ಬೆಳಗಾವಿ- ಮಳೆ ಬಂದೈತಿ…ಅಂದ್ರೆ ಸಿವ್ಹಿಲ್ ಆಸ್ಪತ್ರೆ ರೋಗಿಗಳಿಗೆ ಪ್ರಾಬ್ಲಮ್ ಆಗೈತಿ ಅಂತ ತಿಳಿಯಬೇಕು ಯಾಕಂದ್ರ ಮಳೆ ಸುರಿದು ಆಸ್ಪತ್ರೆ ಸೋರಿದ್ರಾಸ್ಪತ್ರೆಯೊಳಗಿನ ರೋಗಿಗಳು ಛತ್ರಿ ಹಿಡ್ಕೊಂಡು ಮಲಗುವ ಪರಿಸ್ಥಿತಿ ಐತ್ರಿ ಸಾಹೇಬ್ತ ಕರುಣೆ …ಮಾನವೀಯತೆ ಇದ್ರೆ ಕ್ರಮ ಕೈಗೊಳ್ಳಿ
ಮಳೆಗಾಲ ಆರಂಭವಾದ್ರೆ ಶಾಲೆಗಳು ಸೋರುವುದು ಸಾಮಾನ್ಯ… ಆದ್ರೆ ಜಿಲ್ಲಾಸ್ಪತ್ರೆ ಸೋರುತ್ತೆ ಅಂದ್ರೆ ನಂಬ್ತೀರಾ. ಬೆಳಗಾವಿ ಜಿಲ್ಲಾಸ್ಪತ್ರೆ ಮಳೆಯಾದ್ರೆ ಸಾಕು ಅವ್ಯವ್ಶಸ್ಥೆ ಆಗರವಾಗುತ್ತದೆ.. ಯಾವುದೇ ವಾರ್ಡಗೆ ಹೋದ್ರೂ ಟಿಪ್ ಟಿಪ್ ಮಳೆ ಹನಿಗಳು ಬೀಳುವ ಶಬ್ಧ ಕೇಳಿಸುತ್ತದೆ… ಮಳೆಯಾದ್ರೆ ರೋಗಿಗಳು ಅಕ್ಷಶಃ ನರಕಯಾತನೆ ಅನುಭವಿಸುತ್ತಾರೆ ಈ ಕುರಿತು ಒಂದು ವರದಿ ಸಮಗ್ರ ವರದಿ ಓದಿ ಉಗೀರ್ರೀ
ಹೌದು… ನೀವು ಹೀಗೆ ನೋಡುತ್ತಿರುವ ಶೀಥಲಗೊಂಡ ದೃಶ್ಯಗಳು ಬೆಳಗಾವಿ ಜಿಲ್ಲಾಸ್ಪತ್ರೆಯದ್ದು. ಇಲ್ಲಿ ದಿನವೂ ಸಾವಿರಾರೂ ಒಳ ಮತ್ತು ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ.. ಮಳೆ ಆರಂಭವಾದ್ರೆ ಸಾಕು ಅದು ತುರ್ತು ಚಿಕಿತ್ಸಾ ಘಟಕವಾಗಿರಲಿ… ಹೆಸರಿಗೆ ವಾರ್ಡ್ ಆಗಿರಲಿ… ಚಿಕ್ಕ ಮಕ್ಕಳ ವಾರ್ಡ್ ಆಗಿರಲಿ ಮತ್ತು ಹೆಣ್ಣು ಮಕ್ಕಳ ವಾರ್ಡ್ ಆಗಿರಲಿ ಇಲ್ಲಿ ಮಳೆ ನೀರು ಸೋರುತ್ತದೆ… ರೋಗಿಗಳು ಮಲಗುವ ಬೆಡ್ ಮೇಲೆ ಮಳೆ ಹನಿಗಳು ಬೀಳುತ್ತವೆ… ವಾರ್ಡು ಪೂರ್ತಿ ರೊಜ್ಜಾಗ ಪರಿವರ್ತನೆ ಆಗುತ್ತದೆ.. ಆದ್ರೂ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಗೋಳು ಯಾರಿಗೂ ಕೇಳಿಸುತ್ತಿಲ್ಲ…. ದಿನವೂ ರೋಗಿಗಳು ಮಳೆಯಿಂದ ಆಗುತ್ತಿರುವ ಸಮಸ್ಯೆಯಿಂದ ಪರದಾಟ ಮಾತ್ರ ನಿಂತಿಲ್ಲ ನೋಡ
ಇನ್ನು ಹೀಗೆ ಜಿಲ್ಲಾಸ್ಪತ್ರೆ ಸರ್ಕಾರಿ ಶಾಲೆಗಳಿಗಿಂತಲೂ ದುಸ್ಥಿತಿಗೆ ತಲುಪಿದೆ.. ದಿನವೂ ಮಳೆ ನೀರಿನಲ್ಲಿ ರೋಗಿಗಳು ಚಿಕಿತ್ಸೆ ಪಡೆಯಬೇಕು… ರೋಗಿಗಳ ಜೊತೆ ಬಂದವರೂ ನೆಲದ ಮೇಲೆ ಮಲಗಬೇಕೆಂದ್ರೂ ಮಳೆ ನೀರಿನಿಂದ ನೆಲವೂ ಸಂಪೂರ್ಣ ಒದ್ದೆಯಾಗಿರುತ್ತದೆ.. ಆಸ್ಪತ್ರೆಯ ರೋಗಿಗಳು ವೈದ್ಯರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನಲಾಗಿಲ್ಲ. ಇಷ್ಟೇಲ್ಲಾ ಕಷ್ಟಗಳನ್ನ ಬಡ ರೋಗಿಗಳು ಜಿಲ್ಲಾಸ್ಪತ್ರೆಯಲ್ಲಿ ಅನುಭವಿಸುತ್ತಿದ್ದರೂ ಬೀಮ್ಸ್ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲಾ… ಸಾರ್ವಜನಿಕರು ಜಿಲ್ಲಾಸ್ಪತ್ರೆ ಸೋರುತ್ತಿದೆ ಎಂದು ಜಿಲ್ಲಾಡಳಿತ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಂದ್ರೂ ಡೇಂಟ್ ಕೇರ್ ಎಂಬತೆ ವರ್ತಿಸುತ್ತಿದ್ದಾರೆ ನೋಡಿ.
ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳು ಮಳೆಯಿಂದ ವಾರ್ಡುಗಳು ಸೋರುತ್ತಿರುವುದರಿಂದ ಪರದಾಡುತ್ತಿದ್ದಾರೆ… ಇನ್ನಾದ್ರು ರಾಜ್ಯ ಸರ್ಕಾರ ಅಥವಾ ಬೀಮ್ಸ್ ಅಧಿಕಾರಿಗಳು ಎಚ್ಚೆತ್ತುಕೊಂಡು ಬಡ ರೋಗಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ. ಎಚ್ವರ …ಎಚ್ವರ…