Breaking News

ಮೋದಿ ಅವರದ್ದು ಕೇವಲ ಮನ್ ಕೀ ಬಾತ್..ನಮ್ಮದು ಕಾಮ್ ಕೀ ಬಾತ್…..

ಮೋದಿ ಮ್ಯಾಜಿಕ್ ನಡೆಯೋದಿಲ್ಲ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ

ಬೆಳಗಾವಿ- ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ
ಗೋಕಾಕ್ ದಲ್ಲಿ ೧೧೦ ಕೋಟಿ ರೂಪಾಯಿಗಳ ಕಾಮಗಾರಿಗಳಿಗೆ ಚಾಲನೆ ಕೊಟ್ಟಿದ್ದೇವೆರಮೇಶ್ ಜಾರಕಿಹೊಳಿಯವ್ರಿ ಈ ಚುನಾವಣೆಯಲ್ಲಿ ಜಿಲ್ಲೆಯ ೧೮ ಕ್ಷೇತ್ರಗಳನ್ನು ಗೆಲ್ಲಿಸುವ ಜವಾಬ್ದಾರಿ ಅವರಿಗಿದೆ ಮುಂದಿನ ಚುನಾವಣೆಯಲ್ಲಿ ಕನಿಷ್ಠ ೧೫ ಸ್ಥಾನಗಳನ್ನು ಗೆದ್ದೆ ಗೆಲ್ಲಬೇಕು ಅಂತ ಹೇಳಿದಿನಿ. ಅವರು ಒಪ್ಕೊಂಡಿದಾರೆ. ಬೆಳಗಾವಿಯಲ್ಲಿ ಕಾಂಗ್ರೆಸ್ ಬಲಿಷ್ಟವಾಗಿದೆ ಎಂದು ಸಿಎಂ ಸಿದ್ರಾಮಯ್ಯ ಹೇಳಿದರು

ಐದು ವರ್ಷದ ಅಧಿಕಾರದಲ್ಲಿ ನಮ್ಮ ವಿರುದ್ದದ ಅಲೆ ಇಲ್ಲ ಬಿಜೆಪಿ ವಿರುದ್ಧದ ಅಲೆ ಇದೆ ಮೊದಿ, ಶಾ ಕರ್ನಾಟಕದ ಮೇಲೆ ಕಣ್ಣಿಟ್ಟಿದ್ದಾರೆ. ಬಿಜೆಪಿ ಶಾಸಕರೊಬ್ರನ್ನ ಕೇಳಿದಾಗ ನಾವು ಮೋದಿ ಮೇಲೆ ಡಿಪೆಂಡ್ ಆಗಿದಿವಿ ಅಂತ ಹೇಳಿದ್ರು ಮೋದಿ ಅಲೆ ಇದ್ದಾಗ ಇದ್ದ ಮೋದಿ ವರ್ಚಸ್ಸು ಈಗ ಇಲ್ಲ ರಾಜ್ಯದಲ್ಲಿ ಮೋದಿ ಮ್ಯಾಜಿಕ್ ನಡೆಯೋದಿಲ್ಲ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಿದ್ರಾಮಯ್ಯ ವಿಶ್ವಾಸ ವ್ಯೆಕ್ತಪಡಿಸಿದರು

ಯಡಿಯೂರಪ್ಪ ವಿರುದ್ದ ಸಿಎಂ ವಾಗ್ದಾಳಿ ನಡೆಸಿ ಗುಂಡ್ಲುಪೇಟೆ ಚುನಾವಣೆ ಉಪ ಚುನಾವಣೆಗೆ ಮುನ್ನ ಯಡಿಯೂರಪ್ಪ, ಈ ಚುನಾವಣೆ ೨೦೧೮ರ ಚುನಾವಣೆಗೆ ದಿಕ್ಸೂಚಿ ಅಂದಿದ್ರು. ಅಲ್ಲಿ ನಾವು ಗೆದ್ದಿದ್ದೇವೆ ಈಗ ಅದು ಕಾಂಗ್ರೆಸ್ಸಿಗೆ ದಿಕ್ಸೂಚಿ ಯಡಿಯೂರಪ್ಪ ಮಿಷನ್ ೧೫೦- ಮಿಷನ್ ೧೫೦ ಅಂತಿದ್ದಾರೆ. ಅವರ ಮಿಷನ್ ೧೫೦ ಠುಸ್ಸ್ ಆಗಿದೆ ಈಗ ಅವರದ್ದೇನಿದ್ರು ಮಿಷನ್ ೫೦ ಅಷ್ಟೆ ಎಂದು ಮುಖ್ಯಮಂತ್ರಿಗಳು ವ್ಯೆಂಗ್ಯವಾಡಿದರು

