Breaking News

ಮಂಗಳವಾರ ರಾಜಾಹುಲಿ ಬೆಳಗಾವಿಗೆ…..!!!!

ಬೆಳಗಾವಿ- ಬರುವ ಮಂಗಳವಾರ ದಿನಾಂಕ. 25 ರಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಬೆಳಗಾವಿಗೆ ಭೇಟಿ ನೀಡಲಿದ್ದಾರೆಂದು ಬೆಂಗಳೂರಿನ ವಿಧಾನಸಭೆಯ ಮೂಲಗಳು ತಿಳಿಸಿವೆ

ಮಂಗಳವಾರ ಬೆಳಗಾವಿ ನಗರಕ್ಕೆ ಭೇಟಿ ನೀಡಲಿರುವ ಸಿಎಂ ಯಡಿಯೂರಪ್ಪನವರು,ಬೆಳಗಾವಿಯ ಸುವರ್ಣ ವಿಧಾನಸೌಧದ ಸೆಂಟ್ರೆಲ್ ಹಾಲ್ ನಲ್ಲಿ ಬೆಳಗಾವಿ,ಹಾಗೂ ಧಾರವಾಡ ಜಿಲ್ಲೆಗಳ,ಪ್ರವಾಹ ಪರಿಹಾರ,ಮತ್ತು ಕೋವಿಡ್ ನಿಯಂತ್ರಣದ ಕುರಿತು ಪ್ರಗತಿ ಪರಶೀಲನೆ ನಡೆಸಲಿದ್ದಾರೆಂದು ತಿಳಿದು ಬಂದಿದೆ.

ಧಾರವಾಡ- ಮತ್ತು ಬೆಳಗಾವಿ ಎರಡೂ ಜಿಲ್ಲೆಗಳ ಪ್ರಗತಿ ಪರಶೀಲನಾ ಸಭೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲೇ ನಡೆಯಲಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿದ್ದು,ಈ ಕುರಿತು ಸರ್ಕಾರದಿಂದ ಅಧಿಕೃತ ಮಾಹಿತಿ ಬರುವದಷ್ಟೇ ಬಾಕಿ ಇದೆ

ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಇದ್ದು ಬಹಳ ದಿನಗಳ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಬೆಳಗಾವಿಗೆ ಬರುತ್ತಿರುವದು ವಿಶೇಷವಾಗಿದೆ.

ಕೋವೀಡ್ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನವರು ಬೆಂಗಳೂರು ಬಿಟ್ಟು ಬೇರೆ ಜಿಲ್ಲೆಗಳಿಗೆ ಭೇಟಿ ನೀಡಿರಲಿಲ್ಲ ಸುದೀರ್ಘ ಅವಧಿಯ ಬಳಿಕ ಸಿಎಂ ರಾಜ್ಯದ ಎರಡನೇಯ ರಾಜಧಾನಿ,ಕುಂದಾನಗರಿ ಬೆಳಗಾವಿಗೆ ಭೇಟಿ ನೀಡಿ ಎರಡು ಜಿಲ್ಲೆಗಳ ಪ್ರಗತಿ ಪರಶೀಲನೆ ನಡೆಸುತ್ತಿರುವದು ಮಹತ್ವದ ಸಂಗತಿಯಾಗಿದೆ

ಈ ಕುರಿತು ಮುಖ್ಯಂತ್ರಿಗಳ ಸಚಿವಾಲಯದಿಂದ ಅಧಿಕೃತ ಮಾಹಿತಿ ಬರಬೇಕಾಗಿದೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *