Breaking News

Breaking News

ಚಿದಂಬರ ನಗರವನ್ನು ಮಾಡೆಲ್ ಮಾಡ್ತಾರಂತೆ ಅಭಯ ಪಾಟೀಲ್

ಬೆಳಗಾವಿ-ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆ ಹರಿಸುತ್ತಿರುವ ಶಾಸಕ ಅಭಯ ಪಾಟೀಲ ಅವರು,ತಮ್ಮ ಕ್ಷೇತ್ರದ ಚಿದಂಬರ ನಗರವನ್ನು ಮುಂದಿನ 25 ವರ್ಷಗಳ ಕಾಲ ಈ ನಗರದಲ್ಲಿ ಯಾವುದೇ ಸಮಸ್ಯೆಗಳು ಎದುರಾಗದ ಹಾಗೆ ಅಭಿವೃದ್ಧಿ ಪಡಿಸುವದಾಗಿ ವಾಗ್ದಾನ ಮಾಡಿದ್ದಾರೆ. ಸುಮಾರು ನಾಲ್ಕುವರೆ ಕೋಟಿ ರೂ ವೆಚ್ಚದಲ್ಲಿ ಚಿದಂಬರ್ ನಗರದ ಸರ್ವಾಂಗೀಣ ಅಭಿವೃದ್ಧಿಯ ಕಾಮಗಾರಿಗೆ ಶಾಸಕ ಅಭಯ್ ಪಾಟೀಲ್ ಇಂದಿಲ್ಲಿ ಚಾಲನೆ ನೀಡಿದರು ಫೆವರ್ಸ್ ರಸ್ತೆ ನಿರ್ಮಾಣ , ಅಂಡರ್ ಗ್ರೌಂಡ್ ಕೇಬಲ್ …

Read More »

50 ಸಾವಿರ ಬಾಡಿಗೆ ಸಮೇತ 25 ಟನ್ ಸಕ್ಕರೆ ಗುಳುಂ…..!

ಬೆಳಗಾವಿ- ಬೆಳಗಾವಿಯ ರೋಡ್ ಲೈನ್ಸ್ ಕಂಪನಿಯೊಂದು 50 ಸಾವಿರ ಬಾಡಿಗೆ ಪಡೆದು ಗುಜಾರಾತಿಗೆ ಮುಟ್ಟಿಸಬೇಕಾದ 25 ಟನ್ ಸಕ್ಕರೆಯನ್ನು ಗುಳುಂ ಮಾಡಿ ಮತ್ತೊಂದು ಟ್ರಾನ್ಸ್ ಪೋರ್ಟ್ ಕಂಪನಿಗೆ ಟೋಪಿ ಹಾಕಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಒಂದು ವಾರದ ಹಿಂದೆ ಕಾರವಾರದ ಸಕ್ಕರೆ ಕಾರ್ಖಾನೆ ಯೊಂದು 25 ಟನ್ ಸಕ್ಕರೆಯನ್ನು 50 ಸಾವಿರ ಬಾಡಿಗೆಗೆ ಗುಜರಾತ್ ಅಹ್ಮದಾಬಾದಿನ ಹಿಮಾಲಯ ಡ್ರಗ್ಸ್ ಕಂಪನಿಗೆ ಮುಟ್ಟಿಸುವ ಕೆಲಸವನ್ನು ಬೆಳಗಾವಿಯ ರಾಜಕಮಲ ಟ್ರಾನ್ಸಪೋರ್ಟ್ ಗೆ ಕೊಟ್ಟಿತ್ತು,ರಾಜಕಮಲ …

Read More »

ಸರ್ಕಾರ ಇದೆಯೋ..ಸತ್ತಿದೆಯೋ ಲಕ್ಷ್ಮೀ ಹೆಬ್ಬಾಳಕರ ಪ್ರಶ್ನೆ

ಬೆಳಗಾವಿ-ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದ ಪೌರ ಕಾರ್ಮಿಕನೊಬ್ಬ ವಾಹನದಿಂದ ಕೆಳಗೆ ಬಿದ್ದು ಮೃತ ಪಟ್ಟಿದ್ದು ಮೃತ ಪೌರ ಕಾರ್ಮಿಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಪೌರ ಕಾರ್ಮಿಕರು ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು. ಪೌರಕಾರ್ಮಿಕರ ಜೊತೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಧರಣಿ ಕುಳಿತು ಪೌರ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಜುಲೈ 19ರಂದು ಅಪಘಾತದಲ್ಲಿ ಮೃತಪಟ್ಟಿದ್ದ ಪೌರಕಾರ್ಮಿಕನ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.ಜೊತೆಗೆ,ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು …

Read More »

ಭೀಮ್ಸ್ ಆಸ್ಪತ್ರೆಯಲ್ಲಿ ಶವಗಳು ಅದಲ್ ಬದಲ್ ..ಕೈಂಚಿ ಕದಲ್……!

ಬೆಳಗಾವಿ- ಬೆಳಗಾವಿಯ ಭೀಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಸರಿಯಾಗಿ ಸಿಗುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬಂದ ಬೆನ್ನಲ್ಲಿಯೇ ಈಗ ಆಸ್ಪತ್ರೆಯಲ್ಲಿ ಮಹಾ ಯಡವಟ್ಟು ಆಗಿದೆ. ಕರೋನಾ ಪಾಸಿಟಿವ್ ನಿಂದ ಸಾವನ್ನಪ್ಪಿದ ಎರಡು ಮೃತದೇಹಗಳನ್ನ ಒಂದೇ ಕುಟುಂಬಕ್ಕೆ ಹಸ್ತಾಂತರ ಮಾಡಲು ಜಿಲ್ಲಾಸ್ಪತ್ರೆಯವರು ಮುಂದಾಗಿದ್ದು ಮೃತರ ಕುಟುಂಬದವರು ಈಗ ಪೋಲೀಸ್ ಠಾಣೆಯ ಮೆಟ್ಟಲೇರಿದ್ದಾರೆ. ಬೆಳಗಾವಿ ನಗರದ ಕ್ಯಾಂಪ್ ಪ್ರದೇಶದ 57 ವರ್ಷದ ವೃದ್ಧೆಯ ಶವ ಅದಲು ಬದಲು ಆಗಿದೆ. ಕಳೆದ ಶನಿವಾರ ಮೃತ …

Read More »

ಕೊರೋನಾ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ಮಾಡಿದರೆ ಕಠಿಣ ಕ್ರಮ,ಮಿನಿಸ್ಟರ್ ರಮೇಶ್ ಜಾರಕಿಹೊಳಿ ಖಡಕ್ ವಾರ್ನಿಂಗ್

ಕೋವಿಡ್-೧೯ ನಿಯಂತ್ರಣ: ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಭೆ ————————————————————- ಸಕಾಲಕ್ಕೆ ಚಿಕಿತ್ಸೆ, ಅಂಬ್ಯುಲೆನ್ಸ್ ಒದಗಿಸಲು ಸಚಿವ ರಮೇಶ್ ಜಾರಕಿಹೊಳಿ ಕಟ್ಟುನಿಟ್ಟಿನ ಸೂಚನೆ ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಕೋವಿಡ್-೧೯ ಸೇರಿದಂತೆ ಯಾವುದೇ ಬಗೆಯ ಮರಣ ಪ್ರಕರಣಗಳು ಹೆಚ್ಚಾಗದಂತೆ ಎಚ್ಚರಿಕೆ ವಹಿಸಬೇಕು. ಸಕಾಲಕ್ಕೆ ಚಿಕಿತ್ಸೆ, ಅಂಬ್ಯುಲೆನ್ಸ್ ಹಾಗೂ ಊಟೋಪಹಾರ ಒದಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಸೂಚನೆ ನೀಡಿದರು. ಕೋವಿಡ್-೧೯ ನಿಯಂತ್ರಣಕ್ಕೆ …

Read More »

ಬೆಡ್ ವ್ಯೆವಸ್ಥೆ ಹೆಚ್ಚಿಸಲು ಬೆಳಗಾವಿ ಡಿಸಿಯಿಂದ ಸಿಟಿ ರೌಂಡ್…..!