ಜಾತಿ ಜಾತಿಗಳ ನಡುವೆ ಬೆಂಕಿ ಇಟ್ಟು ಅಮಾಯಕರನ್ನ ಕೊಲೆ ಮಾಡಿ ರಾಜಕೀಯ ಮಾಡುತ್ತಿರೊ ಬಿಜೆಪಿ ಜಾತಿ ರಾಜಕಾರಣ ಮಾಡುತ್ತಿದೆ ಎಂದು ಆರೋಪ ಮಾಡಿದ್ರು
*ಆಜಾನ್*
ಸಿಎಂ ಸಿದ್ದರಾಮಯ್ಯ ಭಾಷಣದ ವೇಳೆ ಮುಸ್ಲಿಂ ಸಮುದಾಯದ ಆಜಾನ್ ಶುರುವಾದಾಗ ಪ್ರಧಾನಿ ಮೋದಿ ಪಾಲೋ ಮಾಡಿ ಭಾಷಣ ಸ್ಥಗಿತಗೊಳಿಸಿದ ಸಿಎಂ ಸಿದ್ದರಾಮಯ್ಯ
ಮುಸ್ಲಿಂ ಆಜಾನ್ ನಂತರ ಮತ್ತೆ ಭಾಷಣ ಪ್ರಾರಂಭಿಸಿದರು

