ಬೆಳಗಾವಿ-
ಮೇಲಾಧಿಕಾರಿ ರಜೆ ನೀಡದಕ್ಕೆ ಕೆ.ಎಸ.ಆರ.ಟಿ.ಸಿ ಬಸ್ ಚಾಲಕ್ ನೋರ್ವ ಆನ್ ಡ್ಯೂಟಿ ಮೇಲೆ ಸಾವನ್ನಪ್ಪಿದ ಹಿನ್ನಲೆಯಲ್ಲಿ ಬಸ್ ಚಾಲಕರು ಹಾಗು ನಿರ್ವಾಹಕರು ನಗರದ ಕೇಂದ್ರ ಬಸ್ ನಿಲ್ಧಾಣದಲ್ಲಿ ಬಸ್ ಗಳನ್ನು ರಸ್ತೆಗಿಳಿಸದೇ ಪ್ರತಿಭಟನೆ ನಡೆಸಿದರು
ಎದೆ ನೋವು ಇದ್ದರೂ ಬಸ್ ಚಾಲಕನಿಗೆ ರಜೆ ನೀಡದೇ ಚಾಲಜನ ಸಾವಿಗೆ ಕಾರಣವಾದ
ಮೇಲಾಧಿಕಾರಿ ಮೇಲೆ ಕ್ರಮಕ್ಕೆ ಒತ್ತಾಯಿಸಿ ಚಾಲಕರು, ನಿರ್ವಾಹಕರಿಂದ ಪ್ರತಿಭಟನೆ.ನಡೆದ ಕಾರಣ ಸೋಮವಾರ ಬೆಳಿಗ್ಗೆ ಚಾಲಕರು ಬಸ್ ಗಳನ್ನು ಕೇಂದ್ರ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ಪ್ರತಿಭಟನೆ ನಡೆಸಿದರು
ಬೆಳಗಾವಿ ಸಿಬಿಟಿ ಬಸ್ ಚಾಲಕ ಎಂ.ಎಸ. ಖಾಗಜಿ ಮೃತಪಟ್ಟ ದುರ್ದೈವಿ.ಯಾಗಿದ್ದು
ನಿನ್ನೆ ಎದೆನೋವು ಇರುವುದರಿಂದ ರಜೆ ಕೇಳಿದ್ದ ಖಾಗಜಿಗೆ ಡುಪೋ ಮ್ಯಾನೇಜರ್ ರಜೆ ಕೊಟ್ಟಿಲ್ಲ ಎನ್ನುವದು ಪ್ರತಿಭಟನಾಕಾರರ ಆರೋಪವಾಗಿದೆ
ರಜೆ ನೀಡದ ಡಿಪೋ ಮ್ಯಾನೇಜರ್ ಆರ.ಬಿ. ರೋಗಿ.ವಿರುದ್ಧ ತಕ್ಷಣ ಕ್ರಮ ಕೈಗೊಂಡು ಆತನನ್ನು ಅಮಾನತು ಮಾಡುವವರೆಗೂ ಬಸ್ ಗಳನ್ನು ರಸ್ತೆಗಿಳಿಸುವದಿಲ್ಲ ಎಂದು ಬಸ್ ಚಾಲಕರು ಮತ್ತು ನಿರ್ವಾಹಕರು ಪಟ್ಟು ಹಿಡಿದಿದ್ದಾರೆ
ಸಂತಿಬಸ್ತವಾಡದಿಂದ ಬೆಳಗಾವಿ ಬರುತ್ತಿದ್ದಾಗ ಹೃದಯಾಘಾತವಾಗಿ ಖಾಗಜಿ ಸಾವನ್ನೊಪ್ಪಿದ್ದಾನೆ
ಅಧಿಕಾರಿಗಳ ನಿರ್ಲಕ್ಷತನದಿಂದ ಖಾಗಜಿ ರಸ್ರೆಯಲ್ಲಿಯೇ ಜೀವ ಬಿಟ್ಟಿದ್ದು ಡಿಪೋ ಮ್ಯಾನೇಜರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ಮುಂದುವರೆದಿದೆ
ಸಂಪೂರ್ಣ ಸಿಬಿಟಿ ಬಸ್ ಸೇವೆ ಸ್ಥಗಿತವಾಗಿದೆ ಡಿಪೋ ಮ್ಯಾನೇಜರ್ ಅಮಾನತು ಮಾಡಲು ಪ್ರತಿಭಟನಾಕಾರರ ಆಗ್ರ ವಹಿಸಿದ್ದಾರೆ