ಬೆಳಗಾವಿ- ಹುಬ್ಬಳ್ಳಿಯ ksrtc ನೌಕರನೊಬ್ಬ ಯಾವುದೋ ಸರ್ಕಾರಿ ಕೆಲಸಕ್ಕೆ ಬೆಳಗಾವಿಗೆ ಬಂದಿದ್ದ ಆತ ಸಿಬಿಟಿ ಬಸ್ ನಲ್ಲಿ ಪ್ರಯಾಣಿಸುತ್ತಿರುವಾಗ ಆತನ ಪಿಕ್ ಪಾಕೇಟ್ ಮಾಡಿದ ಇಬ್ಬರು ಚಾಲಾಕಿ ಕಳ್ಳರು ಆತನ ಪರ್ಸನಲ್ಲಿದ್ದ ಹಣದಿಂದ ಬಾರ್ ನಲ್ಲಿ ಮಜಾ ಮಾಡುತ್ತಿರುವಾಗ ಕಳ್ಳರನ್ನು ಎಪಿಎಂಸಿ ಪೋಲೀಸರು ಪತ್ತೆ ಮಾಡಿ ಕಳುವಾಗಿದ್ದ ಪರ್ಸನ್ನು ಹಣ ಸಮೇತ ಮರಳಿಸಿದ ಘಟನೆ ನಡೆದಿದೆ
ಮ್ಯಾಹ್ನ ಮೂರು ಘಂಟೆ ಹೊತ್ತಿಗೆ ಇಬ್ಬರು ಕಳ್ಳರು ksrtc ನೌಕರನ ಜೇಬಿಗೆ ಕತ್ತರಿ ಹಾಕಿ ಆತನ ಪರ್ಸ ದೋಚಿದ್ದರು ಅದು ಆತನಿಗೆ ಗೊತ್ತೇ ಆಗಿರಲಿಲ್ಲ ನಂತರ ರಾಮದೇವ ಹೊಟೇಲ್ ಹತ್ತಿರ ಚಹಾ ಕುಡಿದು ಬಿಲ್ ಕೊಡುವಾಗ ಪರ್ಸ ಕದ್ದಿರುವ ವಿಷಯ ಗೊತ್ತಾಗಿ ಆತ ಎಪಿಎಂಸಿ ಪೋಲೀಸ್ ಠಾಣೆಗೆ ಹೋಗಿ ದೂರು ಸಲ್ಲಿಸಿದ್ದ
ದೂರು ಸ್ವಿಕರಿಸಿ ಕಾರ್ಯಾಚರಣೆ ಆರಂಭಿಸಿದ CPI ಕಾಳಿ ಮಿರ್ಚಿ ಸಿವ್ಹಿಲ್ ಡ್ರೆಸ್ ನಲ್ಲಿ ರಾಮದೇವ ಹೊಟೇಲ್ ಏರಿಯಾದಲ್ಲಿರುವ ಎಲ್ಲ ಬಾರ್ ಆ್ಯಂಡ ರೆಸ್ಟೋರೆಂಟ್ ಗಳನ್ನು ಜಾಲಾಡಿಸಿದ್ದಾರೆ
ಕೊನೆಗೆ ಒಂದು ಬಾರಿನಲ್ಲಿ ಇಬ್ಬರು ಪಿಕ್ ಪಾಕೇಟ್ ಕಳ್ಳರನ್ನು ಕಾನ್ಟೇಬಲ್ ನೊಬ್ಬ ಗುರುತಿಸದ ನಂತರ ಅವರನ್ನು ಅಲ್ಲಿಯೇ ವಿಚಾರಿಸಿದಾಗ ksrtc ನೌಕರನ ಪರ್ಸ ಮತ್ತು ಪರ್ಸನಲ್ಲಿದ್ದ ನಾಲ್ಕು ಸಾವಿರ ಹಣ ಅದರಲ್ಲಿತ್ತು
ಇಬ್ಬರು ಚಾಲಾಕಿ ಕಳ್ಳರು ಪರ್ಸ ಕದ್ದು ಅದೇ ಹಣದಲ್ಲಿ ಪಾರ್ಟಿ ಮಾಡುತ್ತಿರುವಾಗ ಅವರನ್ನು ಪೋಲೀಸರು ಪತ್ತೆ ಮಾಡಿ ಕಳುವಾದ ಮಾಲನ್ನು ಮೆಳಿಸಿದ್ದಾರೆ
ಪರ್ಸ ಕದ್ದು ಬಾರ್ ನಲ್ಲಿ ಪಾರ್ಟಿ ಮಾಡುತ್ತಿದ್ದ ಇಬ್ಬರು ಕಳ್ಳರ ನಶೇ ಏರುವ ಮೊದಲೇ ಎಪಿಎಂಸಿ ಪೋಲೀಸರು ಅವರ ನಶೇ ಇಳಿಸಿದ್ದಾರೆ
ಪಿಕ್ ಪಾಕೇಟ್ ಆಗಿದೆ ಅಂದ್ರೆ ಪೋಲೀಸರು ಕಂಪ್ಲೇಂಟ್ ಮಾಡಿ ಹೋಗಪ್ಪ ಎಂದು ಹೇಳಿ ಕಳಿಸುವದು ಮಾಮೂಲು ಆದ್ರೆ ಎಪಿಎಂಸಿ ಪೋಲೀಸರು ಇದೇ ವಿಷಯವನ್ನು ಗಂಭೀರವಾಗಿ ಪರಗಣಿಸಿ ಕೇವಲ ಎರಡೇ ಎರಡು ತಾಸಿನಲ್ಲಿ ಬಸ್ ನಲ್ಲಿ ಕಳುವಾಗಿದ್ದ ಪರ್ಸನ್ನು ಪತ್ತೆ ಮಾಡಿ ಇಬ್ಬರು ಕಳ್ಳರನ್ನು ಬಂಧಸಿದ್ದಾರೆ
ಇಬ್ಬರು ಕಳ್ಳರು ಬಾರ್ ನಲ್ಲಿ ಫುಲ್ ಮಜಾ ಮಾಡಿದ್ದರು ಇಬ್ಬರು ಸೇರಿ ಎರಡು ಸಾವಿರಕ್ಕೂ ಹೆಚ್ಚು ಬಿಲ್ಲ್ ಮಾಡಿದ್ದರು ಬಿಲ್ ಕೊಡುವ ಮೊದಲೇ ಪೋಲೀಸರ ಕೈಗೆ ಸಿಕ್ಕಿಬಿದ್ದರುವದರಿಂದ ಪಾಪ ಆ ಬಾರ್ ಬಿಲ್ ಯಾರೂ ಕೊಡಲಿಲ್ಲ ಆದ್ರೆ ಬಸ್ ನಲ್ಲಿ ಪರ್ಸ ಕಳೆದುಕೊಂಡಿದ್ದ ksrtc ನೌಕರ ತನ್ನ ಪರ್ಸ ಮಾಲು ಸಮೇತ ಸಿಕ್ಕಿರುವದಕ್ಕೆ ಖುಷಿ ಪಟ್ಟರೆ ಬಾರ್ ಮಾಲೀಕ ಇಬ್ಬರು ಕಳ್ಳರಿಗೆ ಹಿಡಿಶಾಪ ಹಾಕಿದ
ಈ ಪ್ರಕರಣದಲ್ಲಿ ಕಭೀ ಖುಷಿ ಕಭೀ ಗಮ್ ಎನ್ನುಂತಾಗಿತ್ತು
ಚಿತ್ರದಲ್ಲಿರುವವರು ಇಬ್ಬರು ಪಿಕ್ ಪಾಕೇಟ್ ಕಳ್ಖರು ಅವರು ಹಿಡಿದಿರುವ ಪಾಟಿಯಲ್ಲಿ ಅವರ ಹೆಸರು ಮತ್ತು ವಿಳಾಸವಿದೆ ನೋಡಿ ..ಪ್ಲೀಜ್ ..