ಬೆಳಗಾವಿ – ಎಪ್ರಿಲ್ 2 ರಂದು ಕೇವಲ ಒಂದೇ ಒಂದು ಪಾಸಿಟೀವ್ ಕೇಸ್ ಬಂದಿತ್ತು ಇದಾದ ಬಳಿಕ ಸತತ ನಾಲ್ಕು ದಿನಗಳಿಂದ ಕೊರೋನಾ ತಾಂಡವ ಬೆಳಗಾವಿ ಜಿಲ್ಲೆಯಲ್ಲಿ ಶಾಂತವಾಗಿದೆ.
ನಾಲ್ಕು ದಿನಗಳಿಂದ ಬೆಳಿಗ್ಗೆ ಸಂಜೆ ಬಿಡುಗಡೆಯಾದ ಹೆಲ್ತ್ ಬುಲಿಟೀನ್ ಗಳು ಬೆಳಗಾವಿ ಜಿಲ್ಲೆಯ ಜನರಿಗೆ ವರದಾನವಾಗಿವೆ
ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು ಸೊಂಕಿತರ ಸಂಖ್ಯೆ 73 ಅದರಲ್ಲಿ 34 ಜನ ಸೊಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಒಬ್ಬರು ಸಾವನ್ನೊಪ್ಪಿದ್ದು 38 ಸೊಂಕಿತರು ಸಕ್ರೀಯವಾಗಿದ್ದಾರೆ.
ಬೆಳಗಾವಿ ನಗರದಲ್ಲಿ ಕೊರೋನಾ ಪ್ರಯೋಗಾಲಯದ ಸದುಪಯೋಗ ಆಗುತ್ತಿದೆ ಈ ಪ್ರಯೋಗಾಲಯದಲ್ಲಿ ಅತ್ಯಂತ ತ್ವರಿತವಾಗಿ ಟೆಸ್ಟ್ ಮಾಡಲಾಗುತ್ತಿದೆ.
ಬೆಳಗಾವಿ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಲಿಕೆಯಾಗಿದೆ.ಬೆಳಿಗ್ಗೆ 7 ರಿಂದ ಸಂಜೆ 7 ,ಗಂಟೆಯವರೆಗೆ ಜನ ಎಂದಿನಂತೆ ಓಡಾಡುತ್ತಿದ್ದು,7 ರ ನಂತರ ಕರ್ಪ್ಯು ಮಾದರಿಯ ಲಾಕ್ ಡೌನ್ ಆಗುತ್ತಿದೆ.
ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕು ದಿನದಿಂದ ದಿನಕ್ಕೆ ಕ್ಷೀಣವಾಗುತ್ತಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