ್ಲಿ ನಿನ್ನೆ ರಾತ್ರಿ ವೈದ್ಯರು,ಮತ್ತು ನರ್ಸಿಂಗ್ ಸ್ಟಾಫ್ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಜಿಲ್ಲಾ ಆಸ್ಪತ್ರೆಯ ,ವೈದ್ಯರು,ನರ್ಸಗಳು,ವಾರ್ಡ ಬಾಯ್ ಗಳು ಸೇರಿದಂತೆ ಆಸ್ಪತ್ರೆಯ ಎಲ್ಲ ವೈದ್ಯಕೀಯ ಸಿಬ್ಬಂಧಿಗಳು ಭೀಮ್ಸ್ ಮೆಡಿಕಲ್ ಕಾಲೇಜು ಎದುರು ಪ್ರತಿಭಟನೆ ಆರಂಭಿಸಿದ್ದಾರೆ. ನಾವೂ ಸಹ ನಮ್ಮ ಕುಟುಂಬವನ್ನು ಬಿಟ್ಟು ಹಗಲು ರಾತ್ರಿ ಸೊಂಕಿತರಿಗೆ ಚಿಕಿತ್ಸೆ ಕೊಡುತ್ತಿದ್ದೇವೆ.ಜೀವದ ಹಂಗು ತೊರೆದು ಸೇವೆ ಮಾಡುವ ಸಂಧರ್ಭದಲ್ಲಿ ನಮ್ಮ ಮೇಲೆಯೇ ಹಲ್ಲೆ ನಡೆಯುತ್ತಿದೆ. …
Read More »ಬೆಳಗಾವಿಯಲ್ಲಿ ಅಂಬ್ಯುಲೆನ್ಸ್ ಗೆ ಬೆಂಕಿ ಪ್ರಕರಣ,ಮೂವರನ್ನು ವಶಕ್ಕೆ ಪಡೆದ ಪೋಲೀಸರು
ಬೆಳಗಾವಿ- ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಕೋವೀಡ್ ವಾರ್ಡಿನಲ್ಲಿ ಕಿಡಗೇಡಿಗಳು ನಡೆಸಿದ ಹಲ್ಲೆ ಮತ್ತು ಹಿಂಸಾಚಾರ ಪ್ರಕರಣಕ್ಕೆ ಸಮಂಧಿಸಿದೆ ಪೋಲೀಸರು ಮೂವರನ್ನು ವಶಕ್ಕೆ ಪಡೆದು,ವಿಚಾರಣೆ ಆರಂಭಿಸಿದ್ದಾರೆ. ನಿನ್ನೆ ರಾತ್ರಿ ನಡೆದ ಕಿಡಗೇಡಿಗಳ ಪುಂಡಾಟಿಕೆಗೆ ಐವರು ಜನ ಗಾಯಗೊಂಡಿದ್ದು ಒಂದು ಅಂಬ್ಯುಲೆನ್ಸ್ ಸಂಪೂರ್ಣವಾಗಿ ಭಸ್ಮವಾಗಿ ಪೋಲೀಸ್ ವಾಹನ ಸೇರಿದಂತೆ ಒಟ್ಟು ಐದು ವಾಹನಗಳು ಜಖಂಗೊಂಡಿವೆ. ಘಟನೆ ನಡೆಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೋಲೀಸರು, ಮೂವರನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ,ಬೆಳಗಾವಿಯ ಎಪಿಎಂಸಿ ಪೋಲೀಸರು ಇಡೀ …
Read More »ಬೆಳಗಾವಿಯಲ್ಲಿ ಭುಗಿಲೆದ್ದ ಆಕ್ರೋಶ ಅಂಬ್ಯುಲೆನ್ಸ್ ಗೆ ಬೆಂಕಿ
ಬೆಳಗಾವಿ – ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ರೋಶ ಭುಗಿಲೆದ್ದು ಅಂಬ್ಯುಲೆನ್ಸ್ ಗೆ ಬೆಂಕಿ ಹಚ್ಚಿದ ಆಕ್ರೋಶಿತ ಗುಂಪು,ಜಿಲ್ಲಾ ಆಸ್ಪತ್ರೆಯ ಮೇಲೆ ಕಲ್ಲು ತೂರಾಟ ನಡೆಸಿ ,ವೈದ್ಯರು, ನರ್ಸಿಂಗ್ ಸಿಬ್ಬಂಧಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೋನಾ ಸೊಂಕಿತನೊಬ್ಬ ಮೃತಪಟ್ಟ ಹಿನ್ನಲೆಯಲ್ಲಿ ನೂರಾರು ಜನರ ಗುಂಪೊಂದು ಅಥಣಿಯಿಂದ ಆಗಮಿಸಿದ ಅಂಬ್ಯುಲೆನ್ಸ್ ಗೆ ಬೆಂಕಿ ಹಚ್ವುವದರ ಜೊತೆಗೆ ಆಸ್ಪತ್ರೆಯ ಮೇಲೆ ಕಲ್ಲು ತೂರಾಟ ನಡೆಸಿ,ವೈದ್ಯರ ,ವಾರ್ಡ್ ಬಾಯ್ …
Read More »ಬೆಳಗಾವಿ ಜಿಲ್ಲೆಯಲ್ಲಿ ಇಂದು ಪತ್ತೆಯಾದ 219 ಸೊಂಕಿತರ ಡಿಟೇಲ್ ವರದಿ ಇಲ್ಲಿದೆ ನೋಡಿ
