ಬೆಳಗಾವಿ-
ಬೆಳಗಾವಿ ಮಹಾನರಗ ಪಾಲಿಕೆ ಇಬ್ಬರು ಸಿಬ್ಬಂದಿ ಎಸಿಬಿ ಬಲೆಗೆ ಬಿದ್ದಿದ್ದಾರೆ
ಬಾಲಕೃಷ್ಣ ಪೀಸಾಳೆ ಮತ್ತು ಪಿ. ದೇವದಾನಮ್ಮ ಎಸಿಬಿ ಬಲೆಗೆ ಬಿದ್ದವರು.ಇವರಿಬ್ಬರು ಪಾಲಿಕೆಯ ಟೌನ್ ಪ್ಲ್ಯಾನಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ
ಬಾಲಕೃಷ್ಣ ನಗರ ಯೋಜನಾ ವಿಭಾಗದ ಮ್ಯಾನೇಜರ್.
ಇದೇ ಶಾಖೆಯ ಎಸಡಿಎ ಪಿ. ದೇವದಾನಮ್ಮ ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದಾರೆ
ಕಟ್ಟಡದ ಕಡತ ನೀಡಲು ೫ ಸಾವಿರ ಲಂಚ ಕೇಳಿದ್ದರು ಅವಿನಾಶ ಧಾಮನಕರ ಅವರಿಂದ ಲಂಚ ಕೇಳಿದ್ದರಿಂದ ಅವಿನಾಶ ಈ ಕುರಿತು ಭ್ರಷ್ಟಾಚಾರ ನಿಗ್ರಹ ದಳ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಎಸಿಬಿ ಡಿವೈಎಸ್ಪಿ ಕೆ.ಎಚ್.ಪಠಾಣ ನೇತೃತ್ವದ ತಂಡದಿಂದ ದಾಳಿ.ನಡೆಸಿದೆ ಸದ್ಯ ಬಲೆಗೆ ಬಿದ್ದ ಪಾಲಿಕೆ ಸಿಬ್ಬಂದಿಯನ್ನ ತೀವ್ರ ವಿಚಾರಣೆ ನಡೆಸಲಾಗುತ್ತಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