ಬೆಳಗಾವಿ ಜಿಲ್ಲೆಗೆ ಬಿಗ್ ಶಾಕ್ ಮತ್ತೆ ನಾಲ್ವರಿಗೆ ಕೊರೊನಾ ಸೋಂಕು.
*ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆ*
ಬೆಳಗಾವಿ-
ಆರೋಗ್ಯ ಇಲಾಖೆಯಿಂದ ಅಧಿಕೃತವಾಗಿ ಮಾಧ್ಯಮ ಪ್ರಕಟಣೆ ಹೊರಬಿದ್ದಿದೆ.
ನಾಲ್ವರು ಬೆಳಗಾವಿ ಜಿಲ್ಲೆಯ ರಾಯಬಾಗ ಮೂಲದವರಿಗೆ ಕೊರೋನಾ ಸೊಂಕು ಇರುವದು ದೃಡವಾಗಿದ್ದು ಇವರೆಲ್ಲರೂ ದೆಹಲಿಯ ಧರ್ಮಸಭೆಯಲ್ಲಿ ಭಾಗಿಯಾಗಿದ್ದರು.
ಪೇಷಂಟ್ ನಂಬರ್ 147 – 36 ವರ್ಷದ ಮಹಿಳೆ.
ಪೇಷಂಟ್ ನಂಬರ್ 148 – 40 ವರ್ಷದ ಪುರುಷ ರಾಯಬಾಗ.
ಪೇಷಂಟ್ ನಂಬರ್ 149 – 67 ವರ್ಷದ ವೃದ್ಧೆ.
ಪೇಷಂಟ್ ನಂಬರ್ 150 – 41 ವರ್ಷದ ಮಹಿಳೆ.
ನಾಲ್ವರು ದೆಹಲಿಯ ನಿಜಾಮುದ್ದಿನ್ ದಿಂದ ಮಾರ್ಚ್ 20ರಂದು ಬೆಳಗಾವಿಗೆ ಆಗಮಿಸಿದ್ದರು.
ಮಾರ್ಚ್ 13ರಿಂದ ಮಾರ್ಚ್ 18ರವರೆಗೂ ದೆಹಲಿಯಲ್ಲಿದ್ದರು.
ದೆಹಲಿಯ ನಿಜಾಮುದ್ದಿನ್ ತಬ್ಲೀಘಿ ಜಮಾತ್ ಧರ್ಮಸಭೆಯಲ್ಲಿ ಭಾಗವಹಿಸಿದ್ದರು.
ಬೆಳಗಾವಿ ಜಿಲ್ಲೆಯಿಂದ 80ಜನ ದೆಹಯ ನಿಜಾಮುದ್ದಿನ್ ಗೆ ತೆರಳಿದ್ದರು.
19ಜನರ ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ಈ ಪೈಕಿ ನಾಲ್ಕು ಜನರಲ್ಲಿ ಕೊರೊನಾ ಸೋಂಕು ದೃಢ.
ಸೋಂಕಿತ ಏಳು ಜನರಿಗೆ ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ನಿಗಾ.
ದೆಹಲಿಯಿಂದ ಮರಳಿದ ಬಳಿಕ ಹೋಮ್ ಕ್ವಾರಂಟೈನ್ ಮಾಡಿರಲಿಲ್ಲ.
ಒಂದು ವಾರದಿಂದ ಇಚೇಗೆ ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಿದ್ದ ಜಿಲ್ಲಾಡಳಿತ.