ಮಹಾದಾಯಿ ನಿಯೋಗವನ್ನ ದೆಹಲಿ ಕರೆದುಕೊಂಡು ಹೋದಾಗ ಬಿಜೆಪಿ ನಾಯಕರು ತುಟಿ-ಪಿಟಿಕ್ ಅನ್ನಲ್ಲಿಲ್ಲ.
೨೦೧೦ ರಲ್ಲಿ ಸಾಲ ಮನ್ನಾ ಮಾಡಿ ಅಂದಾಗ ಯಡಿಯೂರಪ್ಪ, ಆಗಲ್ಲ, ನಮ್ಮತ್ರ ನೋಟ್ ಪ್ರಿಂಟ್ ಮಾಡುವ ಮಷಿನ್ ಇಲ್ಲ ಅಂದಿದ್ರು ನರೇಂದ್ರ ಮೋದಿ ಮನ್ ಕಿ ಬಾತ್.. ಮನ್ ಕಿ ಬಾತ್ ಅಂತಿದಾರೆ.. ಅದು ಖಾಲಿ ಮನ್ ಕಿ ಬಾತ್. ನಮ್ಮದು ಕಾಮ್ ಕಿ ಬಾತ್ವಿ ದೇಶಿ ಮಾರುಕಟ್ಟಯಲ್ಲಿ ಕಚ್ಚಾತೈಲದ ಬೆಲೆ ಇಳಿದ್ರು ಯಾಕೆ ಪೆಟ್ರೋಲ್ ಬೆಲೆ ಇಳಿಲಿಲ್ಲ. ಆ ಹಣ ಎಲ್ಲೊಯ್ತು. ಎಂದು ಮೋದಿಯವ್ರಿಗೆ ಕೇಳೊಕ್ ಬಯಸ್ತಿನಿ ಎಂದ ಸಿಎಂ ಅಚ್ಚೆ ದಿನ್ ಆಯೆಗಾ.. ಅಚ್ಚೆ ದಿನ್ ಆಯೆಗಾ ಅಂತಿದ್ರು ಇದೇನಾ ಅಚ್ಚೆ ದಿನ್ ಎಂದು ಸಿಎಂ ಪ್ರಶ್ನೆ. ಅಚ್ಚೆ ದಿನ್ ಏನಿದ್ರು ಅದಾನಿ ಅಂಬಾನಿ, ಜೈಶಾ ಅಂತವರಿಗೆ ಮಾತ್ರ ಅಚ್ಛೆ ದಿನ್ ಎಂದು ಸಿದ್ರಾಮಯ್ಯ ಮೋದಿ ಆಡಳಿತದ ವೈಖರಿಯನ್ನು ಕಟುವಾಗಿ ಟೀಕಿಸಿದರು
ನರೇಂದ್ರ ಮೋದಿಜಿ ಕಿತ್ನೆ ಜೂಟ್ ಬೊಲೆಗಾ ಎಂದು ಹಿಂದಿಯಲ್ಲಿ ಕೇಳಿದ ಸಿಎಂ ಸಿದ್ದರಾಮಯ್ಯ ವಿರುದ್ದ ಪರಿವರ್ತನಾ ಯಾತ್ರೆಯಲ್ಲಿ ದಾಖಲೆ ಬಿಡುಗಡೆ ಮಾಡ್ತಿನಿ ಅಂತ ಯಡಿಯೂರಪ್ಪ ಪುಂಗಿ ಊದುತ್ತಿದ್ದಾರೆ ಯಡಿಯೂರಪ್ಪ ಪುಂಗಿ ಉದಿದ್ದೇ ಊದಿದ್ದು ಆದ್ರೆ ಹಾವು ಮಾತ್ರ ಬರ್ತಿಲ್ಲ. ಹಾವು ಇದ್ರೆ ತಾನೆ ಹೊರಗೆ ಬರೋದು. ನಮ್ಮದು ಬ್ರಷ್ಟಾಚಾರ ಮುಕ್ತ ಸರ್ಕಾರ ಎಲ್ಲಾ ಭಾಷೆ, ಎಲ್ಲ ಸಮುದಾಯದವರನ್ನ ಸಮಾನವಾಗಿ ಕಾಣುವ ಪಕ್ಷ ಅಂದ್ರೆ ದೇಶದಲ್ಲಿ ಕಾಂಗ್ರೆಸ್ ಮಾತ್ರ ಎಂದರು
ಬಿಜೆಪಿ ಕೋಮುವಾದಿ ಪಕ್ಷ ಕೋಮುವಾದಿ ಬಿಜೆಪಿ ಮತ್ತು ಸೊಡೊ ಸೆಕ್ಯುಲರ್ ವಾದಿ ಜೆಡಿಎಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಬಾರ್ದು ಬಿಜೆಪಿಯವ್ರು ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿ ಮಾಡ್ತಿವಿ ಅಂತಿದಾರೆ. ಆದ್ರೆ ನಾವ್ ಹಾಗೆ ಅನ್ನಲ್ಲ. ನಮ್ಮ ಗುರಿ ಅದಲ್ಲ ಇಗಾಗಲೇ ಹಸಿವುಮುಕ್ತ ಮಾಡಿದಿವಿ. ಇನ್ನು ನಮ್ಮ ಗುರಿ ರಾಜ್ಯವನ್ನ ಬರ ಮುಕ್ತ ಮಾಡ್ತಿವಿ ಎಂದ ಸಿಎಂ ಅನಂತಕುಮಾರ್ ಹೆಗ್ಡೆ ಇಷ್ಟೆ ಸಾಕಾ.. ಮಾರಿಹಬ್ಬ ಬೇಕಾ ಅಂತಾರೆ ಇಂತವರು ಸಾರ್ವಜನಿಕ ರಾಜಕಾರಣದಲ್ಲಿ ಇರಲು ಲಾಯಕ್ಕಲ್ಲ. ನಾಲಾಯಕ್ ಎಂದು ಸಿಎಂ ವಾಗ್ದಾಳಿ ನಡೆಸಿದ್ರು

ಬೆಳಗಾವಿ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿ ಕಡಿಮೆ ಜನರನ್ನ ಸೇರಿಸುವ ಉದ್ದೇಶ ಇತ್ತು. ಆದ್ರೆ ನಮ್ಮ ಕಾರ್ಯಕರ್ತರು ಬೇಡ ಬಿಜೆಪಿಯವ್ರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಅದಕ್ಕೆ ದೊಡ್ಡ ಸಮಾವೇಶ ಮಾಡೋಣ ಅಂದ್ರು ಅದಕ್ಕಾಗಿ ಈ ಸಮಾವೇಶ ಮಾಡುತ್ತಿದ್ದೇವೆ ಎಷ್ಟೇ ಬಿನ್ನಾಭಿಪ್ರಾಯವಿದ್ರು ಬದಿಗೊತ್ತಿ ಜಿಲ್ಲೆಯಲ್ಲಿ ೧೦ ರಿಂದ ೧೨ ಸೀಟುಗಳನ್ನು ಗೆಲ್ಲುತ್ತೇವೆ ಸತೀಶ್ ಜಾರಕಿಹೊಳಿಯವ್ರ ಮಾತು ಕೇಳಿಬೇಡಿ, ಪ್ರಕಾಶ್ ಹುಕ್ಕೇರಿ ಮಾತು ಕೇಳಬೇಡಿ ಪಕ್ಷ ಯಾರಿಗೆ ಟಿಕೆಟ್ ಕೊಡುತ್ತೋ ಅವರನ್ನ ಗೆಲ್ಲಿಸಿ ಈಗಾಗಲೇ ನನ್ನ ಕ್ಷೇತ್ರದಲ್ಲಿ ೪೨ ಜನ ಆರ್ ಎಸ್.ಎಸ್ ಕಾರ್ಯಕರ್ತರು ಬಂದು ಅಪಪ್ರಚಾರ ನಡೆಸುತ್ತಿದ್ದಾರೆ. ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ. ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತಿದೆ. ಇವರ ಯಾರ ಮಾತನ್ನು ಕೇಳಬೇಡಿ ಎಂದು ರಮೇಶ ಜಾರಕಿಹೊಳಿ ಸಭಿಕರಲ್ಲಿ ಮನವಿ ಮಾಡಿಕೊಂಡರು

