ಬೆಳಗಾವಿ: ಅಥಣಿ ತಾಲೂಕು ಸಪ್ತಸಾಗರ ಗ್ರಾಮ ಕೊರೆದು ಹೋಗುವ ಘಟಪ್ರಭಾ ಎಡದಂಡೆ ಕಾಲುವೆ ಸೋರಿ ತಡರಾತ್ರಿ ಹೊಲಗಳಲ್ಲಿ ನುಗ್ಗಿದೆ.
ಕುಡಚಿ ಉಪವಿಭಾಗದಿಂದ ಬರುವ ಜಿಎಲ್ ಬಿಸಿ ಮುಖ್ಯ ಕಾಲುವೆಯ ಉಪಕಾಲುವೆ ರಾಯಭಾಗ ತಾಲೂಕು ಹಾರೂಗೆರೆಯಿಂದ ಅಥಣಿ ತಾಲೂಕಿನ ಸಪ್ತಸಾಗರ, ತೀರ್ಥ ಗ್ರಾಮ ಸೀಳಿಕೊಂಡು ಕೃಷ್ಣಾ ತಟ ಸೇರುತ್ತದೆ.
ಈ ಉಪಕಾಲುವೆ ತನ್ನ ಹರಿವಿನ ಸಪ್ತಸಾಗರ ಗ್ರಾಮದ ೧೮ಕೀಮಿ ಬಳಿ ಒಡೆದು ಫಲವತ್ತಾದ ಹೊಲಗಳಿಗೆ ನುಗ್ಗಿ ಹಾನಿ ಮಾಡಿದೆ. ಸರಾಗ ನೀರಿನ ಚಲನೆ ಇಲ್ಲದ ಈ ಕಾಲುವೆಯ ಕಾಂಕ್ರೀಟ್ ಕಿತ್ತು ಅದರ ಪರಿಸ್ಥಿತಿ ಬದಲಾಗಿದೆ.
ತಡರಾತ್ರಿ ನೀರು ಹೆಚ್ಚಿನ ಪ್ರಮಾಣದಲ್ಲಿ ಜಿಣುಗಿ ಸಮಸ್ಯೆ ಸೃಷ್ಟಿಸಿದ ಬೆನ್ನಿಗೆ ರೈತರು ಅಧಿಕಾರಿಗಳಿಗೆ ದೂರವಾಣಿ ಮಾಡಿದರು ಪ್ರಯೋಜನವಾಗಿಲ್ಲ. ನಿಷ್ಪ್ರಯೋಜಕ ಕಾಲುವೆಗೆ ನೀರು ಬಿಡುತ್ತಿದ್ದಂತೆ ಕಾಲುವೆ ಅಲ್ಲಲ್ಲಿ ಒಡೆದು, ಉಕ್ಕಿ ಸಮಸ್ಯೆ ಸೃಷ್ಟಿಸಿದೆ. ತಾಲೂಕು ಮಟ್ಟದ ಕಂದಾಯ, ನೀರಾವರಿ, ಕಾಡಾ ಸೇರಿದಂತೆ ಇನ್ನಿತರ ಯಾವ ಅಧಿಕಾರಿಗಳು ನೂರಾರು ಎಕರೆ ಜಾಗ ಮತ್ತು ಮನೆಗಳಲ್ಲಿ ನೀರು ಹರಡಿರುವ ಸಮಸ್ಯೆ ನೋಡಲು ಬಂದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರಾದ ಹಾಲಪ್ಪ ಕೋಳೆಕರ, ಸದಾಶಿವ ಡಬ್ಬನ್ನವರ, ಪ್ರವೀಣ ಕೊಳೆಕರ, ಪಾರೀಶ ಹೊಸೂರ ಸೇರಿದಂತೆ ನೂರಾರು ನೌಕರರು ಆಗ್ರಹಿಸಿದ್ದಾರೆ.