ಬೆಳಗಾವಿ- ಸೋಸಿಯಲ್ ಡಿಸ್ಟನ್ಸ್ ಕಾಪಾಟಿ ವ್ಯಾಪಾರ ಮಾಡ್ಕೊಳ್ಳಿ ಅಂತಾ ಪೋಲೀಸರು ಎಷ್ಟೇ ಹೇಳಿದ್ರೂ ಜನ ಕೇಳ್ತಾನೇ ಇಲ್ಲ,ಇಂದು ಬೆಳಿಗ್ಗೆ ಬೆಳಗಾವಿಯ ಹೋಲ್ ಸೇಲ್ ಫ್ರುಟ್ ಮಾರ್ಕೆಟ್ ನಲ್ಲಿ ಜನಜಂಗುಳಿಯೇ ಸೇರಿತ್ತು ಮಾಳ ಮಾರುತಿ ಠಾಣೆಯ ಪೋಲೀಸರು ಬಂದು ಲಾಠಿ ಬೀಸಿದ್ರು ಜನ ಓಡಿ ಹೋದ್ರು……
ಬೆಳಗಾವಿ ಜಿಲ್ಲೆಯಲ್ಲಿ 18 ಕೊರೊನಾ ಪ್ರಕರಣ ಪತ್ತೆಯಾದರೂ ಲಾಕ್‌ಡೌನ್‌ಗೆ ಜನ ಡೌಂಟ್ ಕೇರ್ ಅಂತೀದಾರೆ, ಗುಂಪುಗುಂಪಾಗಿ ಹಣ್ಣು ಖರೀದಿಯಲ್ಲಿ ತೊಡಗಿದವರಿಗೆ ಪೋಲೀಸರು ಹಣ್ಣಿನ ರುಚಿ ಸವಿಯಲು ಬಂದವರಿಗೆ ಲಾಠಿ ರುಚಿ ತೋರಿಸಿದ್ರು
ಬೆಳಗಾವಿ ಗಾಂಧಿನಗರದ ವೋಲ್‌ಸೇಲ್ ಹಣ್ಣಿನ ಮಾರುಕಟ್ಟೆಯಲ್ಲಿ ಬೆಳ್ಳಂ ಬೆಳಿಗ್ಗೆ ಮಾಳ ಮಾರುತಿ ಸಿಪಿಐ ಗಡ್ಡೇಕರ್ ತಮ್ಮ ಸಿಬ್ಬಂದಿ ಯೊಂದಿಗೆ ದಾಳಿ ಮಾಡಿ ಹೋಲ್ ಸೇಲ್ ಕ್ರಮ ಕೈಗೊಂಡರು
ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಹಣ್ಣಿನ ಮಾರಾಟದಲ್ಲಿ ತೊಡಗಿದ್ದ ವ್ಯಾಪಾರಸ್ಥರನ್ನು
ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು,ಆದ್ರೆ ಇದಕ್ಕೆ ಜನ ಡೋಂಟ್ ಕೇರ್ ಎಂದಾಗ
ಪೊಲೀಸರು ಲಾಠಿ ಬೀಸಿದರು ಜನ ಎದ್ದನೋ ಬಿದ್ದನೋ ಅಂತಾ ಓಡಿ ಹೋದ್ರು
ಇಂದಿನಿಂದ ಮೇ 3ರವರೆಗೆ ದೇಶಾದ್ಯಂತ ಲಾಕ್‌ಡೌನ್ ಇದ್ದು ಜನ ಕಟ್ಟುನಿಟ್ಟಾಗಿ ಲಾಕ್‌ಡೌನ್ ಪಾಲಿಸಬೇಕು ಅಂತಾ ಪೋಲೀಸರು ಮನವಿ ಮಾಡಿಕೊಂಡರು
ಮಾಳ ಮಾರುತಿ ಠಾಣೆಯ ಪೊಲೀಸರು ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿದ್ದಂತೆ ಹೋಲ್ ಸೇಲ್ ಫ್ರುಟ್ ಮಾರ್ಕೆಟ್ ನಲ್ಲಿ ಸೇರಿದ ನೂರಾರು ಜನ ಎದ್ದನೋ ಬಿದ್ದನೋ ಎಂದು ಓಡಿ ಹೋದ್ರು…