ನೀರಾವರಿ ಮಂತ್ರಿ ಎಂಬಿ ಪಾಟೀಲ ಮಾತನಾಡಿ ಯಡಿಯೂರಪ್ಪ ಹೇಳತಾರೆ ಉತ್ತರ ಕರ್ನಾಟಕ ಕ್ಕೆ ಈ ಸರ್ಕಾರ ಏನೂ ಮಾಡಿಲ್ಲ ಎಂದು ಯಡಿಯೂರಪ್ಪ ಸುಳ್ಳು ಹೇಳುತ್ತಾರೆ. ಅವರ ಅಧಿಕಾರದಲ್ಲಿ ಉತ್ತರ ಕರ್ನಾಟಕಕ್ಕೆ ಏನೂ ಮಾಡಿಲ್ಲಾ ನಮ್ಮ ಸರ್ಕಾರ ಐದು ವರುಷದಲ್ಲಿ ೫೦ ಸಾವಿರ ಕೋಟಿ ಹಣ ನೀರಾವರಿಗೆ ಖರ್ಚು ಮಾಡಿದ್ದೆವೆ.
ನುಡಿದಂತೆ ನಡೆದಿದ್ದೆವೆ. ಈ ಯಡಿಯೂರಪ್ಪ .ಸದಾನಂದಗೌಡ . ಶೇಟ್ಟರ್ ಸರ್ಕಾರದಲ್ಲಿ ೧೮ ಸಾವಿರ ಹಣ ಮಾತ್ರ ನೀರಾವರಿಗೆ ಕೊಟ್ಟಿದ್ದಾರೆ ಪ್ರತಿಯೊಂದು ಇಲಾಖೆಯಲ್ಲೂ ಉತ್ತರ ಕರ್ನಾಟಕಕ್ಕೆ ಅತಿ ಹೆಚ್ಚು ಅನುದಾನ ಕೊಟ್ಟಿದ್ದೆವೆ ಸದನದಲ್ಲಿ ಪ್ರಶ್ನೆ ಮಾಡತಾರೆ ನಾವು ಉತ್ತರ ಕೊಡುವ ಸಮಯದಲ್ಲಿ ಗೋವಿಂದ ಕಾರಜೋಳ. ಜಗದೀಶ್ ಶೇಟ್ಟರ್ . ಈಶ್ವರಪ್ಪಾ ಗಯಾಬ್ ಆಗ್ತಾರೆ ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು ಚಕ್ ಮುಖಾಂತರ ಲಂಚ ಪಡೆದ ಯಡಿಯೂರಪ್ಪ ನಮ್ಮ ಬಗ್ಗೆ ಮಾತನಾಡುತ್ತಾರೆ
ನಮ್ಮ ವಿರುದ್ದ ಇಲ್ಲಿಯವರೆಗೆ ಒಂದೆ ಒಂದೆ ಪ್ರಕರಣ ದಾಖಲಾಗಿಲ್ಲಾ ಜೈಲಿಗೆ ಹೋಗಿ ಬಂದು ಪಚ್ಚಾತಾಪಕ್ಕಾಗಿ ಬಿ.ಜೆ.ಪಿ ನಾಯಕರು ಪರಿವರ್ತನೆ ರ್ಯಾಲಿ ಮಾಡುತ್ತಿದ್ದಾರೆ.
ಎಂದು ಸಚಿವ ಎಂ. ಬಿ ಪಾಟೀಲ್ ಬಿ.ಜೆ.ಪಿ ವಿರುದ್ದ ವಾಗ್ದಾಳಿ ನಡೆಸಿದರು

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *