ಬೆಳಗಾವಿ- ಚುನಾವಣೆಗೆ ಸ್ಪರ್ದಿಸಿದ ಅಭ್ಯರ್ಥಿಗಳು ಕೋಟಿ ಕೋಟಿ ಖರ್ಚು ಮಾಡಿ ಚಡ್ಡಿ ಹರ್ಕೋಳುವ ಜಮಾನಾದಲ್ಲಿ ಓಟು ಕೇಳಲು ಹೋದ ಅಭ್ಯರ್ಥಿಗೆ ಮತದಾರರೇ ನೋಟು ಕೊಟ್ಟು ಆತನ ಜೋಳಿಗೆ ತುಂಬಿಸುತ್ತಿರುವ ದೃಶ್ಯ ನೀವು ಖಾನಾಪೂರ ಕ್ಷೇತ್ರದಲ್ಲಿ ನೋಡಬಹುದಾಗಿದೆ ಖಾನಾಪೂರ ಕ್ಷೇತ್ರದಿಂದ ಎಂಈಎಸ್ ಬಂಡುಖೋರ ಅಭ್ಯರ್ಥಿಯಾಗಿ ಸ್ಪರ್ದಿಸಿರುವ ವಿಲಾಸ ಬೆಳಗಾಂವಕರ ಅವರು ಕ್ಷೇತ್ರದಲ್ಲಿ ಮತಯಾಚನೆ ಮಾಡಲು ಹೋದ ಸಂಧರ್ಭದಲ್ಲಿ ಮತದಾರರು ನಮ್ಮ ದುಡ್ಡಿನಲ್ಲೇ ಇಲೆಕ್ಷನ್ ಮಾಡಿ ಎಂದು ನೂರು ,ಐನೂರು,ಸಾವಿರದ ನೋಟುಗಳನ್ನು …
Read More »ನಿವೇ ಮುಂದಿನ ಪ್ರಧಾನಿಯಾಗಿ ಎಂದ ಸಭಿಕ….ಸದ್ಯಕ್ಕೆ ಮತ್ತೊಮ್ಮೆ ಮುಖ್ಯಮಂತ್ರಿ ಮಾಡಪ್ಪ ಮುಂದೆ ನೋಡೋಣ ಎಂದ ಸಿದ್ರಾಮಯ್ಯ
ಸಿಎಂ ಸಿದ್ದರಾಮಯ್ಯ ತಮ್ಮ ಭಾಷಣದುದ್ದಕ್ಕೂ ಪದೇ ಪದೆ ಮಿಸ್ಟರ್ ಮೋದಿ, ಮಿಸ್ಟರ್ ಯಡಿಯೂರಪ್ಪ… ಎಂದು ಸಂಭೋದಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ನೀವೇ ಮುಂದಿನ ಪ್ರದಾನಮಂತ್ರಿ ಎಂದು ಹೇಳಿದ. ಇದಕ್ಕೆ ಪ್ರತ್ಯುತ್ತರ ನೀಡಿ ಸಿಎಂ ಸಿದ್ದರಾಮಯ್ಯ ಸದ್ಯ ಮುಖ್ಯಮಂತ್ರಿ ಮಾಡಿ, ಪ್ರಧಾನಿಗಾಗಿ ಮುಂದೋ ನೋಡೋಣ ಎಂದು ಹಾಸ್ಯ ಚಟಾಕಿ ಹಾಕುವ ಮೂಲಕ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನರನ್ನು ನಗೆಗೆಡಲಿಲ್ಲ ತೇಲಿಸಿದರು. ಬೆಳಗಾವಿ: ಮೋಜು, ಮಸ್ತಿಗಾಗಿ ವಿಧಾನಸಭೆಗೆ ಆಯ್ಕೆಯಾಗುವವರನ್ನು ಕ್ಷೇತ್ರದ ಜನತೆ ಈ …
Read More »ಐಟಿ ದಾಳಿ ಸೇಡಿನ ರಾಜಕೀಯ ಸಿಎಂ ಆರೋಪ
ಬೆಳಗಾವಿ-ರಾಜ್ಯದಲ್ಲಿ ಕಾಂಗ್ರೆಸ್ ನಾಯಕರನ್ನು ತಮ್ಮ ಬೆಂಬಲಿಗರನ್ನು ಗುರಿಯಾಗಿಟ್ಟುಕೊಂಡು ಐಟಿ ದಾಳ ಮಾಡಿಸಿ ಕೇಂದ್ರ ಸರ್ಕಾರ ಸೇಡಿನ ರಾಜಕೀಯ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಬೆಳಗಾವಿಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಕೇವಲ ರಮೇಶ ಜಾರಕೀಹೊಳಿ, ಲಕ್ಷ್ಮೀ ಹೆಬ್ಬಾಳಕರ ಅವರ ಮೇಲಷ್ಟೆ ಐಟಿ ದಾಳಿ ಏಕೆ? ಪ್ರಭಾಕರ ಕೋರೆ ಹತ್ತೀರ ದುಡ್ಡಿಲ್ವಾ? ಯಡೂರಪ್ಪಾ ಲೂಟಿ ಹೊಡೆದಿಲ್ವಾ? ಸುರೇಶ ಅಂಗಡಿ, ಜಗದೀಶ …
