Breaking News

ಪಾಲಿಕೆ ಸಭೆಯಲ್ಲಿ ಗರ್ಜಿಸಿದ ಕನ್ನಡದ ದುರ್ಗೆ….ಕೆಲ ಕಾಲ ಕೋಲಾಹಲ

ಟೂರ್ ಮೂಡ್ ನಲ್ಲಿ ನಗರಸೇವಕರು. ಚಂಡೀಘರ್ ಮಾದರಿಯಲ್ಲಿ ಡೆವಲ್ಪ್ಮೆಂಟ್ ಮಾಡಬೇಕಂತೆ

ಬೆಳಗಾವಿ- ಕೆಲ ತಿಂಗಳ ಹಿಂದೆ ಪಂಜಾಬಿನ ಚಂಧೀಗಡ್ ನಗರಕ್ಕೆ ಭೇಟಿ ನೀಡಿ ಅದ್ಯಯನ ಪ್ರವಾಸ ಮಾಡಿ ಬಂದಿರುವ ಬೆಳಗಾವಿ ಪಾಲಿಕೆ ಸದಸ್ಯರು ಅಧ್ಯಯನ ಪ್ರವಾಸದ ಅನುಭವಗಳನ್ನು ಪಾಲಿಕೆ ಸಭೆಯಲ್ಲಿ ಬಿಚ್ಚಿಟ್ಟರು
ಚಂದೀಗಡ್ ಪುನರ್ ನಿರ್ಮಾಣಗೊಂಡ ನಗರ ಅಲ್ಲಿಯ ಕಸ ವಿಲೇವಾರಿ ವ್ಯೆವಸ್ಥೆ ತ್ಯಾಜ್ಯ ಸಂಸ್ಕರಣ ಘಟಕ ಸೇರಿದಂತೆ ಅಲ್ಲಿಯ ಸ್ವಚ್ಛತಾ ಕಾಮಗರಿಗಳ ವ್ಯೆವಸ್ಥೆ ಅತ್ಯುತ್ತಮವಾಗಿದ್ದು ಅದೇ ರೀತಿಯ ವ್ಯೆವಸ್ಥೆಗಳನ್ನು ಬೆಳಗಾವಿ ನಗರದಲ್ಲಿಯೂ ಅಳವಡಿಸಬೇಕು ಚಂದೀಗಡ್ ಮಾದರಿಯಲ್ಲಿ ಬೆಳಗಾವಿ ನಗರವೂ ಬೆಳೆಯಬೇಕು ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ದೀಪಕ ಜಮಖಂಡಿ ಒತ್ತಾಯಿಸಿದರು

ಚಂದೀಗಡ್ ಪಾಲಿಕೆಯಲ್ಲಿ ಅಧಿಕಾರಿಗಳು ಮತ್ತು ಪಾಲಿಕೆ ಸದಸ್ಯರು ಪರಸ್ಪರ ಸಮನ್ವಯತೆ ಯಿಂದ ಕೆಲಸ ಮಾಡುತ್ತಾರೆ ಸ್ವಚ್ಛತೆ ಕುರಿತು ಅಲ್ಲಿ ಜನಜಾಗೃತಿ ಮಾಡುತ್ತಾರೆ ಅಲ್ಲಿ ಅನುದಾನದ ಕೊರತೆ ಇದ್ದರೂ ಇರುವ ಅನುದನಾವನ್ನು ನೂರಕ್ಕೆ ನೂರರಷ್ಟು ವಿನಿಯೋಗ ಮಾಡಿಕೊಳ್ಳುತ್ತಾರೆ ಆದರೆ ಬೆಳಗಾವಿ ಪಾಲಿಕೆಗೆ ಅನುದಾನ ವಿಪುಲವಾಗಿ ದೊರಕುತ್ತಿದೆ ಇಲ್ಲಿ ಅಧಿಕಾರಿಗಳು ನಗರ ಸೇವಕರಿಗೆ ಸಹಕಾರ ಕೊಡುತ್ತಿಲ್ಲ ಇಲ್ಲಿ ಸಮನ್ವಯದ ಕೊರತೆಯಿಂದ ಅಭಿವೃದ್ಧಿಗೆ ಹಿನ್ನಡೆ ಆಗುತ್ತಿದೆ ಎಂದು ಅದ್ಯಯನ ಪ್ರವಾಸ ಮಾಡಿ ಬಂದ ನಗರಸೇವಕರು ತಮ್ಮ ಅಸಮಾಧಾನ ಹೊರಹಾಕಿದ್ರು

ಸದಸ್ಯರು ಚಂದೀಗಡ್ ಟೂರ್ ಬಗ್ಗೆ ಪ್ರಶಂಸೆ ವ್ಯೆಕ್ತ ಪಡಿಸುತ್ತಿರುವದನ್ನು ಗಮನಿಸಿದ ನಗರ ಸೇವಕಿ ಸರಳಾ ಹೇರೇಕರ ಅದಕ್ಕೆ ತೀವ್ರ ಅಕ್ಷೇಪ ವ್ಯೆಕ್ತಪಡಿಸಿದರು ನಗರ ಸೇವಕರು ಅದ್ಯಯನ ಪ್ರವಾಸಕ್ಕೆ ಹೋಗಿದ್ದು ತಪ್ಪು ಟೂರ್ ಮಾಡಿ ಪಾಲಿಕೆ ಹಣವನ್ನು ಪೋಲು ಮಾಡಿದ್ದೀರಾ ನಿಜವಾಗಿಯೂ ಅಧಿಕಾರಿಗಳು ಅಧ್ಯಯನ ಪ್ರವಾಸ ಮಾಡಬೇಕಾಗಿತ್ತು ನಗರದ ಅಭಿವೃದ್ಧಿಗೆ ಕೋಟ್ಯಾಂತರ ರೂ ಅನುದಾನ ಬರುತ್ತಿದೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದ ತಿಂಗಳಲ್ಲೇ ರಸ್ತೆ ಗುಂಡಿಗಳು ಕಾಣಿಸುತ್ತಿವೆ ಅದನ್ನು ತುಂಬಲು ಮತ್ತಷ್ಟು ದುಡ್ಡು ಖರ್ಚು ಮಾಡಲಾಗುತ್ತದೆ ಎಂದು ಸರಳಾ ಹೇರೇಕರ ಅದ್ಯಯನ ಪ್ರವಾಸ ಮಾಡಿದ ನಗರ ಸೇವಕರನ್ನು ಕಳಪೆ ಕಾಮಗಾರಿಗಳನ್ನು ನೋಡಿಯೂ ಮೌನ ವಹಿಸಿರುವ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು
ಸರಳಾ ಹೇರೇಕರ ಅವರನ್ನು ಮಹಾಪೌರ ಮತ್ತು ಉಪಮಹಾಪೌರ ಕುಳಿತುಕೊಳ್ಳುವಂತೆ ಸೂಚಿಸಿದಾಗ ಅದಕ್ಕೂ ಆಕ್ರೋಶ ವ್ಯೆಕ್ತ ಪಡಿಸಿದ ಸರಳಾ ಹೇರೇಕರ ನಾನೇನು ನಿಮ್ಮ ಹಾಗೆ ಮೇಯರ್ ಗೆ ಚಪ್ಪಲಿ ಬಳಿ ತೋರಿಸುತ್ತಿಲ್ಲ ನನ್ನ ಅಳಲು ತೋಡಿಕೊಂಡಿದ್ದೇನೆ ಪಾಲಿಕೆಯಲ್ಲಿ ನಡೆಯುತ್ತರುವ ಅಂದಾ ದರ್ಬಾರ್ ನೋಡಿ ಸುಮ್ಮನೇ ಕುಳಿತುಕೊಳ್ಳುವ ಹೆಣ್ಣು ನಾನಲ್ಲ ಎಂದು ಸರಳಾ ಹೇರೇಕರ ಪ್ರತ್ತ್ಯುತ್ತರ ನೀಡಿ ಎಲ್ಲರ ಗಮನ ಸೆಳೆದರು

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *