ಬೆಳಗಾವಿ-ಎಸಿಬಿ ಅಧಿಕಾರಿ ಎಂದು ಧಮಕೀ ಹಾಕಿ,ಐದು ಲಕ್ಷ ರೂ ಡಿಮ್ಯಾಂಡ್ ಮಾಡಿದ ಇಬ್ಬರು ಖಿಲಾಡಿಗಳನ್ನು ಬಂಧಿಸುವಲ್ಲಿ ಬೈಲಹೊಂಗಲ ಪೋಲೀಸರು ಯಶಸ್ವಿಯಾಗಿದ್ದಾರೆ.
ಬೈಲಹೊಂಗಲದ ಕೃಷಿ ಅಧಿಕಾರಿಯೊಬ್ಬರಿಗೆ ಫೋನ್ ಮಾಡಿ ನಾನು ಎಸಿಬಿ ಅಧಿಕಾರಿ ಮಾತಾಡೋದು,ನೀನು ಬೆಳಗಾವಿಯಲ್ಲಿ ಬಹಳ ಆಸ್ತಿ ಮಾಡಿದ್ದೀಯಾ,ನಾಳೆ ದೊಡ್ಡ ಪ್ರಾಬ್ಲಂ ಆಗುತ್ತೆ,ಐದು ಲಕ್ಷ ರೂ ಕೊಟ್ಟು ಸೆಟಲ್ಮೆಂಟ್ ಮಾಡಕೋ ಎಂದು ಧಮಕಿ ಹಾಕಿದ ಇಬ್ಬರು ಸೆಟಲ್ಮೆಂಟ್ ಗಿರಾಕಿಗಳನ್ನು ಬೈಲಗೊಂಗಲ ಪೋಲೀಸರು ಜೈಲಿಗೆ ಕಳಿಸಿ ಪರ್ಮನೆಂಟ್ ಸೆಟಲ್ಮೆಂಟ್ ಮಾಡಿಸಿದ್ದಾರೆ.
ಆರೋಪಿತರಾದ ಬೈಲಹೊಂಗಲ ತಾಲ್ಲೂಕಿನ ಸಾ ದೇಶನೂರ,ಹಾಲಿ ವಣ್ಣೂರ ಗ್ರಾಮದ ವಿಶಾಲ ಭಾಂವೆಪ್ಪಾ ಪಾಟೀಲ,ಬೆಂಗಳೂರಿನ ಶ್ರೀನಿವಾಸ ತಂದೆ ಅಶ್ವತ್ಥನಾರಾಯಣ ಎಂಬಾತರನ್ನು ಬೈಲಗೊಂಗಲ ಪೋಲೀಸರು ಬಂದಿಸಿದ್ದು ಸಿಪಿಐ ಸಾತೇನಹಳ್ಳಿ ಅವರು ತನಿಖೆ ಮುಂದುವರೆಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