ಬೆಳಗಾವಿ- ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ವಾರ್ಡ ಬಾಯ್ ಕೆಲಸ ಮಾಡುತ್ತಿದ್ದ ೨೨ ವರ್ಷದ ಯವಕ ಹಲವಾರು ತಿಂಗಳುಗಳಿಂದ ವೇತನ ಸಿಗದೇ ಇರುವದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಬಾಕ್ಸೈಟ್ ರಸ್ತೆಯ ನಿವಾಸಿ ರಾಕೇಶ ಕಾಂಬಳೆ ಎಂಬಾತ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ವಾರ್ಡ ಬಾಯ್ ಕೆಲಸ ಮಾಡುತ್ತಿದ್ದ ಕಳೆದ ಒಂಬತ್ತು ತಿಂಗಳುಗಳಿಂದ ಆತನ ವೇತನ ಪಾವತಿ ಆಗದೇ ಇರುವದರಿಂದ ನಿನ್ನೆ ಮದ್ಯರಾತ್ರಿ ವಿಷ ಕುಡಿದು ಆತ್ಮ ಹತ್ಯೆಗೆ ಯತ್ನಿಸಿ ಈಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ
ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆತ್ಮಹತ್ಯೆಗೆ ಯತ್ನಿಸಿರುವ ರಾಕೇಶ ಕಾಂಬಳೆ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