Breaking News

ಶಾಕಿಂಗ್ ನ್ಯುಸ್ ಬೆಳಗಾವಿ ಜಿಲ್ಲೆಯ ಮೂವರಿಗೆ ಕೊರೋನಾ ಸೊಂಕು ಕನಫರ್ಮ…

ಶಾಕಿಂಗ್ ನ್ಯುಸ್
ಬೆಳಗಾವಿಯ ಮೂವರಿಗೆ ಕೊರೋನಾ ಸೊಂಕು ಕನಫರ್ಮ…

ಬೆಳಗಾವಿ – ಇಂದು ಬೆಳಿಗ್ಗೆಯೇ ಬೆಳಗಾವಿ ಜಿಲ್ಲೆಯ ಮೂವರಿಗೆ ಕೊರೋನಾ ಸೊಂಕು ಇರುವ ಬಗ್ಗೆ ಪಾಸಿಟೀವ್ ರಿಪೋರ್ಟ್ ಬಂದಿತ್ತು ಆದ್ರೆ ಈ ಮಾಹಿತಿಯನ್ನು ಜಿಲ್ಲಾಡಳಿತ ದೃಡ ಪಡಿಸಿರಲಿಲ್ಲ, ಇಂದು ಸಂಜೆ ರಾಜ್ಯ ಸರ್ಕಾರ ಅಧಿಕೃತವಾದ ಹೆಲ್ತ ಬುಲಿಟೀನ್ ಬಿಡುಗಡೆ ಮಾಡಿ,ಜಿಲ್ಲೆಯ ಮೂವರಿಗೆ ಕೊರೋನಾ ಸೊಂಕು ಇರುವ ಬಗ್ಗೆ ದೃಡ ಪಡಿಸಿದೆ.

ಬೆಳಗಾವಿ ಜಿಲ್ಲೆಯ ಮೂವರು ದೆಹಲಿಯ ನಿಜಾಮುದ್ದೀನ್ ಧರ್ಮ ಸಭೆಯಲ್ಲಿ ಪಾಲ್ಗೊಂಡಿದ್ದರು.70 ವರ್ಷದ ವೃದ್ಧ,20 ಮತ್ತು 26 ವರ್ಷದ ಇಬ್ಬರು ಯುವಕರ ರಿಪೋರ್ಟ್ ಪಾಸಿಟೀವ್ ಬಂದಿದೆ ಎಂದು ರಾಜ್ಯ ಸರ್ಕಾರದ ಹೆಲ್ತ ಬುಲಿಟೀನ್ ದೃಡಪಡಿಸಿದೆ.

ಬೆಳಿಗ್ಗೆಯಿಂದ ಜಿಲ್ಲೆಯ ಮೂವರ ಪಾಸಿಟೀವ್ ರಿಪೋರ್ಟ್ ಬಂದಿರುವ ಬಗ್ಗೆ ಯಾರೊಬ್ಬರೂ ದೃಡ ಪಡಿಸದೇ ಇರುವದರಿಂದ ಜಿಲ್ಲೆಯಲ್ಲಿ ಗೊಂದಲ ನಿರ್ಮಾಣವಾಗಿತ್ತು.

ಮಧ್ಯಾಹ್ನದ ಹೊತ್ತಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಬೆಳಗಾವಿ ಜಿಲ್ಲೆಯಲ್ಲಿ ಮೂವರ ರಿಪೋರ್ಟ್ ಪಾಸಿಟೀವ್ ಬಂದಿದೆ ಎಂದು ಮಾದ್ಯಮಗಳಿಗೆ ಹೇಳಿಕೆ ನೀಡಿದ್ದರು.

ಸಂಜೆ ಹೊತ್ತಿಗೆ ಸಚಿವ ಸುರೇಶ್ ಕುಮಾರ್ ಅವರು ಅಧಿಕೃತವಾಗಿ ರಾಜ್ಯದ ಹೆಲ್ತ ಬುಲಿಟೀನ್ ಬಿಡುಗಡೆ ಮಾಡಿ ಬೆಳಗಾವಿಗೆ ಕೊರೋನಾ ವೈರಸ್ ಪ್ರವೇಶಿಸಿದೆ ಎಂದು ದೃಡಪಡಿಸಿದೆ.

ಬೆಳಗಾವಿ ಜಿಲ್ಲೆಯ ಮೂವರು ಕೊರೋನಾ ಸೊಂಕಿತರ ಟ್ರಾವಲ್ ಹಿಸ್ಟರಿಯನ್ನು ಕಲೆ ಹಾಕುತ್ತಿದೆ.ಮೂವರ ಸೊಂಕಿತರು ಯಾರ ಜೊತೆ ಸಂಪರ್ಕ ಮಾಡಿದ್ದರೋ ಅವರನ್ನು ಪತ್ತೆ ಮಾಡಿ ಅವರನ್ನೂ ತಪಾಸಣೆ ಮಾಡಲಾಗುತ್ತಿದೆ.

ಬೆಳಗಾವಿ ಜಿಲ್ಲೆಗೂ ಮಹಾಮಾರಿ ಕೊರೋನಾ ಸೊಂಕು ಎಂಟ್ರಿ ಕೊಟ್ಟಿದ್ದು ಬೆಳಗಾವಿಯ ಜನ ಎಚ್ಚರಿಕೆ ವಹಿಸಿ ಮನೆಗೆ ಎಂಟ್ರಿ ಮಾಡಿ ಮನೆಯಲ್ಲೇ ಲಾಕ್ ಡೌನ್ ಅಗೋದು ಸೂಕ್ತ,ಮತ್ತು ಅಗತ್ಯ

ಬೆಳಗಾವಿ ಜಿಲ್ಲೆಯ ಮೂವರ ರಿಪೋರ್ಟ್ ಪಾಸಿಟೀವ್ ಬರುತ್ತಿದ್ದಂತೆಯೇ ಬೆಳಗಾವಿ ನಗರ ಮತ್ತು ಜಿಲ್ಲೆಯಲ್ಲಿ ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗಿದೆ.ಎಲ್ಲೆಡೆ ಪೋಲೀಸರ ಕಣ್ಗಾವಲು ಇದೆ.

ಜಿಲ್ಲಾಡಳಿತ ಎಲ್ಲ ರೀತಿಯ ಮುಂಜಾಗೃತಾ ಕ್ರಮ ಜರುಗಿಸಿದ್ದು ಯಾರೂ ಆತಂಕ ಪಡುವ ಅಗತ್ಯವಿಲ್ಲ

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *