ಬೆಳಗಾವಿ-ಮತ್ತೆ ಉದ್ಧಟತನ ಮೆರೆದ ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವ ಚಂದ್ರಕಾಂತ ಪಾಟೀಲ್ , ನಾವು ಬೆಳಗಾವಿಗೆ ಹೋಗಿಯೇ ಹೋಗ್ತೀವಿ,ಎಂದು ಕರ್ನಾಟಕ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಮುಂಬಯಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಮಹಾರಾಷ್ಟ್ರದ ಗಡಿ ಉಸ್ತುವಾರಿ ಮಂತ್ರಿ ಚಂದ್ರಕಾಂತ ಪಾಟೀಲ,ಕರ್ನಾಟಕಕ್ಕೆ ಭೇಟಿ ನೀಡದಂತೆ ಸಂದೇಶ ರವಾನಿಸಿದ್ದೇವೆ ಎಂಬ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು,ಡಿಸೆಂಬರ್ 6ರಂದು ನಾವು ಬೆಳಗಾವಿಗೆ ಹೋಗಿಯೇ ತೀರುತ್ತೇವೆ.ಎಂದು ಹೇಳಿಕೆ ನೀಡಿದ್ದಾರೆ.
ನನಗೆ ಯಾವುದೇ ಫ್ಯಾಕ್ಸ್ ಆಗಲಿ, ಬೊಮ್ಮಾಯಿಯ ಪತ್ರವಾಗಲಿ ತಲುಪಿಲ್ಲ,ನಾನು ಡಿಸೆಂಬರ್ 3ರಂದು ಹೋಗಬೇಕಿತ್ತು,ಆದ್ರೆ ಡಿಸೆಂಬರ್ 6ರಂದು ಡಾ.ಬಿ.ಆರ್.ಅಂಬೇಡ್ಕರ್ ಮಹಾಪರಿನಿರ್ವಾಹಣ ದಿನ ಇದೆ,ಅಂದು ಬೆಳಗಾವಿಯಲ್ಲಿ ಹಲವು ಕಾರ್ಯಕ್ರಮಗಳು ಇರುತ್ತೆ,ಎಲ್ಲರೂ ಸಹ ನನಗೆ ಡಿ.6ರಂದು ಆಗಮಿಸುವಂತೆ ವಿನಂತಿಸಿದರು,ನಾನು ಡಿ.6ರಂದು ಬೆಳಗಾವಿಗೆ ಭೇಟಿ ನೀಡುತ್ತೇನೆ ಎಂದು ಮಹಾರಾಷ್ಟ್ರದ ಮಂತ್ರಿ ಚಂದ್ರಕಾಂತ ಪಾಟೀಲ ಹೇಳಿದ್ದಾರೆ.
ಇದಲ್ಲದೇ ಡಿ.6ರಂದು ಹಲವು ಕಾರ್ಯಕ್ರಮಗಳು ಸಹ ಇವೆಗಡಿ ಭಾಗದ ಜನ, ಗಡಿ ಹೋರಾಟದಲ್ಲಿ ಮೃತಪಟ್ಟ ಹುತಾತ್ಮರ ನಿವಾಸಕ್ಕೆ ಭೇಟಿ ನೀಡುವುದಿದೆ,ಈ ಪೈಕಿ ಅಂಬೇಡ್ಕರ್ ಉದ್ಯಾನವನದಲ್ಲಿರುವ ಬೃಹತ್ ಅಂಬೇಡ್ಕರ್ ಪ್ರತಿಮೆಗೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದೇನೆ.ಕರ್ನಾಟಕ ಸರ್ಕಾರಕ್ಕೆ ನಾನು ಹೇಳಬಯಸುತ್ತೇನೆ, ನಾವು ಯಾವುದೇ ಸಂಘರ್ಷ ಮಾಡಲು ಬರ್ತಿಲ್ಲ,865 ಮರಾಠಿ ಭಾಷಿಕ ಹಳ್ಳಿಗಳಿಗೆ ಮಹಾರಾಷ್ಟ್ರ ಸರ್ಕಾರ ಏನು ಸೌಲಭ್ಯ ನೀಡಬಹುದು ಎಂಬ ಬಗ್ಗೆ ಚರ್ಚಿಸಲು ತೆರಳುತ್ತಿದ್ದೇನೆ,865 ಹಳ್ಳಿಗಳು ಸಮಾಧಾನದಿಂದ ಇದ್ದಾರಂದ್ರೆ ಅದರ ಲಾಭ ನಿಮಗೆ ಇದೆ.ಕರ್ನಾಟಕ ಸರ್ಕಾರದ ನಾಗರಿಕರಿಗೆ ನೀವು ಅವರಿಗೆ ಸೌಲಭ್ಯ ನೀಡಲೇಬೇಕಾಗುತ್ತೆ.ಆದ್ರೆ 865 ಮರಾಠಿ ಭಾಷಿಕ ಜನರನ್ನು ಮಹಾರಾಷ್ಟ್ರದ ನಾಗರಿಕರೆಂದು ನಾವು ಸೌಲಭ್ಯ ನೀಡ್ತೇವೆ.ಎಂದು ಚಂದ್ರಕಾಂತ ಪಾಟೀಲ ಹೇಳಿದ್ದಾರೆ.
ಯಾವುದೇ ನಿಷೇಧ ಹೇರಿದರೂ ನಾನು ನಿಲ್ಲುವ ಮನುಷ್ಯನಲ್ಲ,ನನಗೆ ನೀವು ಧಮ್ಕಿ ನೀಡಬೇಡಿ ಎಂದು ಚಂದ್ರಕಾಂತ ಪಾಟೀಲ ಕರ್ನಾಟಕ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಅವರಿಗೆ ಅನಿಸುತ್ತೆ ನಾವು ಎಚ್ಚರಿಕೆ ನೀಡಲು ಹೋಗುತ್ತಿದ್ದೇವೆನಾವು ಸಮನ್ವಯದಿಂದ ಜನರ ಮನಸ್ಥಿತಿ ತಿಳಿದು ಅವರಿಗೆ ಮಹಾರಾಷ್ಟ್ರ ಸರ್ಕಾರದ ನಿಲುವು ತಿಳಿಸಲು ತೆರಳುತ್ತಿದ್ದೇವೆ.ಮುಂಬೈನಲ್ಲಿ ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವ ಚಂದ್ರಕಾಂತ ಪಾಟೀಲ್ ಹೇಳಿದ್ದಾರೆ.