
ಬೆಳಗಾವಿ ಉದ್ಯಮ ಬಾಗ ಪೋಲೀಸರು ಬೈಕ್ ಸವಾರರ ಮೇಲೆ ಲಾಠಿ ಬೀಸದೇ ,ದಯವಿಟ್ಟು ಮನೆಗೆ ಹೋಗಿ ಎಂದು ಕೈ ಮುಗಿಯುತ್ತಿರುವ ಅಪರೂಪದ ದೃಶ್ಯ
ಬೆಳಗಾವಿ-  ಮುಂಬೈಯಲ್ಲಿ ಸರಣಿ ಎನ್ ಕೌಂಟರ್ ಮಾಡಿ ದಯಾ ನಾಯಕ್ ರಾಷ್ಟ್ರದ ಗಮನ ಸೆಳೆದಂತೆ ,ಬೆಳಗಾವಿಯಲ್ಲಿ ಕೊರೋನಾ ಹರಡದಂತೆ ರಸ್ತೆಯ ಮೇಲೆ ಜಾಗೃತಿ ಮೂಡಿಸುವ ಚಿತ್ರ ಬಿಡಿಸಿ ದಯಾನಂದ ಎಂಬ ಸಿಪಿಐ ಈಗ ಎಲ್ಲರ ಗಮನ ಸೆಳೆದಿದ್ದಾರೆ.
ಮುಂಬೈಯಲ್ಲಿ ಸರಣಿ ಎನ್ ಕೌಂಟರ್ ಮಾಡಿ ದಯಾ ನಾಯಕ್ ರಾಷ್ಟ್ರದ ಗಮನ ಸೆಳೆದಂತೆ ,ಬೆಳಗಾವಿಯಲ್ಲಿ ಕೊರೋನಾ ಹರಡದಂತೆ ರಸ್ತೆಯ ಮೇಲೆ ಜಾಗೃತಿ ಮೂಡಿಸುವ ಚಿತ್ರ ಬಿಡಿಸಿ ದಯಾನಂದ ಎಂಬ ಸಿಪಿಐ ಈಗ ಎಲ್ಲರ ಗಮನ ಸೆಳೆದಿದ್ದಾರೆ.
ಉದ್ಯಮಬಾಗ ಸಿಪಿಐ ದಯಾನಂದ ಶೇಗುಣಸಿ ಅವರು ತಮ್ಮ ಠಾಣಾ ವ್ಯಾಪ್ತಿಯ ರಸ್ತೆಗಳಲ್ಲಿ ಕೊರೋನಾ ತುಂಬಾ ಡೇಂಜರ್ ,ಯಾರೊಬ್ಬರೂ ರಸ್ತೆಗೆ ಬರಬೇಡಿ,ಮನೆಯಲ್ಲೇ ಸುರಕ್ಷಿತವಾಗಿರಿ,ಎಂದು ರಸ್ತೆಯ ಮೇಲೆ ಕೊರೋನಾ ಚಿತ್ರ ಬಿಡಿಸಿದ್ದಾರೆ.
ಕೊರೋನಾ ಮಹಾಮಾರಿಯಿಂದ ಸಾರ್ವಜನಿಕರನ್ನು ಬಚಾವ್ ಮಾಡಲು ಪೋಲೀಸರು ಹಗಲು ರಾತ್ರಿ ಶ್ರಮಿಸುವದರ ಜೊತೆಗೆ ಕೊರೋನಾ ಸೊಂಕಿನಿಂದ ದೂರ ಇರುವ ವಿಧಾನಗಳ ಕುರಿತು ಜನಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.
ಸಿಪಿಐ ದಯಾನಂದ ಶೇಗುಣಸಿ ಅವರ ವಿನೂತನ ಜಾಗೃತಿ ಅಭಿಯಾನ,ಬೆಳಗಾವಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
		 
						
					 
						
					 
						
					