ಬೆಳಗಾವಿ-ಬೆಳಗಾವಿಗೆ ಬಂಪರ್ ಲಾಟರಿ ಯಾಕಂದ್ರೆ ಸುವರ್ಣಸೌಧಕ್ಕೆ ಮತ್ತಷ್ಟು ಕಚೇರಿಗಳನ್ನು ಸ್ಥಳಾಂತರ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ಬೆಳಗಾವಿಯ ಸುವರ್ಣ ಸೌಧಕ್ಕೆ ಮಾಹಿತಿ ಆಯೋಗದ ಕಚೇರಿ ಸ್ಥಳಾಂತರ ಮಾಡಿದ ಬೆನ್ನಲ್ಲಿಯೇ ಒಂದು ವಿಭಾಗಮಟ್ಟದ ಕಚೇರಿ ಹಾಗು 23 ಕಚೇರಿಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ಪ್ರವಾಸೋದ್ಯಮ ಇಲಾಖೆಯ ಕಚೇರಿ ಸೇರಿದಂತೆ ,ಹಿರಿಯ ಭೂ ವಿಜ್ಞಾನ ಸಹಕಾರಿ ಸಂಘಗಳ ಲೆಕ್ಕಪರಿಶೋಧನೆ,ಕೈಮಗ್ಗ ಜವಳಿ,ಜಂಟೀ ನಿರ್ದೇಶಕರ ಕಚೇರಿ ವಿವಿಧ ನಿಗಮಗಳ ಕಚೇರಿ ಸೇರಿದಂತೆ …
Read More »ಸಂಪಿಗೆ ಹೂ ಬೆಳೆದು,ನೊಂದ ರೈತನ ಆತ್ಮಹತ್ಯೆ
ಬೆಳಗಾವಿ- ಅರ್ದ ಎಕರೆ ಭೂಮಿಯಲ್ಲಿ ಸಂಪಿಗೆ ಹೂ ಬೆಳೆದು,ಹೂವಿಗೆ ಸರಿಯಾದ ಬೆಲೆ ಬಾರದೇ ನೊಂದ ರೈತನೊಬ್ಬ ಹೊಲದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಲಗಾ ಗ್ರಾಮದಲ್ಲಿ ನಡೆದಿದೆ. ಹಲಗಾ ಗ್ರಾಮದ ಮಾರುತಿ ಭರಮಾ ಬೆಳಗೂಚೆ 63 ಎಂಬ ರೈತ ಹೊದಲ್ಲಿದ್ದ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ರೈತ ಸಾಲ ಮಾಡಿ ಸಂಪಿಗೆ ಹೂ ಬೆಳೆದಿದ್ದ ಬೆಳೆ ಚೆನ್ನಾಗಿ ಬಂದಿತ್ತು ಆದರೆ ಬೆಲೆ ಸಿಗದ ಕಾರಣ ಮನನೊಂದ ರೈತ …
Read More »ಎಂ ಜಿ ಹಿರೇಮಠ ಬೆಳಗಾವಿ ಜಿಲ್ಲಾಧಿಕಾರಿ
ಬೆಳಗಾವಿ-ಬೆಳಗಾವಿ ಜಿಲ್ಲಾಧಿಕಾರಿ ಎಸ್ ಬಿ ಬೊಮ್ಮನಹಳ್ಳಿ ಅವರು ನಾಳೆ ಮಂಗಳವಾರ ಸೇವಾ ನಿವೃತ್ತಿಹೊಂದಲಿದ್ದು,ಎಂ ಜಿ ಹಿರೇಮಠ ಅವರನ್ನು ಬೆಳಗಾವಿ ಜಿಲ್ಲಾಧಿಕಾರಿಯನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂ ಜಿ ಹಿರೇಮಠ ಅವರು ಗದಗ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು ಇವರು ಮೂಲತಹ ಕೆಕೆ ಕೊಪ್ಪ ಗ್ರಾಮದವರು ಎಂದು ತಿಳಿದು ಬಂದಿದೆ.
Read More »ಇನ್ನೊಂದು ತಿಂಗಳು,ಯಲ್ಲಮ್ಮ, ಮಾಯಕ್ಕ,ದೇವಿ ದರ್ಶನ ಇಲ್ಲ.
ಬೆಳಗಾವಿ- ನೆರೆಯ ಮಹಾರಾಷ್ಟ್ರ ಮತ್ತು ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಇನ್ನೂ ಒಂದು ತಿಂಗಳು ಭಕ್ತರಿಗೆ ದರ್ಶನವಿಲ್ಲ. ಜುಲೈ 31ರ ವರೆಗೂ ಬೆಳಗಾವಿ ಜಿಲ್ಲೆಯ ಎರಡು ದೇವಸ್ಥಾನಗಳಿಗೆ ಭಕ್ತರ ದರ್ಶನಕ್ಕೆ ನಿಷೇಧ ಮಾಡಲಾಗಿದೆ. ಬೆಳಗಾವಿ ಜಿಲ್ಲೆ ಸವದತ್ತಿಯಲ್ಲಿರುವ ಪ್ರಮುಖ ಶಕ್ತಿಪೀಠ ಯಲ್ಲಮ್ಮದೇವಿ ದೇವಸ್ಥಾನ,ಮತ್ರು ರಾಯಬಾಗದ ಚಿಂಚಲಿ ಮಾಯಕ್ಕಾದೇವಿ ದರ್ಶನವಿಲ್ಲ ಎಂದು ಬೆಳಗಾವಿ ಡಿಸಿ ಡಾ.ಎಸ.ಬಿ.ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ. ಜೂನ 30ರವರೆಗೆ ಇದ್ದ ನಿಷೇಧ ಜುಲೈ …
Read More »ಯುವರಾಜನ ಲಂಚ್…..ಸಾಹುಕಾರ್ ಪಂಚ್…..!
ಬೆಳಗಾವಿ- ಎಪಿಎಂಸಿ ಅದ್ಯಕ್ಷ ಯುವರಾಜ್ ಕದಂ ಇಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಸಾಹುಕಾರ್ ಗೆ ಎಪಿಎಂಸಿಯಲ್ಲಿ ಔತನಕೂಟ ಏರ್ಪಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಇಂದು ಮದ್ಯಾಹ್ನ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಎಪಿಎಂಸಿ ಗೆ ಭೇಟಿ ನೀಡಿ ಯುವರಾಜ್ ಕದಂ ಅವರ ಜೊತೆ ಲಂಚ್ ಮಾಡಿದ್ರು. ಯುವರಾಜ್ ಕದಂ,ರಮೇಶ್ ಸಾಹುಕಾರ್ ಜೊತೆ ಲಂಚ್ ಮಾಡುವದರ ಜೊತೆ ಪ್ರತ್ಯೇಕವಾಗಿ ಕಾಲಕಳೆದರು.ಯುವರಾಜ್ ಕದಂ ಅವರು ಸಚಿವ …
Read More »ಚೈಲ್ಡೀಶ್ ಹೇಳಿಕೆಗೆ ಪ್ರತಿಕ್ರಿಯಿಸಲು,ನನ್ನ ಹತ್ತಿರ ಸಮಯವೂ ಇಲ್ಲ,ನನಗೆ ಇಂಟ್ರೆಸ್ಟೂ ಇಲ್ಲ- ಹೆಬ್ಬಾಳಕರ
ಬೆಳಗಾವಿ- ನಾನು ನನ್ನ ಕ್ಷೇತ್ರದಲ್ಲಿ ತುಂಬಾ ಬ್ಯುಸಿ ಇದ್ದೇನೆ,ಯಾರ್ಯಾರೋ ಹೇಳಿಕೆ ಕೊಡ್ತಾರಂತ ನಾನು ಪ್ರತಿಕ್ರಿಯಸಲ್ಲ ,ಚೈಲ್ಡೀಶ್ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವದಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿಗೆ ಲಕ್ಷ್ಮೀ ಹೆಬ್ಬಾಳಕರ ಟಾಂಗ್ ಕೊಟ್ಟಿದ್ದಾರೆ. ತೈಲಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ, ಮಾದ್ಯಮಗಳ ಜೊತೆ ಮಾತನಾಡಿದ ಅವರು,ಯುವರಾಜ್ ಕದಂ ಅವರನ್ನು ಎಪಿಎಂಸಿ ಅದ್ಯಕ್ಷರನ್ನಾಗಿ ಮಾಡಿದ್ದು ನಾನೇ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ ಎಂದು ಕೇಳಿದಾಗ ,ಇದೊಂದು …
Read More »ಯುವರಾಜ್ ಕದಂ ಅವರನ್ನು ಎಪಿಎಂಸಿ ಅದ್ಯಕ್ಷ ಮಾಡಿದ್ದು ನಾನೇ- ರಮೇಶ್ ಜಾರಕಿಹೊಳಿ
ಬೆಳಗಾವಿ- ಬೆಳಗಾವಿ ಎಪಿಎಂಸಿ ಯಲ್ಲಿ ಬಿಜೆಪಿ ಕೇವಲ ಒಂದೇ ಸ್ಥಾನ ಹೊಂದಿತ್ತು,ಹೀಗಾಗಿ ಅಲ್ಲಿ ಏನೂ ಮಾಡಲು ಸಾದ್ಯವಿರಲಿಲ್ಲ,ಯುವರಾಜ್ ಕದಂ ಅವರನ್ನು ಅದ್ಯಕ್ಷ ಮಾಡಿದ್ದು ನಾನೇ ಎಂದು ಜಲಸಂಪನ್ಮೂಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾಡಿದ ಅವರು ಹೆಚ್ ವಿಶ್ವನಾಥ,ಮತ್ತು ಉಮೇಶ್ ಕತ್ರಿ ಅವರಿಗೆ ಸ್ಥಾನಮಾನ ನೀಡುವ ಕುರಿತು ಬಿಜೆಪಿ ಹೈಕಮಾಂಡ ನಿರ್ಧರಿಸುತ್ತದೆ ನಾನು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದೇನೆ ಈ ಕುರಿತು ಏನೂ …
Read More »ಬೆಳಗಾವಿ ಪೋಲೀಸ್ ಕಮಿಷ್ನರ್ ಕೆ ತ್ಯಾಗರಾಜನ್ ಅಧಿಕಾರ ಸ್ವೀಕಾರ
ಬೆಳಗಾವಿ-ರಾಜ್ಯದ ಎರಡನೇಯ ರಾಜಧಾನಿ ಎಂದೇ ಕರೆಯಲ್ಪಡುವ, ಬೆಳಗಾವಿ ನಗರದ ಪೋಲೀಸ್ ಕಮಿಷ್ನರ್ ಆಗಿ ಡಾ ಕೆ ತ್ಯಾಗರಾಜನ್ ಅವರು ಇಂದು ಅಧಿಕಾರ ಸ್ವೀಕರಿಸಿದರು. ನಿನ್ನೆ ಸಂಜೆ ಬೆಳಗಾವಿ ನಗರಕ್ಕೆ ಆಗಮಿಸಿದ್ದ ಅವರು ಇಂದು ಅಧಿಕಾರ ಸ್ವೀಕರಿಸಿದರು.ಬೆಳಗಾವಿಯ ಪೋಲೀಸ್ ಕಮಿಷ್ನರ್ ಆಗಿ ಬೆಳಗಾವಿಯಲ್ಲಿ ಸೇವೆ ಸಲ್ಲಿಸಿದ ಲೋಕೇಶ್ ಕುಮಾರ ಅವರು ಡಾ.ಕೆ ತ್ಯಾಗರಾಜನ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು
Read More »ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೆ 8 ಜನ ಸೊಂಕಿತರ ಪತ್ತೆ
ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಕರ್ಮಕಾಂಡ ಮುಂದುವರೆದಿದೆ,ಜಿಲ್ಲೆಯ ಜನ ಸಂಡೇ ಮೂಡ್ ನಲ್ಲಿ ಇರುವಾಗಲೇ ಈ ಮಹಾಮಾರಿ ಹೊಡೀ ಒಂಬತ್ತ್ ಎಂದಿದೆ,ಯಾಕಂದ್ರೆ ಇವತ್ತು ಒಂದೇ ದಿನ 8 ಜನ ಸೊಂಕಿತರು ಪತ್ತೆಯಾಗಿದ್ದಾರೆ. ಇಂದು ಭಾನುವಾರದ ಹೆಲ್ತ್ ಬುಲೀಟೀನ್ ಬಿಡುಗಡೆಯಾಗಿದ್ದು,ಈ ಬುಲೀಟಿನ್ ನಲ್ಲಿ ಜಿಲ್ಲೆಯಲ್ಲಿ ಮತ್ತೆ 8 ಜನರಿಗೆ ಸೊಂಕು ಇರುವದು ದೃಡವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ರಾಜ್ಯ ಹೆಲ್ತ್ ಬುಲೀಟೀನ್ ಪ್ರಕಾರ 326 ಕ್ಕೇರಿದಂತಾಗಿದೆ. ಇಂದು ಪತ್ತೆಯಾದ 9 …
Read More »ಗೋಕಾಕಿನಲ್ಲಿ ಅಭಿವೃದ್ಧಿಯ ಪರ್ವ….!
*ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಸಚಿವ ರಮೇಶ್ ಜಾರಕಿಹೊಳಿ.* ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಾಜ್ಯದ ಜಲಸಂಪನ್ಮೂಲ ಸಚಿವ *ರಮೇಶ್ ಜಾರಕಿಹೊಳಿ* ಯವರು ಗೋಕಾಕ್ನ ಜನತಾ ಫ್ಲಾಟ್ ನಲ್ಲಿ ನಿರ್ಮಿಸಿರುವ *ಅಲೆಮಾರಿಗಳಿಗಾಗಿ ನಿರ್ಮಿಸಿರುವ ವಸತಿ ನಿಲಯ* ಗಳನ್ನು ಇಂದು ಉದ್ಘಾಟಿಸಿದರು. ಗೋಕಾಕ್ ನಗರದ *ಸರ್ಕಾರಿ ಪದವಿ ಪೂರ್ವ ಕಾಲೇಜ್ ಕಟ್ಟಡ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ* ನೆರವೇರಿಸಿದ ಸಚಿವರು ಅಂಗವಿಕಲರಿಗೆ *ತ್ರಿಚಕ್ರ ವಾಹನ* ಗಳನ್ನು ವಿತರಿಸಿದರು ಮಾರ್ಕಂಡೆಯ ನಗರದಲ್ಲಿ *13/11 …
Read More »