ಗೋಕಾಕ್ ತಾಲ್ಲೂಕಿನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗಳ ಗುಂಪೊಂದು ,ಗೋಕಾಕ್ ಸಿಪಿಐ ರಾಠೋಡ್ ಅವರು 15 ಲಕ್ಷ ರೂ ಲಂಚ ಪಡೆದ ಮೇಲೂ ಕಾಟ ಕೊಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಬೆನ್ನಲ್ಲಿಯೇ ಈಗ ಮತ್ತೊಂದು ಗುಂಪು ಬೆಳಗಾವಿಯಲ್ಲಿ ಪೋಟೋ ಬಿಡುಗಡೆ ಮಾಡಿದೆ.ಈ ನಡುವೆ 15 ಲಕ್ಷ ರೂ ಲಂಚದ ಆರೋಪ,ಮುಚ್ವಿ ಹಾಕುವ ಎಲ್ಲ ಪ್ರಯತ್ನಗಳು ನಡೆದಿದ್ದು,ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಆರೋಪಿಗಳ ನಡುವಿನ ಕಿತ್ತಾಟಕ್ಕೆ ಬ್ರೇಕ್ ಹಾಕಿ,15 ಲಕ್ಷ ರೂ ಲಂಚದ ಆರೋಪದ ಬಗ್ಗೆ ತನಿಖೆ ಮಾಡಿ ಖಾಕಿ ಗೌರವ ಉಳಿಸುವದು ಅಗತ್ಯವಾಗಿದೆ.
ಬೆಳಗಾವಿ-ಗೋಕಾಕ್ ನ ಮಂಜುನಾಥ ಮುರಕಿಬಾವಿ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.ಇದೀಗ ಬಬಲಿ ಹಾಗೂ ಮುರಕಿಬಾವಿ ಕುಟುಂಬದ ನಡುವೆ ಗುದ್ದಾಟಕ್ಕೆ ಕಾರಣವಾಗಿದೆ. ಇವತ್ತು ಮತ್ತೆ ಮಾದ್ಯಮಗಳ ಮುಂದೆ ಬಂದ ಮುರಕಿಬಾವಿ ಕುಟುಂಬಸ್ಥರು ಪೋಲಿಸರದ್ದೇನು ತಪ್ಪಿಲ್ಲ. ಬಬಲಿ ಕುಟುಂಬಸ್ಥರೇ ಕೊಲೆ ಮಾಡಿ ತಮ್ಮ ತಪ್ಪು ಮುಚ್ಚಿಕೊಳ್ಳಲು ಪ್ರತ್ನಿಸುತ್ತಿದ್ದಾರೆಂದು ಆರೋಪಿಸಿದರು.
ಗೋಕಾಕ್ ನ ಮಂಜುನಾಥ ಮುರಕಿಬಾವಿ ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ನಾವು ತಪ್ಪೇ ಮಾಡಿಲ್ಲ.ಪೊಲೀಸರೇ ನಮಗೆ ಕಿರುಕುಳ ನೀಡಿ ನಮ್ಮನ್ನು ಕೊಲೆ ಪ್ರಕರಣದಲ್ಲಿ ಪಿಟ್ ಮಾಡಿದ್ದಾರೆ ಎಂದು ಬಬಲಿ ಕುಟುಂಬ ಆರೋಪಿಸಿತ್ತು.ಹೀಗಾಗಿ ಸಹಜವಾಗಿಯೇ ಪೋಲಿಸರ ಮೇಲೆ ಅನುಮಾನ ಮಾಡಿತ್ತು. ಆದರೆ ಇದೀಗ ಕೊಲೆಯಾದ ಯುವಕನ ಕುಟುಂಬವೇ ಮಾದ್ಯಮಗಳ ಎದುರು ಬಂದು ಮಂಜುನಾಥನ ಕೊಲೆಗೆ ಬಬಲಿ ಕುಟುಂಬದ ಹೆಣ್ಣುಮಗಳ ಜೊತೆಗೆ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ನಮ್ಮ ಮಂಜುನಾಥನ ಕೊಲೆ ನಡೆದಿದೆ.ಇದಕ್ಕೆ ಸಾಕ್ಷಿಗಳು ನಮ್ಮ ಬಳಿ ಇವೆ ಎಂದು ಹೇಳಿದರು.
ಆದರೆ ನಮ್ಮ ಮನೆ ಮಗನನ್ನು ಅವರೇ ಕೊಲೆ ಮಾಡಿದ್ದಾರೆ, ನಮಗೆ ಹಣದ ಆಮಿಷ, ಜೀವದ ಭಯ ಹಾಕಿ, ಕೇಸ್ ವಾಪಸ್ ಪಡೆಯಲು ವತ್ತಾಯ ಮಾಡುತ್ತಿದ್ದಾರೆ, ಮೊನ್ನೆ ಅವರು ಸುದ್ದಿಗಾರರಿಗೆ ಹೇಳಿದ ವಿಷಯವೆಲ್ಲ ಸುಳ್ಳು, ಅವರು ಎಲ್ಲಾ ಅಪರಾಧ, ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಾರೆ,ಪ್ರಕರಣ ಹಿಂದೆ ಪಡೆಯದೆ ಹೋದರೆ, ನನ್ನ ಹಿಂದೆ ಮಂಜುಳಾ ಶಿಂದೆ ಎಂಬ ಹೈಕೋರ್ಟ್ ವಕೀಲರು ಇದ್ದಾರೆ,ಅವರಿಗೆ ಎಲ್ಲಾ ಮೇಲಾಧಿಕಾರಿಗಳು ಗೋತ್ತಿದ್ದಾರೆ, ನಿಮ್ಮನ್ನ ಸುಮ್ಮನೆ ಬಿಡೋಲ್ಲ ಅಂತಾ ಜೀವದ ಧಮಕಿ ಹಾಕುತ್ತಿದ್ದಾರೆ ಎಂದು ಮೃತನ ತಾಯಿ ಆರೋಪಿಸಿದ್ದಾರೆ.
ಇನ್ನೂ ಪೊಲೀಸರ ಮೇಲಿನ ಆರೋಪದ ಬಗ್ಗೆ ತನಿಖೆ ವೇಳೆ ಬಬಲಿ ಕುಟುಂಬ ಮಾಡಿದ ಎಲ್ಲ ಆರೋಪಗಳು ಸುಳ್ಳು ಎನ್ನುವುದು ಸಾಭೀತು ಆಗಬೇಕಿದೆ. ಅದೇನೆ ಇರಲಿ ಮೊದಲು ಪೋಲಿಸರ ಮೇಲೆ ಬಂದ ಆರೋಪ ಮರೆಮಾಚಿ ಇದೀಗ ಎರಡು ಕುಟುಂಬಗಳ ನಡುವಿನ ಕಿತ್ತಾಟಕ್ಕೆ ಕಾರಣವಾಗಿದೆ.ಎರಡು ಕುಟುಂಬಗಳ ನಡುವೆ ಕಿತ್ತಾಟ ನಡೆಯುತ್ತಿದ್ದರೂ ಖಾಕಿ ಮೌನ ಆಗಿರುವದೇಕೆ ಎನ್ನುವ ಪ್ರಶ್ನೆ ಎದುರಾಗಿದೆ.