ಬೆಳಗಾವಿ-ಹಲವಾರು ದಶಕಗಳ ನಂತರ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ರಾಜಕೀಯ ಪಕ್ಷಗಳ ಚಿಹ್ನೆಗಳ ಮೇಲೆ ನಡೆಯುತ್ತಿದೆ.ಬಿಜೆಪಿ ಮತ್ತು ಕಾಂಗ್ರೆಸ್ ಆಕಕ್ಷಿಗಳು ಅಭ್ಯರ್ಥಿಗಳ ಪಟ್ಟಿ ಯಾವಾಗ ಬಿಡುಗಡೆ ಆಗುತ್ತದೆ ಎಂದು ಕಾಯುತ್ತಲೇ ಇದ್ದು,ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ನಾ ಮೊದಲೋ ..ನೀ ಮೂದಲೋ ಎನ್ನುತ್ತಲೇ ಇನ್ನುವರೆಗೆ ಪಟ್ಟಿ ಬಿಡುಗಡೆ ಮಾಡದೇ ಇರುವದರಿಂದ ಆಕಾಂಕ್ಷಗಳು ನಾಳೆ…ಬಾ..ಎನ್ನುವ ಉತ್ತರ ಕೇಳಿ ನಲುಗಿ ಹೋಗಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನ,ಆದ್ರೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಇನ್ನುವರೆಗೆ ಅಭ್ಯರ್ಥಿಗಳ. ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ.ಕಾಂಗ್ರೆಸ್ ನವರು ಪಟ್ಟಿ ಬಿಡುಗಡೆ ಮಾಡುವದನ್ನು ಬಿಜೆಪಿ ಕಾಯುತ್ತಿದ್ದರೆ. ಬಿಜೆಪಿ ಪಟ್ಟಿ ಬಿಡುಗಡೆ ಮಾಡುವದನ್ನು ಕಾಂಗ್ರೆಸ್ ಕಾಯುತ್ತಿದೆ. ಈ ವಿಚಾರದಲ್ಲಿ ನಾ..ಮೊದಲೋ ನೀ ಮೊದಲೋ ಎಂದು ಎರಡೂ ಪಕ್ಷಗಳು ಕಾಯ್ದು ನೋಡುವ ತಂತ್ರಕ್ಕೆ ಜೋತು ಬಿದ್ದಿರುವದರಿಂದ,ಆಕಾಂಕ್ಷಿಗಳು ಮಾತ್ರ ಅತಂತ್ರರಾಗಿ ಪಕ್ಷದ ಟಿಕೆಟ್ ಬೇಡ ಎನ್ನುವಷ್ಟು ಬೇಸರಗೊಂಡಿದ್ದಾರೆ.
ಶನಿವಾರ ರಾತ್ರಿಯೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಬೇಕಾಗಿತ್ತು.ಕಾಂಗ್ರೆಸ್ ಕೂಡಾ ಶನಿವಾರ ಸಂಜೆಯೇ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವದಾಗಿ ಹೇಳಿತ್ತು ಆದ್ರೆ ಎರಡೂ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಲಿಲ್ಲ. ಹೀಗಾಗಿ ಎರಡೂ ಪಕ್ಷಗಳ ಆಕಾಂಕ್ಷಿಗಳು ಶನಿವಾರ ರಾತ್ರಿ ನಿದ್ದೆಯೇ ಮಾಡಲಿಲ್ಲ.
ನಾಳೆ ಸೋಮವಾರ ನಾಮಿನೇಶನ್ ಮಾಡಲು ಕೊನೆಯ ದಿನ ಇಂದು ರವಿವಾರ ಮದ್ಯಾಹ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವದಾಗಿ ಕಾಂಗ್ರೆಸ್ ನಾಯಕರು ಹೇಳಿದ್ದಾರೆ.ಹೀಗಾಗಿ ಬೆಳಗಾವಿಯ ಕಾಂಗ್ರೆಸ್ ಕಚೇರಿಯ ಎದುರು ಈಗಲೂ ಆಕಾಂಕ್ಷಿಗಳು ಪಟ್ಟಿ ದಾರಿ ಕಾಯುತ್ತಲೇ ಇದ್ದಾರೆ.ಈ ಕ್ಷಣದ ವರೆಗೂ ಆಕಾಂಕ್ಷಿಗಳು ಲಾಭಿ ಮಾಡುವದನ್ನು ಮಾತ್ರ ನಿಲ್ಲಿಸಿಲ್ಲ.
ಬಿಜೆಪಿ ಒಂದು ಹೆಜ್ಜೆ ಮುಂದಿಟ್ಟು ಆಕಾಂಕ್ಷಿಗಳ ಸಂಧರ್ಶನ ನಡೆಸಿದೆ. ಪ್ರತಿ ದಿನ ಸರಣಿ ಸಭೆಗಳನ್ನು ಮಾಡುತ್ತಲೇ ಇದ್ದು ಅಭ್ಯರ್ಥಿಗಳ ಪಟ್ಟಿಯನ್ನು ಮಾತ್ರ ಘೋಷಣೆ ಮಾಡಿಲ್ಲ.
ನಾಡವಿರೋಧಿ ಎಂಈಎಸ್ ಮಾತ್ರ ಕಾಂಗ್ರೆಸ್ ಮತ್ತು ಬಿಜೆಪಿಯ ಅತೃಪ್ತರನ್ನು ಸೆಳೆಯಲು ಕಾಯ್ದು ಕುಳಿತಿರುವದು ಸತ್ಯ..