Read More »ಮೂವರು ಅಭ್ಯರ್ಥಿಗಳು ಮೂರಾಬಟ್ಟಿಯಾದ ಎಂಇಎಸ್
ಬೆಳಗಾವಿ: ಗಡಿಭಾಗದ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಎಂಇಎಸ್ ಸಂಘಟಣೆಗೆ ಬಂಡಾಯದ ರೋಗ ತಗಲಿದ್ದು, ಬೆಳಗಾವಿ ದಕ್ಷಿಣ, ಉತ್ತರ, ಗ್ರಾಮೀಣ ಹಾಗೂ ಖಾನಾಪೂರ ಕ್ಷೇತ್ರದಲ್ಲಿ ಎಂಇಎಸ್ ಅಭ್ಯರ್ಥಿಗಳು ಬಂಡಾಯದ ಬಾವುಟ ಹಾರಿಸಿದ್ದಾರೆ. ಬೆಳಗಾವಿ ಉತ್ತರದಲ್ಲಿ ಶಾಸಕ ಸಂಭಾಜಿ ಪಾಟೀಲ ಬೆಳಗಾವಿ ದಕ್ಷಿಣದಿಂದ ಉತ್ತರ ಕ್ಷೇತ್ರಕ್ಕೆ ಪಲಾಯಣ ಮಾಡಿ ಇವರ ವಿರುದ್ಧ ಎಂಇಎಸ್ ನಾಯಕ ಬಾಳಾಸಾಹೇಬ ಕಾಕತಕರ ಬಂಡಾಯದ ಬಾವುಟ ಹಾರಿಸಿದ್ದು, ಇಬ್ಬರೂ ಕಣದಲ್ಲಿ ಉಳಿದುಕೊಂಡಿದ್ದಾರೆ. ಬೆಳಗಾವಿ …
Read More »ಕಿತ್ತೂರ ಎಕ್ಸಪ್ರೆಸ್ ನಲ್ಲಿ ಬಾಬಾಗೌಡ್ರನ್ನು ಓವರ್ ಟೇಕ್ ಮಾಡಿದ ಬಾ..ಬಾ..ಸಾಹೇಬ …!!!!
ಬೆಳಗಾವಿ- ಕಿತ್ತೂರ ಕ್ಷೇತ್ರದ ರಾಜಕೀಯ ಕಿತ್ತಾಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ ಕಾಂಗ್ರೆಸ್ ಟಿಕೆಟ್ ಡಿಬಿ ಇನಾಮದಾರಗೆ ಫಿಕ್ಸ ಆಗಿದೆ ಜೆಡಿಎಸ್ ಟಿಕೆಟ್ ಬಾಬಾಗೌಡ್ರ ಕೈತಪ್ಪಿದ್ದು ಬಾಬಾಸಾಬ ಪಾಟೀಲ ಜೆಡಿಎಸ್ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ ಕಳೆದ ಒಂದು ವಾರದಿಂದ ಕಾಂಗ್ರೆಸ್ ಟಿಕೆಟ್ ಗಾಗಿ ಹೈಡ್ರಾಮಾ ನಡೆದಿತ್ತು ಟಿಕೆಟ್ ಗಾಗಿ ಡಿಬಿ ಇನಾಮದಾರ ಹಾಗು ಬಾಬಾಸಾಬ ಪಾಟೀಲ ನಡುವೆ ಗುದ್ದಾಟ ನಡೆದಿತ್ತು ನಿನ್ನೆ ರಾತ್ರಿ ನಡೆದ ಅಚ್ಚರಿಯ ಬೆಳವಣಿಗೆ ನಡೆದು ಕೈ ಟಿಕೆಟ್ …
Read More »ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದ ಶಂಕರ ಮುನವಳ್ಳಿ ಜಾಹಿರಾತು…!!!!
