ಬೆಳಗಾವಿ- ಗಡಿನಾಡು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲೀಗ ಭಾರಿ ಅಕ್ರಮಗಳ ಹೂರಣವೇ ಬೆಳಕಿಗೆ ಬರತೊಡಗಿದೆ. ವಿಶ್ವವಿದ್ಯಾಲಯದಲ್ಲಿ ನಡೆಯುತ್ತರುವ ಆಕ್ರಮಗಳನ್ನು ತಡೆಯುವಂತೆ ವಿವಿಧ ದಲಿತ ಸಂಘಟನೆಗಳು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿ ಕ್ರಮಕ್ಕಾಗಿ ವಾರದ ಗಡುವು ನೀಡಿದೆ
ವಿವಿಯಲ್ಲಿನ ಅಕ್ರಮ ನೇಮಕಾತಿಗಳ ಕುರಿತು ವಿಚಾರಣೆ ನಡೆಸಿದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಹಲವು ಸತ್ಯ ಸಂಗತಿಗಳನ್ನ ಹೊರಹಾಕಿದ್ದು ಅಕ್ರಮ ನೇಮಕಾತಿ ಹೊಂದಿದ ಕುಲಸಚಿವರು ಸೇರಿದಂತೆ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ಇಂದು ವಿವಿ ಎದುರು ಪ್ರತಿಭಟನೆ ನಡೆಸಿದರು.
ದಲಿತ ಘಟನೆಗಳು ಪ್ರತಿಭಟನೆ ನಡೆಸಿದರೆ ಇನ್ನೊಂದು ಕಡೆ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ವಿಶ್ವ ವಿದ್ಯಾಲಯದ ಬಳಿ ಪ್ರತಿಭಟನೆ ನಡೆಸಿದ್ದು ವಿವಿಧ ಸಂಘಟನೆಗಳು ರಾಣಿ ಚನ್ನಮ್ಮ ವಿವಿ ಯಲ್ಲಿ ನಡೆಯುತ್ತಿರುವ ಆಕ್ರಮಗಳ ಬಗ್ಗೆ ಕಿಡಿಕಾರಿದ್ದಾರೆ
ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕುಲಸಚಿವ ಸೇರಿದಂತೆ ಬೋಧಕ ಹುದ್ದೆಗೆ ಅಕ್ರಮ ನೇಮಕಾತಿ ನಡೆದಿದೆ ಎಂದು ಆರೋಪಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಬೆಳಗಾವಿಯ ರಾಣಿ ಚನ್ನಮ್ಮ ವಿವಿ ಎದುರು ಪ್ರತಿಭಟನೆ ನಡೆಸಿದ್ರು. ಕುಲಸಚಿವ ಡಾ.ಸಿದ್ದು ಆಲಗೂರ ಅವರ ನೇಮಕಾತಿ ಕಾನೂನು ಬಾಹಿರವಾಗಿದೆ. ಅವರ ಎಪಿಐ ಸ್ಕೋರ್ ಕಡಿಮೆ ಇದ್ದರೂ ಅವರನ್ನ ನೇಮಕಾತಿ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಬೆಳಗಾವಿಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಉನ್ನತ ಶಿಕ್ಷಣ ಇಲಾಖೆ ಮತ್ತು ರಾಜ್ಯಪಾಲರಿಗೆ ವರದಿ ಸಲ್ಲಿಸಿದ್ರು ಕೂಡ ಈವರೆಗೆ ಡಾ.ಸಿದ್ದು ಆಲಗೂರ್ ಅವರ ಮೇಲೆ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ. ಈ ಸಂಬಂಧ ಸರ್ಕಾರ ಮತ್ತು ರಾಜ್ಯಪಾಲರು ಕೂಡಲೇ ಅಕ್ರಮ ನೇಮಕಾತಿ ಹೊಂದಿದವರ ವಿರುದ್ದ ಹದಿನೈದು ದಿನಗಳ ಒಳಗಾಗಿ ಕಾನೂನು ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ವಿವಿಗೆ ಬೀಗ ಜಡಿದು ಉಗ್ರ ಹೋರಾಟ ಮಾಡೊ ಎಚ್ಚರಿಕೆಯನ್ನ ಜಯ ಕರ್ನಾಟಕ ಸಂಘಟನೆ ಮಾಡಿದೆ..
ಯುಜಿಸಿ ನಿಯಮಾವಳಿಗಳ ಪ್ರಕಾರ ವಿಶ್ವವಿದ್ಯಾಲಯಕ್ಕೆ ನೇಮಕಗೊಳ್ಳುವ ಪ್ರೋಫೆಸರ್ ಕನಿಷ್ಠ 400 ಎಪಿಐ ಸ್ಕೋರ್ ಹೊಂದಿರಬೇಕು. ಅಲ್ಲದೇ 10 ವರ್ಷಗಳ ಕಾಲ ಸರ್ಕಾರಿ ಪದವಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿರಬೇಕು. ಆದ್ರೆ ಖಾಸಗಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿರುವ ಡಾ.ಸಿದ್ದು ಆಲಗೂರ್ ಅವರನ್ನು ನೇಮಕ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇಷ್ಟೆಲ್ಲ ಆರೋಪಗಳ ನಡುವೆಯೂ ಆರ್.ಸಿ.ಯು ಕುಲಪತಿಗಳು ಮಾತ್ರ ನನಗೆನು ಗೊತ್ತಿಲ್ಲ. ಸರ್ಕಾರ ಡಾ.ಸಿದ್ದು ಆಲಗೂರ್ ಅವರನ್ನ ನೇಮಕ ಮಾಡಿದೆ.ಕಾನೂನಿನ ಚೌಕಟ್ಟಿನಲ್ಲಿಯೇ ನೇಮಕಾತಿ ನಡೆದಿದೆ ಅಂತಾ ಸಮಜಾಯಿಶಿ ನೀಡಿದ್ದು, ಜಯ ಕರ್ನಾಟಕ ಸಂಘಟನೆಯವ್ರು ಮನವಿ ಸಲ್ಲಿಸಿದ್ದು ರಾಜ್ಯಪಾಲರಿಗೆ ಕಳಿಸೋದಾಗಿ ಹೇಳಿದ್ದಾರೆ.
ಒಟ್ನಲ್ಲಿ ಕುಲಸಚಿವರ ಅಕ್ರಮ ನೇಮಕಾತಿ ಸೇರಿದಂತೆ ವಿವಿಯಲ್ಲಿನ ಹಲವು ಅಕ್ರಮಗಳ ಸತ್ಯಾಂಶವುಳ್ಳ ವರದಿ ಇದೀಗ ರಾಜ್ಯಪಾಲರು ಹಾಗೂ ಉನ್ನತ ಶಿಕ್ಷಣ ಇಲಾಖೆಯ ಅಂಗಳದಲ್ಲಿದ್ದು, ತಪ್ಪಿತಸ್ಥರ ವಿರುದ್ದ ಯಾವ ಕ್ರಮ ಕೈಗೊಳ್ಳಲಾಗುತ್ತೆ ಕಾದು ನೋಡಬೇಕು.