ಬೆಳಗಾವಿ: ಖಚಿತ ಮಾಹಿತಿ ಮೇರೆಗೆ ತಡರಾತ್ರಿ ದಾಳಿ ನಡೆಸಿದ ಬೆಳಗಾವಿ ಸಿಸಿಐಬಿ ಪೊಲೀಸರು ಜೀವಂತ ಗೂಬೆ ಹಾಗೂ ಚಿರತೆ ಚರ್ಮವನ್ನು ಪತ್ತೆಹಚ್ಚಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿದ್ದಾರೆ.
ಸುವರ್ಣಸೌಧದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೂಬೆ ವಶಪಡಿಸಿಕೊಂಡ ಪೊಲೀಸರು, ನಗರದ ಕಿಲ್ಲಾ ಬಳಿಯ ದುರ್ಗಾ ದೇವಸ್ಥಾನದ ಬಳಿ ಚಿರತೆ ಚರ್ಮ ವಶಕ್ಕೆ ಪಡೆದಿದ್ದಾರೆ.
ಸಲೀಂ ಮುಬಾರಕಲಿ ಕೊಪ್ಪಳ ಜಿಲ್ಲೆ, ರಾಘವೇಂದ್ರ ಸದಾನಂದ ಪೈ ಕೊಪ್ಪಳ ಜಿಲ್ಲೆ, ನಾರಾಯಣ ಗಣಪತಿ ಶೆಟ್ಟಿ ಧಾರವಾಡ ಜಿಲ್ಲೆ ಹಾಗೂ ಬಸು ಚನ್ನಬಸಪ್ಪ ಪಾಟೀಲ ಹಾವೇರಿ ಜಿಲ್ಲೆ ಗೂಬೆ ಸಾಗಿಸುವಾಗ ಸಿಕ್ಕಿಬಿದ್ದರೆ, ರೂಪೇಶ ಎಂ ಹಾಗೂ ವಿನೋದ ಎನ್. ಚಿರತೆ ಚರ್ಮ ಚೀಲದಲ್ಲಿ ಸಾಗಿಸುತ್ತಿದ್ದಾಗ ಸಿಸಿಐಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಎರಡು ಪ್ರತ್ಯೇಕ ದಾಳಿಗಳನ್ನು ಇನ್ಪೆಕ್ಟರ್ ಎ. ಎಸ್. ಗುದಿಗೊಪ್ಪ, ಪಿಎಸ್ಐ ಯು. ಬಿ. ಕಟ್ಟಿಕಾರ್, ಬಿ. ಆರ್. ಮುತ್ನಾಳ, ಎಸ್. ಆರ್. ಮೇತ್ರಿ, ಆರ್. ಎಸ್. ನಾಯಿಕವಾಡಿ, ಬಿ. ಎನ್. ಬಳಗನ್ನವರ, ಬಿ. ಎಂ. ದೇಶಪಾಯಿಕ, ಎನ್. ವೈ. ಮೈಲಾಕೆ , ಚಿನ್ನಪ್ಪಗೋಳ ಭಾಗವಹಿಸಿದ್ದರು. ವೈಲ್ಡ್ ಲೈಪ್ ಕಾಯಿದೆ ಅಡಿ ಪ್ರಕರಣ ದಾಖಲಾಗಿದ್ದು ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
		
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