ಬೆಳಗಾವಿ- ಇತ್ತೀಚಿಗೆ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹೀಂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಸುಮಾರು ಒಂದು ಘಂಟೆ ಕಾಲ ಚರ್ಚೆ ಮಾಡಿರುವ ವಿಷಯ ಬೆಳಗಾವಿ ಕಾಂಗ್ರೆಸ್ ಪಾಳೆಯದಲ್ಲಿ ಬಿರುಗಾಳಿ ಎಬ್ಬಿಸಿದೆ
ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹೀಂ ಕಳೆದ ಮೂರು ತಿಂಗಳಿನಿಂದ ಬೆಳಗಾವಿಗೆ ಹತ್ತು ಹಲವಾರು ಬಾರಿ ಬೆಳಗಾವಿಗೆ ಭೇಟಿ ನೀಡಿ ಇಲ್ಲಿಯ ಕಾಂಗ್ರೆಸ್ ಮುಖಂಡರ ಜೊತೆ ಹಲವಾರು ಸುತ್ತಿನ ಸಭೆಗಳನ್ನು ಮಾಡಿದ ವಿಷಯ ಅನೇಕ ಅನುಮಾನಗಳಿಗೆ ಕಾರಣವಾಗಿತ್ತು
ಕಾಂಗ್ರೆಸ್ ಮುಖಂಡ ಬೆಳಗಾವಿ ಉತ್ತರ ಮತಕ್ಷೇತ್ರದ ಮೇಲೆ ಕಣ್ಣೀಟ್ಟಿದ್ದಾರೆ ಅದಕ್ಕಾಗಿ ಅವರು ಪದೇ ಪದೇ ಬೆಳಗಾವಿಗೆ ಬರುತ್ತಿದ್ದಾರೆ ಎನ್ನುವ ಸುದ್ಧಿ ಸಾಕಷ್ಟು ಪ್ರಚಾರ ಪಡೆದುಕೊಂಡಿತ್ತು ಈ ಸಂಧರ್ಭದಲ್ಲಿ ಬೆಳಗಾವಿ ಸುದ್ಧಿ ಡಾಟ್ ಕಾಮ್ ಸಿ ಎಂ ಇಬ್ರಾಹೀಂ ಜೆಡಿಎಸ್ ಸೇರಲಿದ್ದಾರೆ ಎಂಬ ಮುನ್ಸೂಚನೆ ನೀಡಿತ್ತು
ಆದರೆ ಇತ್ತೀಚಿಗೆ ಕಾಂಗ್ರೆಸ್ ಮುಖಂಡ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಸುಧೀರ್ಘ ಚರ್ಚೆ ಮಾಡಿರುವ ವಿಷಯ ಈಗ ಬೆಳಗಾವಿ ಕಾಂಗ್ರೆಸ್ ಮುಖಂಡರಲ್ಲಿ ತಳಮಳವನ್ನುಂಟು ಮಾಡಿದೆ
ಸಿಎಂ ಇಬ್ರಾಹೀಂ ಜೆಡಿಎಸ್ ಸೇರೀದು ಖಚಿತ ಬೆಳಗಾವಿ ಉತ್ತರದಿಂದ ಸ್ಪರ್ದೆ ಮಾಡ್ಹೋದು ನಿಶ್ಚಿತ ಎನ್ನುವ ಸುದ್ಧಿ ಬೆಳಗಾವಿ ಉತ್ತರದ ಕಾಂಗ್ರೆಸ್ ವಿರೋದಿ ಅಲೆಗಳ ಮೂಲಕ ತೇಲಿ ಬರುತ್ತಿದೆ
ಸಿಎಂ ಇಬ್ರಾಹೀಂ ಬೆಳಗಾವಿ ಉತ್ತರದಿಂದ ಸ್ಪರ್ದೆ ಮಾಡಿದ್ದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಯಾವ ರೀತಿ ಪೆಟ್ಟು ಬೀಳಬಹುದು ಎನ್ನುವ ಪ್ರಶ್ನೆಗಳಿಗೆ ಉತ್ತರದಲ್ಲಿ ಉತ್ತರ ಹುಡುಕುವ ಚಟುವಟಿಕೆಗಳು ಅಹೋರಾತ್ರಿ ನಡೆಯುತ್ತಿವೆ
ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಹತ್ತು ಹಲವು ಬಾರಿ ಸುತ್ತಾಡಿರುವ ಸಿಎಂ ಇಬ್ರಾಹೀಂ ಕ್ಷೇತ್ರದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದಾರೆ ಈ ಕ್ಷೇತ್ರದಲ್ಲಿರುವ ಮುಸ್ಲೀಂ ಕಾಂಗ್ರೆಸ್ ವಿರೋಧಿ ಅಲೆಯ ಕುರಿತು ಸಿಎಂ ಇಬ್ರಾಹೀಂ ಮನವರಿಕೆ ಮಾಡಿಕೊಂಡಿದ್ದು ಈ ಕ್ಷೇತ್ರದಲ್ಲಿ ತಮ್ಮ ಮೂರನೇಯ ಕಣ್ಣು ತೆರೆಯುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ
ಬೆಳಗಾವಿಯ ಎರಡನೇಯ ಸ್ಥರದ ಕಾಂಗ್ರೆಸ್ ನಾಯಕರು ಸಿಎಂ ಇಬ್ರಾಹೀಂ ಜೊತೆ ಸಂಪರ್ಕದಲ್ಲಿದ್ದು ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಸೊಕ್ಕು ಮುರಿಯಲು ಮುಸ್ಲೀಂ ಮುಖಂಡರೇ ಸಿದ್ಧತೆ ಮಾಡಿಕೊಳ್ಳುತ್ತಿರುವ ವಿಷಯ ಗುಟ್ಟಾಗಿ ಉಳಿದಿಲ್ಲ