ಬೆಳಗಾವಿ ಜಿಲ್ಲೆಯಲ್ಲಿ ಇಂದು ಪತ್ತೆಯಾದ 219 ಸೊಂಕಿತರು ಯಾವ ತಾಲ್ಲೂಕಿನವರು ಗೊತ್ತಾ..? ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಚೆಲ್ಲಾಟದಿಂದ ಬೆಳಗಾವಿಯ ಜನ ತತ್ತರಿಸಿ ಹೋಗಿದ್ದಾರೆ ಇಂದು ಬುಧವಾರ ಈ ಮಹಾಮಾರಿ ವೈರಸ್ ಬೆಳಗಾವಿ ಜಿಲ್ಲೆಗೆ ಮತ್ತೆ ಬಿಗ್ ಶಾಕ್ ನೀಡಿದೆ. ಇಂದು ಬುಧವಾರ ರಾಜ್ಯ ಹೆಲ್ತ್ ಬುಲಿಟೀನ್ ಬಿಡುಗಡೆಯಾಗಿದ್ದು ಬೆಳಗಾವಿ ಜಿಲ್ಲೆಯ ಬರೋಬ್ಬರಿ 219 ಜನರಿಗೆ ಸೊಂಕು ದೃಡವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ಪ್ರತಿದಿನ ಶೇಕಡಾವಾರು ಹೆಚ್ಚುತ್ತಿದೆ,ಬೆಳಗಾವಿ ನಗರದ …
Read More »ಬೆಳಗಾವಿ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ ಸೊಂಕಿತರ ಡಬಲ್ ಸಂಚ್ಯುರಿ
ಬೆಳಗಾವಿ ಜಿಲ್ಲೆಯಲ್ಲಿ ಇಂದು ಬುಧವಾರ ಶಾಕಿಂಗ್ ಸುದ್ಧಿ ಹೊರಬಿದ್ದಿದೆ ಇವತ್ತು ಒಂದೇ ದಿನ ಬೆಳಗಾವಿ ಜಿಲ್ಲೆಯಲ್ಲಿ ಬರೊಬ್ಬರಿ 219 ಜನ ಸೊಂಕಿತರು ಪತ್ತೆಯಾಗಿದ್ದಾರೆ. ಇಂದು ಬಿಡುಗಡೆಯಾದ ರಾಜ್ಯ ಹೆಲ್ತ್ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಒಟ್ಟು 219 ಜನ ಸೊಂಕಿತರು ಪತ್ತೆಯಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ಡಬಲ್ ಸಂಚ್ಯುರಿ ಬಾರಿಸಿ 1315 ಕ್ಕೆ ಏರಿಕೆಯಾಗಿದೆ ಬೆಳಗಾವಿ ಜಿಲ್ಲೆಯ 859 ಜನರಲ್ಲಿ ಸೊಂಕು ಸಕ್ರೀಯವಾಗಿದೆ.
Read More »ಬೆಳಗಾವಿ ನಗರದಲ್ಲಿ ಇನ್ನೊಂದು ಸಬ್ ರಿಜಿಸ್ಟರ್ ಕಚೇರಿ ಮಂಜೂರು
ಬೆಳಗಾವಿ- ಬೆಳಗಾವಿ ರಾಜ್ಯದ ಎರಡನೇಯ ರಾಜಧಾನಿಯಾಗುವ ಹೊಸ್ತಿಲಲ್ಲಿದ್ದು,ಇಲ್ಲಿಯ ಸಬ ರೆಜಿಸ್ಟರ್ ಕಚೇರಿಯ ಒತ್ತಡವನ್ನು ಕಡಿಮೆ ಮಾಡಲು,ಕಂದಾಯ ಇಲಾಖೆ ಬೆಳಗಾವಿ ದಕ್ಷಿಣ ಮತಕ್ಷೇತ್ರಕ್ಕೆ ಇನ್ನೊಂದು ಸಬ್ ರೆಜಿಸ್ಟರ್ ಕಚೇರಿ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಬೆಳಗಾವಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಜಮೀನು,ಇನ್ನುಳಿದ ಆಸ್ತಿ ಖರೀದಿಸಲು ಜನ ಸರದಿಯಲ್ಲಿ ನಿಂತು ಖರೀದಿ ಮಾಡಿಸುವ ಪರಿಸ್ಥಿತಿ ಎದುರಾಗಿತ್ತು,ಇದನ್ನು ಸೂಕ್ಷ್ಮವಾಗಿ ಗಮನಿಸಿದ ಶಾಸಕ ಅಭಯ ಪಾಟೀಲ ಬೆಳಗಾವಿ ನಗರದಲ್ಲಿ ಇನ್ನೊಂದು ಸಬ್ ರೆಜಿಸ್ಟರ್ ಕಚೇರಿ ಮಂಜೂರು …
Read More »