ಬೆಳಗಾವಿ- ಬೆಳಗಾವಿಯಲ್ಲಿ ಕೇಂದ್ರ
ಸಂಸದೀಯ ಸಚಿವ ಅನಂತಕುಮಾರ ಕಾಂಗ್ರೆಸ್‌ನ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾನು ಸಂಸತ್ತಿನಲ್ಲಿ ಮಾತನಾಡಿದ್ರೆ ಭೂಕಂಪವಾಗುತ್ತದೆ ಎಂದು ನೀಡಿದ ಹೇಳಿಕೆಗೆ ಬೆಳಗಾವಿಯಲ್ಲಿ ಕೇಂದ್ರ ಸಚಿವ ಅನಂತಕುಮಾರ ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ನವಂಬರ್ 8 ರಂದು 500 ಮತ್ತು 1000 ನೋಟ್‌ಗಳನ್ನ ಬ್ಯಾನ್ ಮಾಡಿದ್ದರಿಂದ ಕಾಳಸಂತೆ ಕೊರರಿಗೆ, ಭ್ರಷ್ಟಾಚಾರಿಗಳಿಗೆ, ಖೋಟಾ ನೋಟು ಪ್ರಿಂಟಿಸುವವರಿಗೆ ಮತ್ತು ಭಯೋತ್ಪಾದಕರಿಗೆ ಭೂಕಂಪವಾಗಿದೆ. ಮೋದಿ ನಿರ್ಧಾರದಿಂದ ಭ್ರಷ್ಟಾಚಾರಿಗಳ ಕಾಲ ಕೇಳಗಿನ ಭೂಮಿ ಕುಸಿದು ಹೋಗಿದೆ. ಅದೇ ದಿನವೇ ರಾಹುಲ್ ಗಾಂಧಿ ಅವರಿಗೂ ಭೂಕಂಪ ಆಗಿರಬೇಕು. ರಾಹುಲ್ ಹೇಳಿಕೆ ಹಾಸ್ಯಾಸ್ಪದವಾಗಿದೆ. ರಾಹುಲ್ ಬಳಿ ಏನಾದ್ರು ಸ್ಪೋಟಕ್ ಮಾಹಿತಿಯಿದ್ರೆ 19 ದಿನವಾದ್ರು ಯಾಕೇ ಬಹಿರಂಗ ಪಡಿಸುತ್ತಿಲ್ಲವೆಂದು ಕೇಂದ್ರ ಸಚಿವ ಅನಂತಕುಮಾರ ಪ್ರಶ್ನೆ ಮಾಡಿದ್ರು.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಚರ್ಚೆಯಲ್ಲಿ ಭಾಗವಹಿಸುತ್ತಿಲ್ಲ ಇದರಿಂದ ಕೋಟ್ಯಾಂತರ ರೂಪಾಯಿ ವ್ಯರ್ಥವಾಗುತ್ತಿದೆ ಸಂಸದೀಯ ಸಚಿವನಾಗಿ ಸಂಸತ್ತಿನ ಒಳಗೆ ಮತ್ತು ಹೊರಗೆ ಚರ್ಚೆಯಲ್ಲಿ ಭಾಗವಹಿಸುವಂತೆ ಪ್ರತಿಪಕ್ಷಗಳಿಗೆ ಮನವಿ ಮಾಡಿಕೊಂಡೆ ಆದರೂ ಅವರು ಚರ್ಚೆಯಲ್ಲಿ ಭಾಗವಹಿಸಲಿಲ್ಲ ರಾಹುಲ ನಡೆಯುತ್ತಿರುವ ಕಲಾಪಗಳನ್ನು ನಿಲ್ಲಿಸಿ ರಾಹುಲ ಗಾಂಧಿ ಅವರಿಗೆ ಮಾತನಾಡಲು ಅವಕಾಶ ನೀಡುವಂತೆ ಕಾಂಗ್ರೆಸ್ ಮೊಂಡುತನ ಪ್ರದರ್ಶಿಸಿದೆ ಸಂಸತ್ತು ಈ ದೇಶದ ಪಂಚಾಯತ್ ರಾಹುಲ ಗಾಂಧೀಗಾಗಿ ಸಂಸತ್ತಿನ ನೀತಿ ನಿಯಮ ಬದಲಿಸಲು ಇದೇನು ಕಾಂಗ್ರೆಸ್ ಪಾರ್ಟಿಯ ಸಭೆ ಅಲ್ಲ ಎಂದು ಅನಂತಕುಮಾರ ಲೇವಡಿ ಮಾಡಿದರು