ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕಿಲ್ಲರ್ ಕೊರೋನಾ ಚೆಲ್ಲಾಟ ಮುಂದುವರೆದಿದೆ ಈ ವರೆಗೆ ಕಿಲ್ಲರ್ ಕೊರೋನಾ ಬೆಳಗಾವಿ ಜಿಲ್ಲೆಯಲ್ಲಿ 20 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದ್ದು ಇಂದು ಗುರುವಾರವೂ ಮಹಾಮಾರಿಯ ಸಂಕಟ ಮುಂದುವರೆಯಲಿದೆ.
ಬೆಳಗಾವಿ ಜಿಲ್ಲೆಯಲ್ಲಿ ಇವತ್ತಿನವರೆಗೆ 602 ಸೊಂಕಿತರು ಪತ್ತೆಯಾಗಿದ್ದಾರೆ,ಇಂದು ಗುರುವಾರ ಸಂಜೆ ಬಿಡುಗಡೆಯಾಗುವ ರಾಜ್ಯ ಹೆಲ್ತ್ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ 70 ಕ್ಕೂ ಹೆಚ್ಚು ಜನ ಸೊಂಕಿತರು ಪತ್ತೆಯಾಗುವ ಸಾದ್ಯತೆ ಇದೆ.
ಬೆಳಗಾವಿ ನಗರದಲ್ಲೂ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ,ಇಂದು ಸಂಜೆ ಬಿಡುಗಡೆಯಾಗುವ ಹೆಲ್ತ್ ಬುಲಿಟೀನ್ ಬೆಳಗಾವಿ ಜಿಲ್ಲೆಗೆ ಶಾಕ್ ನೀಡುವ ಎಲ್ಲ ಲಕ್ಷಣಗಳು ಕಂಡು ಬಂದಿವೆ.
ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿಗೆ ಇಂದಿನವರೆಗೆ 20 ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.ಆದ್ರೆ ನಿನ್ನೆ ಬಿಡುಗಡೆಯಾದ ಹೆಲ್ತ್ ಬುಲಿಟೀನ್ ನಲ್ಲಿ ಸಾವಿನ ಸಂಖ್ಯೆ 14 ತೋರಿಸುತ್ತಿದೆ.ಸಾವಿನ ಸಂಖ್ಯೆ ಬುಲಿಟೀನ್ ನಲ್ಲಿ ಸರಿಯಾಗಿ ಅಪಡೇಟ್ ಆಗುತ್ತಿಲ್ಲ,ಹೀಗಾಗಿ ಸಾವಿನ ಸಂಖ್ಯೆ ನಿಖರವಾಗಿ ತಿಳಿಯುತ್ತಿಲ್ಲ.
ಇಂದು ಒಂದೇ ದಿನ ಈ ಮಹಾಮಾರಿ ವೈರಸ್ ಸಂಜೆಯ ಬುಲಿಟೀನ್ ನಲ್ಲಿ ಸೊಂಕಿತರ ಸಂಖ್ಯೆಯಲ್ಲಿ ಶತಕ ಬಾರಿಸಬಹುದು,ಇಂದು ಒನ್ ಡೇ ಸೆಂಚ್ಯುರಿ ಆಗುವ ಸಾದ್ಯತೆಗಳೂ ಇವೆ ಎಂದು ನಂಬಲರ್ಹ ಮೂಲಗಳು ತಿಳಿಸಿದ್ದು ಕಿಲ್ಲರ್ ಕೊರೋನಾ ಸಂಚ್ಯುರಿ ಬಾರಿಸಿದ್ರೂ ಬಾರಿಸಬಹುದು ಎನ್ನುವ ಮಾತುಗಳು ಆರೋಗ್ಯ ಇಲ್ಲಾಖೆಯ ವಲಯದಲ್ಲಿ ಕೇಳಿಬರುತ್ತಿವೆ ಸಂಜೆ 7 ಗಂಟೆಯ ನಂತರ ಬಿಡುಗಡೆಯಾಗುವ ಹೆಲ್ತ್ ಬುಲಿಟೀನ್ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಲಿದೆ.
ಬೆಳಗಾವಿ ನಗರ ಮತ್ತು ಜಿಲ್ಲೆಯಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿ ಪೋಲೀಸರು ಮುಂಜಾಗೃತೆ ವಹಿಸಿದ್ದಾರೆ.ರಾತ್ರಿ 8 ಘಂಟೆಗೆ ಎಲ್ಲ ಅಂಗಡೀಕಾರರು,ವಾಹನ ಸವಾರರು ಮನೆಯಲ್ಲಿ ಇರಬೇಕು. 8 ಗಂಟೆಯ ಮೊದಲೇ ತಮ್ಮ ಅಂಗಡಿಗಳನ್ನು ಬಂದ್ ಮಾಡಿಕೊಂಡು 8 ಗಂಟೆಗೆ ಮನೆಗೆ ತಲುಪಬೇಕು,8 ಗಂಟೆಯ ನಂತರ ಯಾರೊಬ್ಬರಿಗೂ ಸುತ್ತಾಡಲು ಬಿಡುವದಿಲ್ಲ.ನಿಗದಿತ ಅವಧಿಯ ಬಳಿಕ ಜನ ಸಂಚಾರ,ವಾಹನ ಸಂಚಾರಕ್ಕೆ ಅವಕಾಶ ಇಲ್ಲ ಎನ್ನುವ ಕಟ್ಟುನಿಟ್ಟಿನ ಸಂದೇಶವನ್ನು ಹಿರಿಯ ಪೋಲೀಸ್ ಅಧಿಕಾರಿಗಳು ನಗರದ ಎಲ್ಲ ಪೋಲೀಸ್ ಠಾಣೆಗಳಿಗೆ ರವಾನಿಸಿದ್ದಾರೆ.
ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಪೋಲೀಸರು ಸಂಜೆ 6 ಗಂಟೆಯಿಂದಲೇ ವಾರ್ನಿಂಗ್ ಬೆಲ್ ( ಸೀಟಿ) ಬಾರಿಸಿ ಅಂಗಡಿಕಾರರಿಗೆ ಅಲರ್ಟ್ ಮಾಡುವ ಕಾರ್ಯ ನಿನ್ನೆ ಸಂಜೆಯಿಂದ ಬೆಳಗಾವಿ ನಗರದಲ್ಲಿ ಆರಂಭವಾಗಿದೆ.