ಬೆಳಗಾವಿ- ಬೆಳಗಾವಿ ಮಹಾಪೌರ ಹಾಗು ಉಪ ಮಹಾಪೌರರ ಚುನಾವಣೆ ಮಾರ್ಚ 1 ರಂದು ನಡೆಯಲಿದ್ದು ಪಾಲಿಕೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಬೆಳಗ್ಗೆ ಶಾಸಕ ಫಿರೋಜ್ ಸೇಠ ಮನೆಯಲ್ಲಿ ೭ ಜನ ಪಾಲಿಕೆ ಸದಸ್ಯರು ಸಭೆ ನಡೆಸಿದ್ದರು. ಇದೀಗ ೧೬ ಜನ ಪಾಲಿಕೆಯ ಸದಸ್ಯ ರೆಸಾರ್ಟ್ ಗೆ ತೆರಳಿದ್ದಾರೆ. ನಗರದ ಕಲಾ ಮಂದಿರದ ಬಳಿ ಪಾಲಿಕೆ ಸದಸ್ಯ ರವಿ ದೋತ್ರೆ, ದೀಪಕ ಜಮಖಂಡಿ ಹಾಗೂ ರಮೇಶ ಸೊಂಟಕ್ಕಿ ನೇತೃತ್ವದಲ್ಲಿ ರೆಸಾರ್ಟ್ ಗೆ ತೆರಳಿದ್ರು.
ಮಹಾನಗರ ಪಾಲಿಕೆಯಲ್ಲಿ ಕನ್ನಡ ಪಾಲಿಕೆಯ ಸದಸ್ಯರ ಸಂಖ್ಯೆ ೨೫ ಇದೆ. ಇದರಲ್ಲಿ ಈಗಾಗಲೇ ಎರಡು ಬಣಗಳಾಗಿವೆ. ಸಚಿವ ರಮೇಶ ಜಾರಕಿಹೊಳಿ ನೇತೃತ್ವದ ಬಣ ಒಂದಾಗಿದ್ದರೆ. ಮತ್ತೊಂದು ಶಾಸಕ ಸತೀಶ ಜಾರಕಿಹೊಳಿ ಹಾಗೂ ಫಿರೋಜ್ ಸೇಠ ನೇತೃತ್ವದ ಬಣವಾಗಿದೆ.
ಎಂಇಎಸ್ ಒಳ ಜಗಳದ ಲಾಭ ಪಡೆಯಬೇಕಿದ್ದ ಕನ್ನಡ ಪರ ಪಾಲಿಕೆ ಸದಸ್ಯರು ಎರಡು ಬಣಗಳಾಗಿ ಹೋಳಾಗಿದ್ದಾರೆ. ಆದರೇ ಇಬ್ಬರ ಉದ್ದೇಶ ಬೆಳಗಾವಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವುದಾಗಿದೆ. ಇವರ ಉದ್ದೇಶ ಇಡೇರಲಿದೆ ಅಥವಾ ಪಾಲಿಕೆಯಲ್ಲಿ ಛಾಪಾಗಳ ಪಾರುಪತ್ಯ ಮುಂದುವರೆಯಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಸಂಜೆ ಎಂಈಎಸ್ ಸದಸ್ಯರು ರೆಸಾರ್ಟ್ ಗೆ
ಸಂಜೆ ಎಂಈಎಸ ಸದಸ್ಯರು ರೆಸಾರ್ಟ್ ಗೆ ತೆರಳಲಿದ್ದಾರೆ ಎಂಎಸ್ ನಲ್ಲಿಯೂ ಎರಡು ಬಣ ಗಳಾಗಿದ್ದು ಕಿರಣ ಸೈನಾಯಕ ಬಣ ರೆಸಾರ್ಟ್ ಗೆ ತೆರಳಲಿದ್ದು ಗುಂಜಟಕರ ಬಣ ಇಲ್ಲಿಯೇ ಇದ್ದುಕೊಂಡು ಎಲ್ಲರನ್ನು ಆಟವಾಡಿಸಲಿದೆ