ಬೆಳಗಾವಿ: ಪರಿಶಿಷ್ಟ ಜಾತಿಯ 92 ಉಪಜಾತಿಗಳಿಗೆ ರಾಜಕೀಯ ಅವಕಾಶ ನೀಡದೇ ಅನ್ಯಾಯ ಮಾಡಿದ ಕಾಂಗ್ರೆಸ್ ವಿರುದ್ಧ ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ದನಿ ಎತ್ತಿದ್ದಾರೆ. ಪರಿಶಿಷ್ಟ ಜಾತಿಗಳ 92 ಉಪಜಾತಿಗಳು ಸಾಮಾಜಿಕ ನ್ಯಾಯದಿಂದ ವಂಚಿತಗೊಂಡ ಸಮುದಾಯದ ವೇದಿಕೆ ವತಿಯಿಂದ ಶಂಕರ ಮುನವಳ್ಳಿ ಅವರು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಿರುವುದು ಕಾಂಗ್ರೆಸ್ ಗೆ ಮುಳ್ಳಾಗಿ ಪರಿಣಮಿಸಿದೆ. ಅಲ್ಲದೆ ಕಾಂಗ್ರೆಸ್ ನಾಯಕರ ನಿದ್ದೆ ಗೆಡೆಸಿದೆ. ಪರಿಶಿಷ್ಟ ಜಾತಿಯಲ್ಲಿ ಕೆಲ ನಾಯಕರು …
Read More »ಕಿತ್ತೂರಿನಲ್ಲಿ ಮುಗಿಯದ ರಾಜಕೀಯ ಕಿತ್ತಾಟ…ಕಾಂಗ್ರೆಸ್ ಟಿಕೆಟ್ ಗಾಗಿ ಮುಂದುವರೆದ ಗುದ್ದಾಟ
ಬೆಳಗಾವಿ – ಐತಿಹಾಸಿಕ ವೀರರಾಣಿಯ ಕ್ರಾಂತಿಯ ನೆಲ ಕಿತ್ತೂರಿನಲ್ಲಿ ರಾಜಕೀಯ ಕಿತ್ತಾಟ ಮುಂದುವರೆದಿದೆ ಈ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಮಾಜಿ ಶಾಸಕ ಡಿಬಿ ಇನಾಮದಾರ ಮತ್ತು ಬಾಬಾಸಾಹೇಬ ಪಾಟೀಲರ ನಡುವೆ ಗುದ್ದಾಟ ನಡೆದಿದೆ ಕಿತ್ತೂರ ಕ್ಷೇತ್ರದ ಬಿಜೆಪಿ ಟಿಕೆಟ್ ಮಹಾಂತೇಶ ದೊಡ್ಡಗೌಡರಿಗೆ ಫೈನಲ್ ಆಗುತ್ತಿದ್ದಂತೆಯೇ ಮಾಜಿ ಶಾಸಕ ಸುರೇಶ ಮಾರಿಹಾಳ ಬಂಡಾಯದ ಬಾವುಟ ಹಾರಿಸಿದ್ದಾರೆ ಮಾರಿಹಾಳ ಬೆಂಬಲಿಗರು ನಿನ್ನೆ ರಾತ್ರಿ ಬಿಜೆಪಿ ನಾಯಕರ ಧೋರಣೆ ಖಂಡಿಸಿ ಪ್ರತಿಭಟಿಸಿದ್ದಾರೆ ಇಂದು …
Read More »ಲಕ್ಷ್ಮೀ ಹೆಬ್ಬಾಳಕರ ನಾಮಿನೇಶನ್….ಗ್ರಾಮೀಣದಲ್ಲಿ ಕೈ ಪಾರ್ಟಿಗೆ ಫುಲ್ ಪ್ರಮೋಶನ್…..!!!!
