
ಬೆಳಗಾವಿ- ಗೋಕಾಕ ಉಪ ಚುನಾವಣೆಯಲ್ಲಿ ದಾಖಲಾದ ಚುನಾವಣಾ ನೀತಿ ಸಂಹಿತೆ ಪ್ರಕರಣವೊಂದಕ್ಕೆ ಸಮಂಧಿಸಿದಂತೆ ಸೆಪ್ಟೆಂಬರ್ 1 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಗೋಕಾಕ ಸಿವ್ಹಿಲ್ ಜಡ್ಜ್ JMFC ಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ಗೋಕಾಕ ಉಪ ಚುನಾವಣೆಯಲ್ಲಿ ವೀರಶೈವ ಲಿಂಗಾಯತರು ಬಿಜೆಪಿಗೆ ಮತ ಹಾಕಬೇಕೆಂದು,ಚುನಾವಣಾ ಪ್ರಚಾರದ ಸಭೆಯಲ್ಲಿ ಮತಯಾಚಿಸಿದ್ದರು,ಜಾತಿ ಹೆಸರಿನಲ್ಲಿ ಮತಯಾಚನೆ ಮಾಡಿದ್ದಾರೆ ಎಂದು ಆರೋಪಿಸಿ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣ ಗೋಕಾಕ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಮಂಧಿಸಿದಂತೆ ಗೋಕಾಕ್ ಪೋಲೀಸ್ ಠಾಣೆಯಿಂದ ನ್ಯಾಯಾಲಯದಲ್ಲಿ “B” ರಿಪೋರ್ಟ್ ಸಲ್ಲಿಕೆಯಾಗಿತ್ತು ಆದ್ರೆ ನ್ಯಾಯಾಲಯ “B” ರಿಪೋರ್ಟ್ ನ್ನು ತಿರಸ್ಕಾರ ಮಾಡಿ ಮುಖ್ಯಮಂತ್ರಿ ಬಿ .ಎಸ್ ಯಡಿಯೂರಪ್ಪ ನವರಿಗೆ ಸೆಪ್ಟೆಂಬರ್ 1ರಂದು ನ್ಯಾಯಾಲಯಕ್ಕೆ ಹಾಜರಾಗುತೆ ಸಮನ್ಸ್ ಜಾರಿ ಮಾಡಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