ಬೆಳಗಾವಿ- ಇಂದು ಗುರುವಾರ ದೇಶದ ಯಾವ ಭಾಗದಲ್ಲಿಯೂ ಚಂದ್ರ ದರ್ಶನವಾಗದ ಕಾರಣ ಶನಿವಾರದಂದು ರಮಜಾನ್ ಈದುಲ್ ಫಿತರ್ ಹಬ್ಬವನ್ನು ಆಚರಿಸಲು ಬೆಳಗಾವಿ ಜಿಲ್ಲಾ ಚಾಂದ್ ಕಮೀಟಿ ನಿರ್ಧಾರ ಕೈಗೊಂಡಿದೆ
ಸಂಜೆ ಬೆಳಗಾವಿಯ ಅಂಜುಮನ್ ಹಾಲ್ ನಲ್ಲಿ ಸಭೆ ಸೇರಿದ ಮುಸ್ಲೀಂ ಧರ್ಮಗುರುಗಳು ಬೆಂಗಳೂರು ಮೈಸೂರು ಧಾರವಾಡ ಮುಂಬೈ ಪುನೆ ಸೇರಿದಂತೆ ದೇಶದ ಮಹಾನಗರಗಳ ಸಮೀತಿ ಸದಸ್ಯರನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿ ಚಂದ್ರ ದರ್ಶನದ ಬಗ್ಗೆ ಮಾಹಿತಿ ಪಡೆದು ಎಲ್ಲಿಯೂ ಚಂದ್ರ ದರ್ಶನ ವಾಗದ ಕಾರಣ ಶನಿವಾರ ಹಬ್ಬ ಆಚರಿಸುವ ನಿರ್ಧಾರ ಕೈಗೊಂಡರು
ಚಾಂದ್ ಕಮೀಟಿಯ ಅಧ್ಯಕ್ಷ ರಾಜು ಸೇಠ ಸೇರಿದಂತೆ ಮುಸ್ಲೀಂ ಧರ್ಮಗುರುಗಳು ಸಭೆಯಲ್ಲಿ ಭಾಗವಹಿಸಿದ್ದರು ಶನಿವಾರ ಬೆಳಿಗ್ಗೆ 9-30 ,ಘಂಟೆಗೆ ಈದಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