ಬೆಳಗಾವಿ- ಬೆಳಗಾವಿ ನಗರದ ಕಾಂಗ್ರೆಸ್ ರಸ್ತೆ ಹಾಳಾಗಿರುವದಕ್ಕೆ ಪಾಲಿಕೆ ಸಭೆಯಲ್ಲಿ ಎಂಈಎಸ್ ಸದಸ್ಯರು ಬ್ಯಾನರ್ ಹಿಡಿದು ಪ್ರತಿಭಟಿಸಿದರು
ಪಿಂಟು ಸಿದ್ಧಿಕಿ ಅವರಿಗೆ ಶೃದ್ಧಾಂಜಲಿ ಅರ್ಪಿಸಿದ ಬಳಿಕ ಹತ್ತು ನಿಮಿಷಗಳ ಕಾಲ ಪಾಲಿಕೆ ಸಭೆಯನ್ನು ಮುಂದೂಡಲಾಗಿತ್ತು ನಂತರ ಸಭೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ರಸ್ತೆಯ ಬ್ಯಾನರ್ ಹಿಡುದು ಎಂಈಎಸ್ ನಗರ ಸೇವಕರು ಪ್ರತಿಭಟಿಸಲು ಆರಂಭಿಸಿದಾಗ ಇದಕ್ಕೆ ಆಡಳಿತ ಗುಂಪಿನ ನಗರ ಸೇವಕರು ಅಕ್ಷೇಪ ವ್ಯಕ್ತ ಪಡಿಸಿದರು
ಪಾಲಿಕೆಯಲ್ಲಿ ಎಂಈಎಸ್ ಆಡಳಿತ ವಿದ್ದಾಗಲೂ ಕಾಂಗ್ರೆಸ್ ರಸ್ತೆ ಹಾಳಾಗಿತ್ತು ಈಗೇಕೆ ಈ ಹೊಸ ನಾಟಕ ಎಂದು ಆಡಳಿತ ಗುಂಪಿನ ನಗರ ಸೇವಕರು ಎಂಈಎಸ್ ನಗರ ಸೇವಕರಿಗೆ ಟಾಂಗ್ ಕೊಟ್ಟರು
ನಂತರ ಮೇಯರ್ ಮದ್ಯಪ್ರವೇಶಿಸಿ ಪ್ರತಿಭಟನೆಯನ್ನು ತಿಳಿಗೊಳಿಸಿದರು
ಪಾಲಿಕೆ ಆಯುಕ್ತ ಶಶಿಧರ ಕುರೇರ್ ಮಾತನಾಡಿ, ಮಳೆಗಾಲದಲ್ಲಿ ಹಾಳಾದ ರಸ್ತೆಯ ಕುರಿತು ವಿಶೇಷ ಸಭೆ ನಡೆಸಲಾಗಿದೆ.
ಕಾಂಗ್ರೆಸ್ ರಸ್ತೆ ಬಹಳಷ್ಟು ಹಾಳಾಗಿವೆ. ಕಾರಣ ಮೆಲ್ಸೇತುವೆ ಕಾಮಗಾರಿ ಪ್ರಾರಂಭವಾಗಿರುವುದರಿಂದ ಭಾರಿ ವಾಹನಗಳು ಕಾಂಗ್ರೆಸ್ ರಸ್ತೆಯ ಮೇಲೆ ಸಂಚಾರ ನಡೆಸುತ್ತಿವೆ. ಒಂದು ವರ್ಷ ಹಾಗೂ ಇತ್ತೀಚೆಗೆ ಮಾಡಿದ ರಸ್ತೆಗಳು ಹಾಳಾಗಿರುವುದರ ಕುರಿತು ಸರ್ವೆ ನಡೆಸಲಾಗಿದೆ.
ಅದರಲ್ಲಿ ಕಾಲೇಜು ರಸ್ತೆ ಹಾಳಾಗಿರುವುದು ಸರ್ವೆಯಲ್ಲಿ ತಿಳಿದು ಬಂದಿದೆ. ಸ್ಮಾರ್ಟ್ ಸಿಟಿಯಲ್ಲಿ ಕಾಂಗ್ರೆಸ್ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಅನುಮೋದನೆ ನೀಡಲಾಗಿದೆ. ಸಿಮೆಂಟ್ ರಸ್ತೆ ನಿರ್ಮಾಣ ಮಾಡಲಾಗುವುದು ಆಗ ರಸ್ತೆ ಅಗೇಯುವ ಮಾತೇ ಬರುವುದಿಲ್ಲ. ಅಲ್ಲದೆ ಪ್ರಮುಖ ರಸ್ತೆಗಳನ್ನು ತೆಗೆದುಕೊಳ್ಳಲಾಗಿದೆ.
ಮಳೆಯ ಪ್ರಮಾಣ ಕಡಿಮೆಯಾಗುತ್ತದೆ ಆಗ ಟೆಂಡರ್ ಕರೆದು ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಪಾಲಿಕೆ ಆಯುಕ್ತ ಕುರೇರ ಹೇಳಿದರು.