ಬೆಳಗಾವಿ-ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯವಿರುವ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಕಾರ್ಯಪ್ರವೃತ್ತರಾಗಿದ್ದಾರೆ. ನಗರದ ಇ.ಎಸ್.ಐ ಆಸ್ಪತ್ರೆ, ಮಿಲಿಟರಿ ಆಸ್ಪತ್ರೆ ಹಾಗೂ ಕ್ಯಾಂಟೋನ್ಮೆಂಟ್ ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿ ಲಭ್ಯವಿರುವ ಹಾಸಿಗೆಗಳು ಹಾಗೂ ಇತರೆ ಮೂಲಸೌಕರ್ಯಗಳನ್ನು ಖುದ್ದಾಗಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಂಬಂಧಿಸಿದ ಆಸ್ಪತ್ರೆಗಳ ಅಧಿಕಾರಿಗಳು ಮತ್ತು ವೈದ್ಯರ ಜತೆ ಸಮಾಲೋಚನೆ ನಡೆಸಿದ ಜಿಲ್ಲಾಧಿಕಾರಿಗಳು, ಸರ್ಕಾರದ ಮಾರ್ಗಸೂಚಿ ಪ್ರಕಾರ ಸೋಂಕಿತರಿಗೆ ಅಗತ್ಯವಿರುವ ಆರೈಕೆಗೆ ಎಲ್ಲ …

Read More »

ನಿಪ್ಪಾಣಿ ಸಿಪಿಐ ಗೂ ಸೊಂಕು ದೃಡ

ಬೆಳಗಾವಿ- ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಕುಗನೋಳಿ ಚೆಕ್ ಪೋಸ್ಟ್ ನಲ್ಲಿ ಕಳೆದ ಮೂರು ತಿಂಗಳಿನಿಂದ ಕರ್ತವ್ಯ ನಿಭಾಯಿಸಿದ ನಿಪ್ಪಾಣಿ ಸರ್ಕಲ್ ಇನೆಸ್ಪೆಕ್ಟರ್ ಗೂ ಕೊರೋನಾ ಸೊಂಕು ಇರುವದು ದೃಡವಾಗಿದೆ. ಸೊಂಕು ದೃಡವಾಗಿರುವ ನಿಪ್ಪಾಣಿ ಸಿಪಿಐ ಅವರು ಕಳೆದ ಐದು ದಿನಗಳದ ಕ್ವಾರಂಟೈನ್ ನಲ್ಲಿ ಇದ್ದರು,ಅವರಿಗೆ ಸೊಂಕಿನ ಯಾವುದೇ ಲಕ್ಷಣ ಗಳು ಕಂಡು ಬಂದಿಲ್ಲ ಆದ್ರೆ ಸೊಂಕು ಇರುವದು ದೃಡವಾಗಿದೆ. ನಿಪ್ಪಾಣಿ ಸಿಪಿಐ ಅವರು ಕುಗನೋಳಿ ಚೆಕ್ ಪೋಸ್ಟ್ ಸೇರಿದಂತೆ ಸ್ಟೇಶನ್ …

Read More »

ಇಂದು ಸಂಡೇ ಲಾಕ್ ಡೌನ್ ನಡುವೆ ಬೆಳಗಾವಿ ಜಿಲ್ಲೆಯ 87 ಜನರಿಗೆ ಸೊಂಕು

ಬೆಳಗಾವಿ- ಕೊರೋನಾ ಚೆಲ್ಲಾಟ ಬೆಳಗಾವಿ ಜಿಲ್ಲೆಯ ಜನಜೀವನವನ್ನು ಬುಡಮೇಲು ಮಾಡಿದೆ ಬೆಳಗಾವಿ ಜಿಲ್ಲೆಯಲ್ಲಿ ಪ್ರತಿ ದಿನವೂ ಮಹಾಮಾರಿ ವೈರಸ್ ದಾಳಿ ಮಾಡುತ್ತಲೇ ಇದ್ದು ಇಂದು ಭಾನುವಾರ ಬಿಡುಗಡೆಯಾದ ರಾಜ್ಯ ಹೆಲ್ತ್ ಬುಲಿಟೀನ್ ನಲ್ಲಿ ಜಿಲ್ಲೆಯ 87 ಜನರಿಗೆ ಸೊಂಕು ದೃಡವಾಗಿದೆ. ಇಂದು ಸಂಡೇ ಲಾಕ್ ಡೌನ್ ನಡುವೆಯೂ ಬೆಳಗಾವಿ ಜಿಲ್ಲೆಯಲ್ಲಿ 87 ಸೊಂಕಿತರು ಪತ್ತೆಯಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ಸಾವಿರ ಗಡಿ ದಾಟಿ 1013 ಕ್ಕೇ ಏರಿಕೆಯಾಗಿದೆ ಇಂದು …