ಬೆಳಗಾವಿ:- ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಲಕ್ಷ್ಮೀ ಆರ್. ಹೆಬ್ಬಾಳಕರ ರವರು ಇಂದು ಶುಕ್ರವಾರ ತಮ್ಮ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು. ಬೆಳಗಾವಿಯ ಹಿಂಡಲಗಾ ಗಣಪತಿ ಮಂದಿರದಲ್ಲಿ ವಿಘ್ನವಿನಾಯಕನಿಗೆ ಪೂಜೆ ಸಲ್ಲಿಸಿ ಗಣಪತಿ ಬಪ್ಪಾ ಮೋರಯಾ ಎಂದು ಬರೆಯಲಾದ ಟೋಪಿ ಧರಿಸಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ತಮ್ಮ ಬೆಂಬಲಿಗರೊಂದಿಗೆ ಕ್ಲಬ್ ರಸ್ತೆಯ ಮೂಲಕ ಮೆರವಣಿಗೆಯಲ್ಲಿ ತೆರಳಿ ಲಕ್ಷ್ಮೀ ಆರ್. ಹೆಬ್ಬಾಳಕರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕ ಸ್ಥಾನಕ್ಕೆ ಆಯ್ಕೆ …
Read More »ಡೌಟ್ ..ಕ್ಲಿಯರ್ ಅಭಯ ಪಾಟೀಲರಿಂದ ಇಂದು ನಾಮಪತ್ರ ಸಲ್ಲಿಕೆ
ಬೆಳಗಾವಿ- ಬೆಳಗಾವಿ ದಕ್ಷಿಣದಲ್ಲಿ ಬಿಜೆಪಿ ಟಿಕೆಟ್ ಗಾಗಿ ನಡೆದ ಗುದ್ದಾಟಕ್ಕೆ ತೆರೆ ಬಿದ್ದಿದೆ ಕೊನೆಗೂ ಬಿಜೆಪಿ ಬಿ ಫಾರ್ಮ ತರುವಲ್ಲಿ ಯಶಸ್ವಿಯಾಗಿರುವ ಅಭಯ ಪಾಟೀಲ ಇಂದು ಮಧ್ಯಾಹ್ನ 1 ಘಂಟೆಯ ನಂತರ ನಾಮಪತ್ರ ಸಲ್ಲಿಸಲಿದ್ದಾರೆ ಐದು ವರ್ಷದ ಹಿಂದೆ ಕಳೆದ ಬಾರಿಯ ಚುನಾವಣೆಯ ಸಂಧರ್ಭದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಗೆ ಬಂದಿದ್ದ ಅಭಯ ಪಾಟೀಲ ಐದು ವರ್ಷದವರೆಗೆ ಬೆಳಗಾವಿ ಮಹಾನಗರ ಪಾಲಿಕೆಗೆ ಕಾಲಿಡದ ಅಭಯ ಪಾಟೀಲ ಐದು ವರ್ಷದ ಬಳಿಕ ಪಾಲಿಕೆಗೆ …
Read More »ಬೆಳಗಾವಿ ಕೋರ್ಟ್ ಆವರಣದಲ್ಲಿ ವ್ಯಕ್ತಿಗೆ ಚೂರಿ ಇರಿದು ಕೊಲೆಗೆ ಯತ್ನ!
ಬೆಳಗಾವಿ: ಕೌಟುಂಬಿಕ ಕಲಹ ಸಂಬಂಧ ವ್ಯಕ್ತಿಯೋರ್ವನಿಗೆ ಚೂರಿ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಇಂದು ಕೋರ್ಟ್ ಆವರಣದಲ್ಲಿ ನಡೆದಿದೆ. ಶಿರಸಿ ಮೂಲದ ನಿಖಿಲ್ ಸುರೇಶ ಧಾವಳೆ (೩೨) ಎಂಬಾತನಿಗೆ ಚೂರಿ ಇರಿಯಲಾಗಿದೆ. ಬಲಬದಿ ಬೆನ್ನಿಗೆ ಚೂರಿ ಇರಿಯಲಾಗಿದ್ದು, ಸ್ಥಳೀಯರು ಹಾಗೂ ಪೊಲೀಸರು ಗಾಯಾಲು ನಿಖಿಲ್ ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ನಿಖಿಲ್ ಆರೋಗ್ಯದಲ್ಲಿಚೇತರಿಕೆ ಕಂಡಿದ್ದು, ಯಾವುದೇ ಅಪಾಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಗೆ ಕಾರಣ? ಕೌಟುಂಬಿಕ ಕಲಹದಿಂದ …
Read More »