ಬೆಳಗಾವಿ- ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನಲ್ಲಿ ಉಪ್ಪಾರ ಸಮಾಜದ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಅರಬಾಂವಿ ಮತ್ತು ಗೋಕಾಕ ಕ್ಷೇತ್ರದಲ್ಲಿ ಸಮಾಜದ ಮುಖಂಡರು ಬಾಲಚಂದ್ರ ಜಾರಕೊಹೊಳಿ ಮತ್ತು ರಮೇಶ್ ಜಾರಕಿಹೊಳಿ ಅವರನ್ನು ಬೆಂಬಲಿಸುತ್ತಾ ಬಂದಿದ್ದು ಉಪ್ಪಾರ ಸಮಾಜದ ನಾಯಕರನ್ನು ನಿಗಮಮಂಡಳಿಗೆ ನೇಮಕ ಮಾಡಬೇಕೆಂದು ಉಪ್ಪಾರ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.
ಮೂಡಲಗಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಉಪ್ಪಾರ ಸಮಾಜದ ಯುವ ಮುಖಂಡ,ಚನ್ನಪ್ಪಾ ವಗ್ಗಣ್ಣವರ,ಉಪ್ಪಾರ ಸಮಾಜದ ಮುಖಂಡರನ್ನು ಕೇವಲ ಜಿಪಂ.ತಾಪಂ ಗೆ ಸೀಮೀತಗೊಳಿಸಬಾರದು ಬೆಳಗಾವಿ ಜಿಲ್ಲೆಯಲ್ಲಿಯೇ ಉಪ್ಪಾರ ಸಮಾಜದ ಜನಸಂಖ್ಯೆ ಹೆಚ್ಚಾಗಿದ್ದು ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಬೆಳಗಾವಿ ಜಿಲ್ಲೆಯ ಉಪ್ಪಾರ ಸಮಾಜದ ನಾಯಕರನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಬಾಲಚಂದ್ರ ಜಾರಕೊಹೊಳಿ,ಮತ್ತು ರಮೇಶ್ ಜಾರಕೊಹೊಳಿ ಅವರಿಗೆ ಅಧಿಕಾರ ಕೊಡಿಸುವ ನಿಟ್ಟಿನಲ್ಲಿ ಉಪ್ಪಾರ ಸಮಾಜದ ನಾಯಕರ ಕೊಡುಗೆ ಅಪಾರವಾಗಿದ್ದು ಇಬ್ಬರು ಸಾಹುಕಾರ್ ಗಳು ಸಮಾಜದ ಮುಖಂಡರೊಬ್ಬರನ್ನು ಎಂ ಎಲ್ ಸಿ ಮಾಡುವ ಮೂಲಕ ಉಪ್ಪಾರ ಸಮಾಜಕ್ಕೆ ವಿಶೇಷ ಕೊಡುಗೆ ನೀಡಬೇಕು ಎಂದು ಉಪ್ಪಾರ ಸಮಾಜದ ನಾಯಕರ ಒತ್ತಾಯವಾಗಿದೆ.