Read More »

ಕೋವೀಡ್ ಚಿಕಿತ್ಸೆ ಆಗಲಿ ಬೆಟರ್….ಸಿಎಂ ಗೆ ಸತೀಶ್ ಜಾರಕಿಹೊಳಿ ಬರೆದ್ರು ಲೆಟರ್….!

  ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸಾ ಸೌಲಭ್ಯಗಳನ್ನು ಹೆಚ್ಚಿಸುವಂತೆ ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ. ಬೆಳಗಾವಿ ಜಿಲ್ಲೆಯ ತಾಲ್ಲೂಕಾ ಆಸ್ಪತ್ರೆಗಳನ್ನು ಕೋವೀಡ್ ಆಸ್ಪತ್ರೆಗಳನ್ನಾಗಿ ಪರಿವರ್ತನೆ ಮಾಡಬೇಕು,ಜಿಲ್ಲೆಯ ಎಲ್ಲ ಹೋಬಳಿಗಳಲ್ಲಿ ಕೋವೀಡ್ ಕೇರ್ ಸೆಂಟರ್ ಗಳನ್ನು ಆಭಿಸಬೇಕು,ಆರೋಗ್ಯ ಇಲಾಖೆಯಲ್ಲಿ ಖಾಲಿ ಉಳಿದಿರುವ ಎಲ್ಲ ಹುದ್ದೆಗಳನ್ನು ತುಂಬ ಬೇಕು,ಎಲ್ಲ ತಾಲ್ಲೂಕುಗಳಿಗೆ ಎರಡು ಹೆಚ್ಚುವರಿ ಅಂಬ್ಯುಲೆನ್ಸ್ ಗಳನ್ನು ನೀಡಬೇಕು ಬೆಳಗಾವಿ ಜಿಲ್ಲೆಯಲ್ಲಿ ಕೇವಲ ಎರಡು ಕೋವಿಡ್ …

Read More »

ಲಾಕ್ ಡೌನ್ ದಾಗ ಸಿಕ್ಕ ,ಗಟರ್ ಅಮಾಸಿ ಗೊಟಕ್ ಅಂತು….!

ಬೆಳಗಾವಿ- ಉತ್ತರ ಕರ್ನಾಟಕದಾಗ ಗಟರ್ ಅಮಾಸಿ ಅಂದ್ರ ಫುಲ್ ಫೇಮಸ್ ಆದ್ರ ಈ ಬಾರಿಯ ಗಟರ್ ಅಮಾಸಿ ಲಾಕ್ ಡೌನ್ ದಾಗ ಸಿಕ್ಕ್ ಗೊಟಕ್ ಅಂತ್ರಿ ಯಪ್ಪಾ….. ಇವತ್ತ ಸಂಡೇ ಚಿಕನ್ ಮಟನ್ ಪಾರ್ಟಿ ಮಾಡಬೇಕು,ಅಂತಾ ಬಾಳ ಜನ ಪ್ಲ್ಯಾನ್ ಮಾಡ್ಕೊಂಡಿದ್ರು,ಆದ್ರ ಇವತ್ತ ಬೆಳಗಾವ್ಯಾಗ ಖಡಕ್ ಲಾಕ್ ಡೌನ್ ಐತಿ,ಹಿಂಗಾಗಿ ಗಟರ್ ಅಮಾಸಿ ಮಾಡಾವ್ರ,ಚಿಕನ್ ಎಲ್ಲಿ ಸಿಗತೈತಿ,ಮಟನ್ ಎಲ್ಲಿ ಸಿಗತೈತಿ ಅಂತಾ ತಿರಗ್ಯಾಡಾಕತಾರ್ರೀಪಾ. ಬೆಳಗಾವ್ಯಾಗ ಪೋಲೀಸ್ರು ಇವತ್ತ್ ಖಡಕ್ ಲಾಕ್ …

Read More »